ಬುಧವಾರ, ಜೂನ್ 27, 2012

ಹೀಗೊಬ್ಬ ಪುಸ್ತಕ ಪ್ರೇಮಿ!!ಅಂಕೆ ಗೌಡರ ವಿಸ್ಮಯ ಪುಸ್ತಕ ಲೋಕದೊಳಗೆ ನೆರೆದಿತ್ತು ಬ್ಲಾಗಿಗರ ದಂಡು.!!

ಪುಸ್ತಕದ ಆಲಯದಲ್ಲಿ ಜ್ಞಾನ ದಾಹಿಗಳ ಹಿಂಡು

ಕಳೆದ ಶನಿವಾರ ಬ್ಲಾಗ್ ಗೆಳೆಯರ ಗುಂಪು ಬೆಂಗಳೂರಿನಿಂದ ಆಚೆ ಬರಲು ಮನಸ್ಸು ಮಾಡಿ , ಶ್ರೀ ರಂಗ ಪಟ್ಟಣದೆಡೆಗೆ ಹೊರಟಿತ್ತು. ಹೊರಟ ತಂಡಕ್ಕೆ ತಾವು ಎಲ್ಲಿಗೆ   ಹೊರಟು, ಏನು ನೋಡುತ್ತೇವೆ ಎನ್ನುವ ಸರಿಯಾದ ಸ್ಪಷ್ಟ  ಮಾಹಿತಿ ಇರಲಿಲ್ಲ. ಆದರೂ ಬರಲಿದ್ದ  ತಂಡಕ್ಕೆ ಒಂದು ಗ್ರಂಥಾಲಯಕ್ಕೆ ಭೇಟಿ ಅಂತಾ ಅಷ್ಟೇ ಹೇಳಲಾಗಿತ್ತು. ಗ್ರಂಥಾಲಯ ಅಂದರೆ ಸುಮಾರು ಕೆಲವು ಪುಸ್ತಕಗಳ ಸಂಗ್ರಹ ಇರುತ್ತೆ , ಹೀಗೆ ಹೋಗಿ ಹಾಗೆ ಬಂದು ಬೇರೆ ಪ್ರದೇಶ ನೋಡ ಬಹುದು ಎನ್ನುವ ಕಲ್ಪನೆ ಬಹಳಷ್ಟು ಜನಕ್ಕೆ ಇತ್ತು. ಹಾಗೆ ಹೊರಟ ತಂಡಹೊರಟಿದ್ದು , ಪಾಂಡವಪುರ ತಾಲೂಕಿನ ಹರಳಳ್ಳಿಯ ವಿಶ್ವೇಶ್ವರ ನಗರ ಸಮೀಪ ಇರುವ " ಅಂಕೆ ಗೌಡರ   ಪುಸ್ತಕದ ಮನೆಗೆ" .
ಮಂಡ್ಯಾ ಜಿಲ್ಲೆ ಜನಗಳು ಒರಟರು , ಸಂಸ್ಕೃತಿ ಅರಿಯದವರೂ ಅನ್ನುವ ಜನರಿಗೆ ಸವಾಲ್ ಎಸೆದು ಸೆಡ್ಡು ಹೊಡೆದು ಮಂಡ್ಯಾ ಜಿಲ್ಲೆ ಜನ ಹೀಗೂ  ಉಂಟು ಅನ್ನುವ ಸಂದೇಶ  ಸಾರುತಿಹರು.ಬನ್ನಿ ನಮ್ಮ ಪುಸ್ತಕ ಸಾಮ್ರಾಟ ಅಂಕೆ ಗೌಡರ  ಲೋಕಕ್ಕೆ ಹೋಗೋಣ .ನನಗೆ ಸುಮಾರು ಎಂಟು ವರುಷಗಳಿಂದ  ಪರಿಚಯ ವಿರುವ ಇವರು ಮೃದುಭಾಷಿ,ಸಜ್ಜನ.   .ಸ್ವಾಮೀ!!! ಒಬ್ಬ ವ್ಯಕ್ತಿ ಎಷ್ಟು ಪುಸ್ತಕ ಸಂಗ್ರಹಿಸ ಬಹುದು??ಹವ್ಯಾಸಕ್ಕಾಗಿ  ಗಳಿಸಿದ ಹಣವನ್ನು ಎಷ್ಟು ಸುರಿಯ ಬಹುದು??  ಇಂತಹ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ??ಇದಕ್ಕೆ ಉತ್ತರ ಈ  ಅಂಕೆ ಗೌಡರುಸಾಧಿಸಿರುವ  ಈ ಪುಸ್ತಕ ಲೋಕ.ಈ ಪುಸ್ತಕದ ಮನೆ ಬಗ್ಗೆ ನನ್ನ ಇನ್ನೊಂದು ಬ್ಲಾಗ್ '' ನಿಮ್ಮಳಗೊಬ್ಬ ಬಾಲು" ನಲ್ಲಿ ಲೇಖನ ಪ್ರಕಟಿಸಿದ್ದೆ  ಲಿಂಕ್ ಇಲ್ಲದೆ ನೋಡಿ http://nimmolagobba.blogspot.in/2010html /08/blog-post_16.ಅದರಲ್ಲಿ ಬಹಳಷ್ಟು ವಿಚಾರಗಳು ಬ್ಲಾಗ್ ಮಿತ್ರರ ಮನಸೆಳೆದಿದ್ದವು.ಬನ್ನಿ ಬ್ಲಾಗಿಗರ ಪುಸ್ತಕದ ಮನೆಯ ಚಟುವಟಿಕೆ ಚಿತ್ರಣ ನೋಡೋಣ
ವಾಹ್ ಇದೇನ್ ಸಾರ್ ಇದೂ ...........!!!
ಹೀಗೂ ಉಂಟೆ .........!!! ಪುಸ್ತಕ ಸಾಗರದ ಮದ್ಯೆ  ಹೊರಟ ಬ್ಲಾಗಿಗರ ಉದ್ಘಾರ
ತಾಳಿ ಈ ಜಾಗದ ವಿಡಿಯೋ ತೆಗೆಯೋಣ , ....!!!
ಪುಸ್ತಕದ ಮದ್ಯೆ ನವ ದಂಪತಿಗಳ  ಸಲ್ಲಾಪ
ಬಾ ಜೊತೆ ಜೊತೆಯಾಗಿ ಓದೋಣ .......!!!! ಜ್ಞಾನ ಜ್ಯೋತಿ ಬೆಳಗೋಣ.
ವಿಸ್ಮಯ ಪುಸ್ತಕ ಲೋಕದ ವಿಹಾರ , ವಿವಿಧ ಭಾವಗಳ ಅನಾವರಣ.
ಬನ್ನಿ ಸ್ವಲ್ಪ ಆತ್ಮೀಯವಾಗಿ ಕುಳಿತು ಮಾತಾಡೋಣ.........!!!
ಬನ್ನಿ ನೆನಪಿನ ಬುತ್ತಿ ಕಟ್ಟೋಣ ಅಂದ್ರೂ ಕೆಲವು ಛಾಯಾಗ್ರಾಹಕರು ........!!
ಮನ ತುಂಬಿದ ಭಾವನೆಗಳು ಮಾತಾಗಿ ಹೊರಬಂದ ಸಮಯ........11
ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಪುಟ್ಟ ಕಾಣಿಕೆ ......!!!
ಪುಸ್ತಕದ ಮನೆಯಲ್ಲಿ  ಕಂಡ  ಜ್ಞಾನದ ಭಂಡಾರ
ಇಷ್ಟೊಂದು ಪುಸ್ತಕ ಸಂಗ್ರಹಿಸಿದ ಇವರ ಬಗ್ಗೆ ತಿಳಿಯೋಣ ,,,,,,,,,,!!!
ಇವರ ಬಗ್ಗೆ ವಿಕಿಪಿಡಿಯಾ ದಲ್ಲಿ ಬರಬೇಕೂ , ವಿಶ್ವಕ್ಕೆ ಇವರ ವಿಚಾರ ತಿಳಿಸುವೆ ..............!!!
ನಮ್ಮಿಬ್ಬರಿಗೆ ಈ ಲೋಕವೇ ಚಂದಾ , ಇದೆ ಮಹದಾನಂದಾ ....!!!
 ಪುಸ್ತಕದ ಮನೆ  ಒಡೆಯನಿಗೆ ನವ  ದಂಪತಿಗಳ  ಮೆಚ್ಚುಗೆ ಮಾತು.....!!
ಏನ್ ಹೇಳಲಿ ಇವರ ಬಗ್ಗೆ  ...!!!
ಏನ ಹೇಳಲಿ  ...................................ನಾ !!!!!!!!!!!ಮನ ತುಂಬಿದೆ ನನಗೆ.

ಬಾಳ್  ಚಲೋ ಜಾಗ ............ನ ಬೆರಗಾದಿ  ನೋಡ್ರಲಾ ................!!!
ಈ ಜಾಗ ನನಗೆ  ಸಂತಸ ತಂದಿದೆ ......!!!!!!!!!
ಇದೊಂದು ಜ್ಞಾನದ  ಬೀಡು ...........!!!!!!!!!!!!!
ನಮ್ಮೆಲ್ಲರ ಪ್ರೀತಿ ನಿಮಗೆ ಸಾರ್ ............!!!!
ನಾ ಕಂಡ ಒಂದು ಅದ್ಭುತ ಲೋಕ ..........!!!
ನೆನಪಿಗಾಗಿ  ಒಂದು  ಚಿತ್ರ ಇರ್ಲಿ.
ನಾವೆಲ್ಲಾ ಇಲ್ಲಿ ಸೇರಿದ್ವಿ ಅನ್ನೋ ನೆನಪು..............ಎಂದಿಗೂ ಅಮರವಾಗಿರಲಿ.
ಯಾವುದೋ ಲೋಕದಿಂದ ಹೊರಗೆ ಬಂದ ಆ ಕ್ಷಣ ................!!!!
ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ  ವ್ಯಕ್ತಿಗೆ  ಸಹಾಯ ಮಾಡಲು ನಿಮಗೆ ಇಷ್ಟ ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು.

ಭಾನುವಾರ, ಜೂನ್ 24, 2012

ಕರಿಘಟ್ಟದಲ್ಲಿ ದಲ್ಲಿ ಬ್ಲಾಗರ್ಸ್ ಕಣ್ಣಾಮುಚ್ಚಾಲೆ.!!!! ಇವರೂ ತುಂಬಾ ಕೀಟಲೆ ಜನ ಕಂಡ್ರೀ !!!!!!!

ಕಳೆದ ಶನಿವಾರ ಶ್ರೀ ರಂಗ ಪಟ್ಟಣ ಸಮೀಪ "ಕರಿಘಟ್ಟ "ದಲ್ಲಿ ಕನ್ನಡ ಬ್ಲಾಗ್  ಮಿತ್ರರ ಸಂತೆ ನೆರೆದಿತ್ತು. ಬೆಳಗಿನ ಕಾರ್ಯಕ್ರಮದಲ್ಲಿ  ಜ್ಞಾನ ಸಂಪಾದಿಸಿ ಮಧ್ಯಾಹ್ನ ಊಟದ ನಂತರ ಹರಟೆ , ಮಾತುಕತೆ, ತರಲೆ, ಆಟ , ತುಂಟಾಟ ಇದೆಲ್ಲಾ ನಡೆಯಿತು.ತರಲೆ ತಾಪತ್ರಯದ ಒಂದು ಜ್ಹಲಕ್ ಇಲ್ಲಿದೆ. ಇಲ್ಲಿರುವ ಶೀರ್ಷಿಕೆ ಹಾಸ್ಯಕ್ಕಾಕಿ ಮಾತ್ರ , ಯಾರು ವಯಕ್ತಿಕವಾಗಿ ತೆಗೆದುಕೊಳ್ಳ ಬೇಡಿ ಹಾಗಿದ್ರೆ ತಡ ವೇಕೆ ಬನ್ನಿ ತರ್ಲೆ ಮಾಡೋಣ.
ಬೆಂಗಳೂರ್ ನಿಂದ ನಗೆ ಬಾಂಬುಗಳನ್ನು ಹೊತ್ತು ತಂತು ಈ ಬಸ್ಸು 
ಚಿಕ್ಕವಳಿದ್ದಾಗ ಎತ್ತಿನ ಗಾಡಿಯ ನೊಗದ ಮೇಲೆ ಹೀಗೆ ಕೂರ್ತಿದ್ದೆ  ಗೊತ್ತಾ !!



ಮಧ್ಯಾಹ್ನ ಊಟ ಆದ್ಮೇಲೆ ಉರಿ  ಬಿಸಿಲಲ್ಲಿ ನಡೆಯೋದು ಒಳ್ಳೇದಂತೆ !!!
ಉರಿ ಬಿಸಿಲಿನ ನಡಿಗೆಯಲ್ಲಿ ಅರಳಿದ ನಗು !!! ಒಂತರಾ ಕ್ಯಾಟ್ ವಾಕು ಕಣ್ರೀ >>>>>>
"ನಮ್ಮ ನಡಿಗೆ ನಗುವಿನೆಡೆಗೆ "ಅಂತಾ ಬಂದರೂ ಸಾರ್ ಬಿಸಿಲಿಗೆ ಸವಾಲ್ ಹಾಕಿ.
ರೀ ಯಾಕ್ರೀ ಎಂಗೈತೆ ಮೈಗೆ ..............!!!!!
ಏನ್ ಮಾಡೋಣ ಪ್ರಕಾಶಣ್ಣ ,  ಏನ್ ಮಾಡ್ಸೋದು ........!!!
ಮೂಟೆ ಹೊತ್ತ ಹುಡುಗನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ......!!
ಮೂಟೆ ಒಳಗಡೆ ಏನಿದೆ ಗುರು ....ಅಂದ್ರೂ ಗಿರೀಶ್
ಬಿಸಿಲ ದಾರಿಯಲ್ಲಿ  ಸಾಗೋಣ ಬಾ ಗೆಳತಿ .........!!
ಭಕ್ತಿಯಿಂದ ಬಿಸಿಲ ನಡಿಗೆ ನಡೆದರೆ ಒಳ್ಳೇದು ಗೊತ್ತ ....!!!

ನೀಮ್ಮ ಆಟ ಯಾವಾಗ ?? ನಮಗೆ ನಿದ್ದೆ ಬರಲಿಕ್ಕೆ  ಉಂಟೂ ......
ಪರೀಕ್ಷೆಗೆ  ಕಷ್ಟಪಟ್ಟು ಓದೋದು ಹೀಗೆ ಸಾರ್ ......!! ಪರಿಕ್ಷಾಸನ  ಅಂತಾ ಹೇಳೋಣ ಆಲ್ವಾ...!!!
ಈ ಗಂಡಸರನ್ನು ಬಕರಾ ಮಾಡೋದು ಹ್ಯಾಗೆ ......???,
ಚಿತ್ರ ಬೇಟೆಗೆ ಹೊಂಚು ............................!ಇಲ್ಲದಿದ್ದರೆ ಸಂಚು 
ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಾಮ್ಮೂ .............!!!
"ಹಲ್ಕಟ್............ನಿಂದಾ ಮೂಡುವುದು ಆನಂದ  "  ಗುರುಗಳ ಮುಖದಲ್ಲಿ ಮೂಡಿದ ಜ್ಞಾನದ ಬೆಳಕು ....!!!
ಸರ್ವಂ ರಂಜಿತಾನಂದಂ .............ಭವೇತ್ 
ಎಂಗದೆ ಸ್ವಾಮ್ಗೋಳ  ಗೆಟ್ಟಪ್ಪು..........!!! ನಿಮ್ಮ ಭವಿಷ್ಯ ನನ್ನ ಕೈಲಿ.
ಹಲ್ಕಟ್ ವಿಧ್ಯೆ  ಬೊದಿಸಿದ ಸ್ವಾಮೀ ಚಿತ್ರ ತೆಗೆಯೋ ಸ್ಪರ್ಧೆ .....!!!
ಶಿವೂ ಕರೆದರೂ......................... ಆಟಕ್ಕೆ ,
ಹಣೆಗಳ ಮಧ್ಯೆ ಸಿಕ್ಕಿದ ಚೆಂಡಿನ ಗತಿ .............???
ಮನೇಲೂ  ಈ ತರ  ಚೆಂಡಿನ ಆಟ ಆಡಿದ್ರೆ ಚೆನ್ನಾ ಆಲ್ವಾ ???
ಹಾಲೂ ಜೇನು ಒಂದಾದ ಹಾಗೆ ...............ನನ್ನಾ ನಿನ್ನಾ ಜೀವನ.
ತಮಾಷೆ ಮಾಡೋ ಟೈಮಾ ಇದು ...........ಬಾಲ್ ಬಿಳುತ್ತೆ ಅಷ್ಟೇ.
ಏ  ಈ ಚೆಂಡು ಬೀಳಿಸ್ ಬಾರ್ದು ಗೊತ್ತಾ ...........
ರೀ ಬಳ್ಳಾರೀಲಿ ಈ ತರ ಬಾಲ್ ಸಿಕ್ತಾವಾ ?????
ನಮ್ಮಿಬ್ಬರ ನಡುವೆ  ಈ ಬಾಲಿನ ಹಂಗು ಯಾಕೆ ????
ಹ ಹ ಹ ......ಯಾಕೆ ನನ್ನ ನೋಡೋಕೆ ಭಯನಾ ????
ರೀ ಫೋಟೋ ತೆಗೀಬೇಡಿ ಪ್ಲೀಸ್ 
ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು




ಯಾವ ಜನ್ಮದ ಮೈತ್ರೀ ..... ಈ ಜನ್ಮದಲಿ ಬಂದೂ ನಮ್ಮಿಬ್ಬರನ್ನು  ...............ಹೀಗೆ ಆಡಿಸಿಹುದೋ ಕಾಣೆ !!
ನಾ ಬೆಂಕಿಯಂತೆ .......... ನಾ ಗಾಳಿಯಂತೆ ........ಈ ಜೋಡಿ ಮುಂದೆ .....????
ಬಲು ಅಪರೂಪ ನಮ್ ಜೋಡಿ .....!!!!
ಎರಡು ತಲೆಮಾರಿನ  ಆಟ ...............!!!  ಇದು ಎಂಥಾ ಆಟವಯ್ಯ .........ಅಂದ್ರೂ ಉಮೇಶ್ ದೇಸಾಯಿ
ಹಲೋ ಹಲೋ .....ಯಾಕ್ರೀ ಮೇಡಂ ದೇವ್ರಾ ಪ್ರಾರ್ಥನೆ ಮಾಡ್ತಾ ಇದೀರಾ ...............!!!
ಈ ಆಟಾ ಕಂಡು ಹಿಡಿದವರು ಯಾರ್ರೀ ......!!!
ರೀ ........ಈ ಚಿತ್ರಕ್ಕೆ ಒಂದು ಕವಿತೆ ಬರೀತೀರಾ ಪ್ಲೀಸ್ !!!!
ನಮ್ಮೆಜಮಾನ್ರೆ  ಹೀರೋ ...................ಕಣ್ರೀ !!!
ನೋಟದಾಗೆ  ನಗೆಯ ಮೀಟಿ ............!!!!!

ನಮ್ಮಿಬ್ಬರ ಹಣೆ  ಮಧ್ಯೆ ಸಿಕ್ಕ ಈ ಬಾಲು   ಈ ಜನ್ಮದಲ್ಲಿ  ಬಿಳೋದಿಲ್ಲಾ.................ಸಾರ್ !!
ನಾವ್ ಯಾರಿಗೂ ಕಮ್ಮಿ ಇಲ್ಲಾ ........!
ಯಾಕ್ರೀ ಬಾಲೂ....... ಬ್ಯಾಲೆನ್ಸ್  ತಪ್ತಾ ಇದ್ಯಾ ???
ಎಡವಟ್ ಆಯ್ತು ........ತಲೆ ಕೆಟ್ಟೋಯ್ತು .......ಇಲ್ಲೀ .............
ಅಣ್ಣಾ ತಂಗೀ ಕ್ರಿಕೆಟ್ ಆಟ 
ಇದು ನನಗಲ್ಲಾ ರೀ ...................ಅಂದ್ರೂ ಮಹೇಶ್ 
ಕುಚುಕೂ  ಕುಚುಕೂ ಕುಚುಕೂ ..............!!!
ಯಾರಿಗೆ ಸಾಲುತ್ತೆ ................ಈ ಚೈನು!??ಅದು ನನಗೆ ...........????
ಕೈಯಲ್ಲಿ ಕತ್ತಿ...... ಬಾಯಲ್ಲಿ ಪೀಪಿ  ಇನ್ನೇನು ಬೇಕೂ ಸಾರ್ 
ಕೈಲಿರೋದು ಡಬ್ಲಿ  ಆದರೆ ಕವರ್ ಒಳಗೆ ಇರೋದನ್ನ ಮಾತ್ರ ಕೇಳಬೇಡಿ ಪ್ಲೀಸ್
ನನ್ನ ಮಗಳಿಗೆ ಕೋಳಿಮರಿ  ನನಗೆ  ಫೋಟೋ ಫ್ರೇಮು
ನನಗೆ ಕ್ಯಾಮರಾ , ನಮ್ಮ ಹೋಂ ಮಿನಿಸ್ಟ್ರಿಗೆ  ಬೊಂಬೆ ................!!
ಅಪ್ಪಾ ಮಗಳ ಜುಗಲ್ ಬಂದಿ..........!!
ನಂತರ ಮೇಡಂ ರಿಂದಾ ಭೈರವಿ ರಾಗ ..............!!!
ನಾನಿಂದು ............. ಹ್ಯಾಪಿ ವುಮನ್ ಕಣ್ರೀ 
ಚೆಲ್ಲಿದೆ ನಗೆಯ ಪನ್ನೀರ ..........ಎಲ್ಲೆಲ್ಲು ನಗೆಯ ಪನ್ನೀರ ...........!!
ನಾವು ಬಂದೆವ ಕರಿ ಘಟ್ಟ  ನೋಡದುಕ್ಕಾ.......... ಇಲ್ಲಿ  ಆಟಾ ಆಡಿ ನಕ್ಕು ಹೋಗಲಿಕ್ಕಾ ...ಗೀಯ ಗೀಯಾ
ಕಷ್ಟ ಪಟ್ಟು ಪಡೆದ  ಬಹುಮಾನ  ರೀ ............ಇಬ್ಬರಿಗೂ ಸೇರಿ ಇಷ್ಟೇ ಕಣ್ರೀ
ಗಿಲಿ ಗಿಲಿ ಗಿಲಕ್ಕು , ಗಿಲಿಕೆ ಆಡೋ ಕಾಲಾ ಬಂತಪ್ಪಾ
ಈ ಗದೆ ತುಂಬಾ ಭಾರ .......ಸ್ವಲ್ಪ ಸಹಾಯ ಮಾಡಿ ಪ್ಲೀಸ್
ಈ ಬಾಡಿಗೆ ಈ ಬಾಟಲ್ ಸಾಕಾ? ನೀವೇ ಹೇಳಿ ಮತ್ತೆ ..........!!
ಒಂದ್ ಸಣ್ಣ  ಕೆಲ್ಸಾ ಬಾಕಿ ಇದೆ ಸಾರ್ ........ಬರ್ತೀವಿ ತಾಳಿ.
ಇನ್ನೇನು ರುಚಿ ರುಚಿಯಾದ ಮಾವಿನ ಕಾಯಿ ಸಿಕ್ತು  ಹೊರಡೋಣವ????
ಹೆಂಗಿತ್ರೀ ಇವತ್ತಿನ ಕಾರ್ಯಕ್ರಮ ......??
ಚಿಕ್ಕವರಿಗೆ ಯಾವ ಬಹುಮಾನ ಕೊಡದ  ಹಿರಿಯರ ಬಗ್ಗೆ ಪ್ರತಿಭಟನೆ ಮಕ್ಕಳಿಂದ .....ದೊಡ್ಡವರೆಲ್ಲಾ ಜಾಣರಲ್ಲಾ ........!!!ಅಂತಾ ಹಾಡು 
ನೋಡಿ ಹೀಗೆಲ್ಲಾ ಆಯ್ತು ಕಾರ್ಯಕ್ರಮ .............ನಿಮಗೆ ಇಷ್ಟಾ ಆಯ್ತಾ ....ಹೇಗಿತ್ತು ತರಲೆ ಇಷ್ಟಾ ಆಯ್ತಾ