ಮಂಗಳವಾರ, ಮೇ 31, 2011

ಕಾರಂಜಿ ಕೆರೆಯಲ್ಲಿ ನವಿಲಿನ ಪ್ರಣಯ ನರ್ತನದ ಕಣ್ಣಾಮುಚ್ಚಾಲೆ !!!!







ನಾನೇ .......ರಾಜಕುಮಾರ !!!!!

ಸ್ವಲ್ಪ ದಿನಗಳ ಹಿಂದೆ ಮೈಸೂರಿನಲ್ಲಿ ಕಾರಂಜಿ ಕೆರೆಗೆ  ಪಕ್ಷಿ ವೀಕ್ಷಣೆಗೆ ಹೋಗಿದ್ದೆ. ಅಲ್ಲಿ ನನಗೆ ಬೋನಸ್ ಆಗಿ ಈ ನವಿಲು ರಾಜಕುಮಾರ ಪ್ರಣಯ ನರ್ತನ ಮಾಡಿ ಮನಸೆಳೆದ , ಆ ನವಿಲಿನ   ನಲಿವಿನ ನಾಟ್ಯ ದೃಶ್ಯಗಳು  ಮನಸೆಳೆದವು , ನಿಮ್ಮೊಂದಿಗೆ  ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇನೆ ಬನ್ನಿ  ಆನಂದಿಸಿ.ನಿಮಗೆ ಸ್ವಾಗತ.                                                                       
ಎಲ್ಲಿರುವೆ??????  ಮನವ ಕಾಡುವ ರೂಪಸಿಯೇ ........!!!!
ಬಾ ನಲ್ಲೆ.... ಬಾ ನಲ್ಲೆ.... ಮಧುಚಂದ್ರಕೆ ........!!!!

ಎಂದೆಂದೂ ನಿನ್ನನು ಮರೆತು .........ನಾನಿರಲಾರೆ ......!!!
ಬಾ ಚಕೋರಿ ,ಬಾ ಚಕೋರಿ ಚಂದ್ರ ಮಂಚಕೆ...........!!!!

ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ .............!!!!
ಕೆಂಪಾದವೋ ಎಲ್ಲ ಕೆಂಪಾದವೋ ............!!!!

ಈ ಚೆಲುವು ಒಲವು ನಿನಗಾಗಿ ಪ್ರಿಯೆ !!!
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ................!!!!!
ಬಾರೆ ಬಾರೆ ಚಂದದ ಚೆಲುವಿನ ತಾರೆ .........!!!!

ನಮ್ಮೂರ ಮಂದಾರ ಹೂವೆ ..........!!!!!!
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು............!!!!!!
ನಿನ್ನ ಪ್ರೀತಿ ನರ್ತನಕ್ಕೆ ಹಾಗು  ಹಾಡುಗಳಿಗೆ ನಾಚಿ ನೀರಾದೆ ಓ ನಲ್ಲಾ .........!!!!

ಮಂಗಳವಾರ, ಮೇ 24, 2011

ಇತಿಹಾಸದೊಡನೆ ಕುದುರೆ ಸವಾರರ ಕಣ್ಣಾ ಮುಚ್ಚಾಲೆ!!!




ಸುಮಾರು ವರ್ಷಗಳ ನೆನಪನ್ನು ಇಲ್ಲಿ ಹರಡಿದ್ದೇನೆ. ಅದೊಂದು ದಿನ ಭಾರತೀಯ ಸೈನಿಕ ದಳದ ಒಂದು ತುಕಡಿ ಕುದುರೆ ಏರಿ  ಇತಿಹಾಸದಲ್ಲಿ  "ಶ್ರೀ ರಂಗ ಪಟ್ಟಣ" ದಿಂದ "ಸಾವನ ದುರ್ಗ"ಕ್ಕೆ ಯುದ್ದ ಮಾಡಲು ತೆರಳಿದ್ದ  ಹಾದಿಯಲ್ಲಿ ಮತ್ತೊಮ್ಮೆ ಸಾಗಿತ್ತು. ಇತಿಹಾಸದ ಹಾದಿಯಲ್ಲಿ ಮತ್ತೊಮ್ಮೆ ಸಾಗಿ ಹಳೆಯ  ನೆನಪನ್ನು  ಮೂಡಿಸಲು ಸಫಲ ವಾಯಿತು. ಇದರ ಅಂಗವಾಗಿ ಒಂದು ಸಮಾರಂಭ ಅಂದು ಶ್ರೀ ರಂಗ ಪಟ್ಟಣ ದಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಕುದುರೆಗಳ ಕಸರತ್ತು, ಕವಾಯಿತು ನಡೆದ ನೆನಪು ನಿಮಗಾಗಿ .
ಇತಿಹಾಸದ ನೆನಪಿಗಾಗಿ  ಸೈನಿಕ ಪಡೆಯ  ಶಿಸ್ತಿನ ಸಮಾವೇಶ.
ಇತಿಹಾಸ ಅರಸಿ ಬಂದವರು ನಾವು !!!
ಗತ ಇತಿಹಾಸದ ನೆನಪನ್ನು ಮೂಡಿಸಿದ ಕುದುರೆಗಳ  ದಂಡಿನ ಸರದಾರರು !!!
ನನ್ನ ದೇಶದ ಇತಿಹಾಸ ನನಗೆ ಹೆಮ್ಮೆ!!!!
ನಾವು ಯಾರಿಗೂ ಕಡಿಮೆ ಇಲ್ಲ !!!
ಗತಿಸಿದ ಇತಿಹಾಸದತ್ತ ನನ್ನ ಗುರಿ !!!
ಕಿತ್ತೂರು ಚೆನ್ನಮ್ಮನೋ!!!ಜಾನ್ಸಿ ಲಕ್ಷ್ಮಿ ಬಾಯಿಯೂ !!!!
ಕುದುರೆ ಆಟದ ಗಮ್ಮತ್ತು!!!
ಯಾವೂರವ್ವ !!! ಇವ ಯಾವೂರವ್ವ !!! ಎನ್ಚಂದ  ಕಾಣುಸ್ತಾನೆ >>....!!!!ಅಂದಿತ್ತು ಅಜ್ಜಿ!!!!

ಶುಕ್ರವಾರ, ಮೇ 20, 2011

ಹಸಿರ ಗಿರಿಯ ಮಡಿಲಲ್ಲಿ . ನಿಸರ್ಗದ ಕಣ್ಣಾ ಮುಚ್ಚಾಲೆ !!!!


ಕರೀಘಟ್ಟದ  ದೇವಾಲಯ ದರ್ಶನ
ಕರೀ ಘಟ್ಟ ಬೆಟ್ಟ ಶ್ರೀ ರಂಗ ಪಟ್ಟಣದ ಸಮೀಪ ಇರುವ ಒಂದು ಸುಂದರ ತಾಣ. ಇಲ್ಲಿನ ಸೊಬಗನ್ನು  ಚಿತ್ರೀಕರಿಸಲು  ಹಲವಾರು ಭಾಷೆಯ ದಿಗ್ಗಜರು ಹಾತೊರೆಯುತ್ತಾರೆ. ಇಲ್ಲಿ ಕನ್ನಡ, ತಮಿಳು , ತೆಲಗು, ಹಿಂದಿ, ಇಂಗ್ಲೀಶ್, ಫ್ರೆಂಚ್, ಭಾಷೆಯ ಹಲವಾರು ಚಲನ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ  , ರಾಜ್ಕುಮಾರ್ , ಅಮಿತಾಬ್, ರಜನಿಕಾಂತ್ ,ಸೇರಿದಂತೆ ಬಹಳಷ್ಟು ಸಿನಿಮಾ ತಾರೆಯರುಈ ತಾಣದಲ್ಲಿ   ಅಭಿನಯಿಸಿ, ನರ್ತಿಸಿದ್ದಾರೆ ಬನ್ನಿ ನಿಮಗಾಗಿ ಕೆಲವು ದೃಶ್ಯಗಳು ಇಲ್ಲಿವೆ. ನೋಡಿ ಆನಂದಿಸಿ.
ಹಸಿರ ಸಿರಿಯ ಸೊಬಗು. 
ಪರಿಸರಕ್ಕೆ ನನ್ನ ಕೊಡುಗೆ ಇದು ಎನ್ನುತ್ತಿದೆಈ  ಗಿಡ!!!
ಯಾವ ಕಲಾವಿದನ ಕಲ್ಪನೆ ಇದು!!
ಹಸಿರ ಬೆಟ್ಟದಿ ಸಾಗಿತ್ತು  ಅಂಕು ಡೊಂಕಿನ ಹಾದಿ!!!!
ಈ ಬೆಟ್ಟದಿಂದ ಆ ಬೆಟ್ಟದ ನೋಟ !!![ ಪಾಂಡವಪುರದ ಕುಂತಿ ಬೆಟ್ಟ ]
 ಇದು ಬೆಟ್ಟ ಅದು ಬೆಟ್ಟವೋ ....!!! ಕುಂತಿ ಬೆಟ್ಟ [ಪಾಂಡವ ಪುರ]

ಸೋಮವಾರ, ಮೇ 16, 2011

ಗಣಪತಿ ಆಡಿದ ಕಣ್ಣಾಮುಚ್ಚಾಲೆ !!! ಛಾಯಾಚಿತ್ರಗಳಿಗೆ ಗಣಪತಿ ನೀಡುವ ಸ್ಫೂರ್ತಿ.


ನಮಸ್ಕಾರ "ನಿಮ್ಮೊಳಗೊಬ್ಬ ಬಾಲು" ವಿನ ಹೊಸ ಬ್ಲಾಗಾವತಾರ !!! ಹೌದು ನನ್ನ ಇಷ್ಟದ ಛಾಯಾಚಿತ್ರಗಳಿಗಾಗಿ  ಒಂದು ಬ್ಲಾಗಿನ ಅವಶ್ಯಕತೆ ಕಂಡುಬಂದಿದ್ದು.ಗೆಳೆಯ "ಇಟ್ಟಿಗೆ ಸಿಮೆಂಟು"  ಬ್ಲಾಗಿನ  ಪ್ರಕಾಶ್ ಹೆಗ್ಡೆ ಅವರ  ಸಲಹೆ ಇಂದ . ಕ್ಯಾಮರ ಬದಲಾವಣೆ ಆಯ್ತು ನಿಮ್ಮದೇ ಛಾಯಾಚಿತ್ರಗಳ ಬಗ್ಗೆ ಒಂದು ಬ್ಲಾಗ್ ಮಾಡಿ ಅಂದ ಮಾತುಗಳು ಈ ಬ್ಲಾಗಿಗೆ ಸ್ಫೂರ್ತಿ.ನಿಮ್ಮೆಲ್ಲರ ಪ್ರೋತ್ಸಾಹ ಇರಲಿ.                                        ಛಾಯಾ ಚಿತ್ರಗಳು ಅಂದ್ರೆ ನನಗೆ ಜ್ಞಾಪಕಕ್ಕೆ ಬರೋದು "ಗಣಪತಿ" , ಎಂತಹ ದೇವರೂ ಅಂತೀರಾ  !!!! ತುಂಬಾ ಫೋಟೋಗ್ರಾಫರ್  ಫ್ರೆಂಡ್ಲಿ , ಕಲಾವಿದರ ಕಲ್ಪನೆಗೆ ಮೆರುಗು ನೀಡುವ ಗಣಪತಿ ಎಲ್ಲಾ ದೇವರನ್ನು ಹಿಂದೆ ಹಾಕಿಬಿಡುತ್ತಾನೆ. ಯಾವುದೇ  ಪ್ರಾಕಾರದ ಕಲಾವಿದನನ್ನು, ಕೇಳಿನೋಡಿ ಅವರ ಕಲೆಯಲ್ಲಿ ಗಣಪತಿ ಅರಳಿಸುವಾಗ ಅವರದೇ ಸ್ವಂತಿಕೆ ಮೂಡಿಸಿ ಸಂತಸ ಪಡುತ್ತಾರೆ. ಬನ್ನಿ ಕೆಲವು ಗಣಪತಿಯ ಅಪರೂಪದ ಚಿತ್ರಗಳನ್ನು ನೋಡೋಣ.