ನವೆಂಬರ್ ಮೂರು ೨೦೧೩ ಕ್ಕೆ ನಾವೆಲ್ಲಾ ಕಾತರದಿಂದ ಕಾಯುತ್ತಿದ್ದ ದಿನ ಬಂದೆ ಬಿಟ್ಟಿತ್ತು, ವಿಶೇಷ ಏನೂ ಅಂದ್ರಾ ...? ಅದೇ ನಮ್ಮ ಬ್ಲಾಗ್ ಲೋಕದ ಪ್ರೀತಿಯ ಹಿರಿಯರಾದ ಸುನಾಥ್ ಕಾಕ , ನಮ್ಮ ಪ್ರೀತಿಯ ಪಡೆಯಪ್ಪನ್ ದಿನಕರ್ ಮೊಗೆರ , ಮಗುವಿನಂತಹ ಮನಸಿನ ಬದರಿ ನಾಥ್ ಪಲವಳ್ಳಿ ಇವರುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ , ದೀಪಾವಳಿಯ ರಜೆಗಳ ಸಾಲು ಜನ ಎಷ್ಟು ಬರ್ತಾರೆ ಎನ್ನುವ ಗೋಜಲು , ಆದರೆ ಪ್ರೀತಿಯ ಕರೆಗೆ ಬರದಿಹರೆ ನಮ್ಮ ಬ್ಲಾಗ್ ಮಂದಿ, ದೂರದ ಊರುಗಳಿಂದ , ವಿದೇಶದಿಂದ , ಜೊತೆಗೆ ಬೆಂಗಳೂರಿನ ಜಂಜಾಟ ಮರೆತು ಓಡೋಡಿ ಬಂದರು ನಗೆಯ ದೀಪಾವಳಿಯ ಪಟಾಕಿ ಹಚ್ಚಲು, ಈ ಪ್ರೀತಿಯ ಬೆಳಕಿನ ದೀಪಾವಳಿಯಲ್ಲಿ ಆಡೋಣ ಬನ್ನಿ ಹಾಸ್ಯದ ಕಣ್ಣಾಮುಚ್ಚಾಲೆ . ಇದು ಹಾಸ್ಯಕ್ಕಾಗಿ ಮಾತ್ರ ಯಾರೂ ತಪ್ಪು ತಿಳಿಯುವುದು ಬೇಡ . ಬನ್ನಿ ಪಟಾಕಿ ಬಿಟ್ಟಾಕಿ ಹಾಸ್ಯಲೋಕಕ್ಕೆ ತೆರಳೋಣ .
ಹೇಗಿತ್ತು ಹಾಸ್ಯದ ದೀಪಾವಳಿಯ ಬೆಳಕಿನ ಕಣ್ಣಾಮುಚ್ಚಾಲೆ , ನಗುವಿನ ಮುಖದಿಂದ ನಿಮ್ಮ ಅನಿಸಿಕೆ ತಿಳಿಸಿ ಬಿಡಿ ಈ ಬ್ಲಾಗಿನಲ್ಲಿ .
| ಅರೆ ಇಲ್ನೋಡಿ ಸ್ವಾಗತಿಸಲು ನಿಂತ ಮಂದಿಯನ್ನು |
| ನನ್ನ ಮೂಕಮನದ ಮಾತು ನಿನಗೆ ಕೇಳದೆ ಗೆಳೆಯ |
| ಪ್ರೀತಿಯ ಅಪ್ಪುಗೆ ಗೆ ಹೊಟ್ಟೆಗಳ ಅಡ್ಡಿ |
| ಸ್ವಲ್ಪ ನಿಲ್ಸಿ ಹಾಗೆಲ್ಲಾ ನನ್ನ ತಮ್ಮನ ಬಗ್ಗೆ ಹಾಸ್ಯ ಮಾಡಬೇಡಿ |
| ಒಹ್ ನೀವಾ ಪರವಾಗಿಲ್ಲಾ ಮುಂದುವರೆಸಿ |
| ಹೇಗೆ ಕೀಟಲೆ ಮಾಡಲಿ ಎಂಬ ಬಗ್ಗೆ ಸ್ಕೆಚ್ |
| ಮುಂದೆ ನೀವ್ ಹೋದಾಗ ಹಿಂದೆ ನಾ ಬರುವೆ ................... ! |
| ಒಹ್ ಗೆಳೆಯ ಜೀವದ್ ಗೆಳೆಯ ................. ನಿಂಗೆ ಸ್ಯಾನೆ ಪ್ರೀತಿ ಕಣೋ |
| ಅಪ್ಪಾಲೇ ತಿಪ್ಪಾಲೆ |
| ಅಣ್ಣಾ ಪ್ರಕಾಶಣ್ಣ ಬದರಿ ಯಾಕೋ ಅವರನ್ನ ಬಿಡ್ತಾ ಇಲ್ಲಾ |
| ನಮ್ ಕೈ ಇರೋದೇ ಇಷ್ಟುದ್ದಾ ಇನ್ಸ್ವಲ್ಪ ಮುಂದೆ ಬನ್ನಿ |
| ಚಿಕ್ಕ ಮಗಳೂರ ಪುಟ್ಟ ಮಲ್ಲಿಗೆ ಯಂತಹ ಪುಟ್ಟಿ |
| ಅಯ್ಯೋ ಅಣ್ಣಾ .. ನೀವ್ ಇದ್ದೀರಾ ...? |
| ಇವರೋ ಫೋಟೋ ತೆಗೆಯೋಕೆ ಮುಂಚೆ ನಿರ್ದೇಶನ ಮಾಡ್ತಾರೆ ಕಣ್ರೀ |
| ನನಗೂ ಈ ಹುಡುಗರ ತರಹ ಬ್ಯಾಚಲರ್ ಲೈಫ್ ಇದ್ದಿದ್ರೆ .....!!! ಅಂದ್ರೂ ಶ್ರೀಕಾಂತ್ |
| ಭಕ್ತಿ ಭಾವದ ಈ ಪರಿ |
| ಮೂವರು ಸಿವಿಲ್ ಇಂಜಿನಿಯರ್ ಗಳು ಸೇರಿದರೆ ಅದರ ಮಜಾನೆ ಬೇರೆ ಬಿಡಿ, |
| ಸಾಹಿತ್ಯದ ಕಾಂಕ್ರೀಟ್ ಗೆ ಜ್ಞಾನ ಎಂಬ ಸಿಮೆಂಟ್ ಬೇಕೇಬೇಕು ಅಂದ್ರು ಸುನಾಥ್ ಕಾಕ |
| ರೀ ಬನ್ರೀ ಸುನಾಥ್ ಕಾಕನ ಮಾತು ಕೇಳೋದು ಬಿಟ್ಟು ಪೆದ್ದರಂತೆ ಫೋಟೋ ತೆಗೆತಾ ಇದ್ದೀರಾ ಅಂದ್ರು ಅಜಾದ್ ಸರ್ |
| ಸುನಾಥ್ ಕಾಕ ನಿಮ್ಮ ದರ್ಶನ ನಮಗೆ ಜ್ಞಾನ ದರ್ಶನ , |
| ಪಡೆಯಪ್ಪನ್ ಹಾಗು ಶಿವೂ ಜುಗಲ್ ಬಂದಿ , ಹಾಸ್ಯ ರಾಗ , ನಗುವಿನ ತಾಳ |
| ಯಾಕೆ ಬ್ಲಾಗ್ ಬರೀತಾ ಇಲ್ಲಾ ಯಾರು? ಎಲ್ರೂ ಸೋಮಾರಿ ಆಗ್ಬಿಟ್ರ ...? |
| ಫೆಸ್ ಬುಕ್ ಬಿಟ್ಟು ಬ್ಲಾಗ್ ಬರೀರಪ್ಪಾ .... ಒಳ್ಳೆದಾಗುತ್ತೆ |
| ಒಬ್ಬೊಬ್ಬರಿಗೆ ಒಂದೊಂದು ಚಿಂತೆ |
| ಸ್ನೇಹಲೋಕದ ಪಟೇಲರ ಜೊತೆ ಅಶೋಕ್ ಶೆಟ್ರು |
| ಅಯ್ಯೋ ಇನ್ನು ತಿಂಡಿ ಬಂದಿಲ್ವಾ ...... ? |
| ಹುಡುಗರು ಏನೋ ಒಳ್ಳೆ ಕೆಲ್ಸಾ ಮಾಡ್ತಾ ಇದ್ದಾರೆ , ಬನ್ನಿ ಹರಸೋಣ |
| ಇಲ್ಲಿ ಹೊಟ್ಟೆ ಹಸಿತಾ ಇದೆ ಇಲ್ಲಿ ..... ನಮ್ ಅಪ್ಪನಿಗೆ ಕ್ಯಾಮರ ಚಿಂತೆ , |
| ಸರ್ ಜಿ ಹೊಟ್ಟೆ ಹಸಿತಾ ಇದೆ ಆಲ್ವಾ ....?? |
| ನಮ್ ಪಕ್ಷದ ಸದಸ್ಯತ್ವಕ್ಕೆ ಇನ್ನು ಸ್ವಲ್ಪ ಹೊಟ್ಟೆ ಬೇಕು ಶಿವೂ |
| ಸ್ವಲ್ಪ ಅಡ್ಜೆಸ್ಟ್ ಮಾಡ್ಕಂಡ್ ಒಂದು ಸದಸ್ಯತ್ವ ಕೊಡ್ಸಿ ಬದರಿ ಜಿ, |
| ವೆಂಡರ್ ಕಣ್ಣು , ಇಟ್ಟಿಗೆ ಸಿಮೆಂಟು ಒಟ್ಟಿಗೆ ನಕ್ಕಾಗ |
| ಬಲು ಅಪರೂಪ ನಮ್ ಜೋಡಿ |
| ಬನ್ನಿ ದೀಪಾವಳಿಯಲ್ಲಿ ನಗೆಯ ಪಟಾಕಿ ಹಚ್ಚೋಣ ಅಂದ್ರು ಅತ್ರಾಡಿ ಸುರೇಶ್ ಸರ್ |
| ಈ ಇಬ್ಬರಲ್ಲಿ ಮನ ತುಂಬಿ ನಕ್ಕವರು ಯಾರು ..? |
| ಬಂದ್ರು ಸಾರ್ ಓ ಹೊ ... ಬಂದ್ರು ಸಾರ್ ಓ ಹೊ... d o m |
| ಇಳಿದು ಬಾ ತಟ್ಟೆ ಲೋಟ ದೊಡನೆ ಗೆಳೆಯ ಇಳಿದು ಬಾ |
| ಕೊನೆಗೂ ಬಂತು ನೋಡಿ ಎಲ್ಲರಿಗೂ ಬೇಕಾದದ್ದು |
| ಎರಡು ಬ್ಯಾಗುಗಳ ಸುಂದರ ಅಪ್ಪುಗೆ |
| ಅಜಾನು ಬಾಹು ಬಂಧನದಲ್ಲಿ ನಿಟ್ಟುಸಿರ ನಗೆ ಚೆಲ್ಲಿ |
| ನನ್ನ ಭಾರವನ್ನು ಸಮನಾಗಿ ಹಂಚಿದ್ದೇನೆ ಅಂದ್ರು ಮಹೇಶ್ [ d o m ] |
| ತುಂಟ ಹೈಕಳ ಜೊತೆ ಮತ್ಸ್ಯ ವಿಜ್ಞಾನಿ some ಶೋಧನೆ |
| ಮಣಿಕಾಂತ್ ಈ ತುಂಟ ಹೈಕಳ ಸಹವಾಸ ಬೇಡ ಬನ್ನಿ |
| ಯಾರ್ ಬರ್ತೀರಿ ಬನ್ರಿ .... ನೋಡೇ ಬಿಡ್ತೀವಿ ಒಂದು ಕೈ |
| ಫೋಟೋ ತೆಗೀಬೇಕು ನಗ್ರಪ್ಪಾ ...... ಪ್ಲೀಸ್ |
| ಬಾರೆ ...... ಕುಂಟೆ ಬಿಲ್ಲಿ ಆಡೋಣ |
| ಕಾದಿರುವೆವು ನಿಮಗಾಗಿ ಓ ಅತಿಥಿಗಳೇ |
| ನಿರೂಪಕರೆ ಎಲ್ಲಿದ್ದೀರಿ ....?? |
| ಬಂತು ಬಂತು ..... ಕರೆಂಟು ಬಂತು , ಅಲ್ಲಲ್ಲಾ ಮೇವು ಬಂತು |
| ತಿಂಡಿ ಬೇಕೇ ತಿಂಡಿ ....... ಬಿಸಿ ಬಿಸಿ ತಿಂಡಿ |
| ಮೊಗ್ಯಾಮ್ಬೋ ಖುಷ್ ಹು ವಾ .....!! |
| ಅಪರೂಪದ ಚಿಂತಾಮಣಿಯ ಆಗಮನ |
| ಪ್ರಕಾಶಣ್ಣ ನಿಜ ಹೇಳಿ ನಿಮ್ ತರಾ ಆಗಲು ಏನ್ ಮಾಡ್ಬೇಕು ..? |
| ನಗುವುದೇ ಸ್ವರ್ಗ |
| ಪದೆಯಪ್ಪನ್ ಜೊತೆ ಹಾಥ್ ಮಿಲಾವ್ ಅಂದ ತುಂಟ ಪ್ರದೀಪ್ |
| ವೆಂಕಿ ಪಿಡಿಯ ಜೊತೆ ಕವಿವರ್ಯ ನಕ್ಕರು |
| ಅಯ್ಯೋ ಮಗು ನಾ ಬರೆದ ಪುಸ್ತಕ ನಿನಗೆ ಭಾರವಾಯ್ತೆ......! |
| ಇಬ್ಬರು ಜ್ಞಾನಿಗಳ ಸಂಗಮ ಕ್ಲಿಕ್ಕಿಸಿದ ಒಬ್ಬ ಅಜ್ಞಾನಿ |
| ಜಯದ ಲಕ್ಷ್ಮಿಯ ಹಾದಿ ಹಿಡಿದ ರಾಯರು |
| ಮೌನದ ಆಭರಣ ಹೊತ್ತ ದಂಪತಿಗಳು ಇವರು |
| ನೀವ್ ಅಂದ್ರೆ ನನಗೆ ಇಷ್ಟಾ |
| ನಮ್ಮಣ್ಣ ಭದ್ರ ಬಾಹು ಎಲ್ಲಿ |
| ಯಾಕ್ರೀ ನಂ ತಂಗಿನಾ ಶಕ್ತಿ ದೇವತೆ ಅಂತೀರಾ ...?? |
| ಇವರಿಬ್ಬರನ್ನು ನೋಡಿದ್ರೆ ಶಿರಸಿ ಜ್ಞಾಪಕ ಬಂದ್ರೆ ನಂ ತಪ್ಪಲ್ಲಾ .....!! |
| ಅಣ್ಣಾ ಒಂದ್ ಫೋಟೋ ಪ್ಲೀಸ್ |
| ಅಪ್ಪುಗೆಯಲ್ಲಿ ಅರಳಿದ ನಗೆಯ ಹೂ |
| ಸ್ನೇಹ ಲೋಕದ ತುಂಟ ಹೂಗಳು |
| ನಾನೂ ಸ್ನೇಹ ಲೋಕದವನೇ .. ಗೊತ್ತಾ ? |
| ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳಿಗೆ .... |
| ನನ್ ಪ್ರೀತಿಯ ತಂಗಿಗೆ ಏನೋ ಕೊಟ್ಟೆ ಗೊತ್ತಾ ...ಅಂದ ಸಂಧ್ಯಾ ಪುಟ್ಟಿ |
| ಬದರಿಯ ಬಗ್ಗೆ ಏನ್ ಹೇಳೋದು ಅದೊಂದು ಪ್ರೀತಿಯ ಖಣಜ |
| ನೀವಿಬ್ರು ಮೊಬೈಲ್ ನಲ್ಲಿ ಆಟಾ ಆಡ್ತೀರಿ ನಾನು ತಿಂಡಿ ತಿಂದು ಬರುವೆ ... |
| ಬಾಯಲ್ಲಿ ತಿಂಡಿ ಇದೆ ಮಾತನಾಡಲು ಆಗುತ್ತಿಲ್ಲ ಮೇಡಂ |
| ಪ್ರಕಾಶಣ್ಣ ನಿಮ್ ಅಳಿಯಂದ್ರ ಗುಂಪಿಗೆ ನಾನು ಬರ್ಲಾ ..? |
| ಬಾಕಿ ಅಳಿಯನ್ದ್ರನ್ನ ಕೇಳಬೇಕು ಚಿನ್ಮೈ , ಆಮೇಲೆ ಬರೋವಂತೆ |
| ಕಾರ್ಯಕ್ರಮದ ಮೊದಲು ಸ್ವಲ್ಪ ಸಿಹಿ ತಿನ್ನೋಣ ಬನ್ನಿ |
| ನನ್ನ ಸೃಷ್ಟಿ ಹೇಗಿದೆ .....? |
| ಎಲ್ಲಾ ಉಡೀಸ್ ಪೇಂದ .... ಖಾಲಿಯಾಗೊಯ್ತು ಸಾರ್ ....!!! |
| ಅಯ್ಯೋ ಕಾಪಾಡಿ ಕಾಪಾಡಿ ... ಈ ಪ್ರೀತಿಯ ಅಪ್ಪುಗೆ ಇಂದ |
| ಅಬ್ಬಬ್ಬ ಕೊನೆಗೂ ಅಪ್ಪಿಕೋ ಚಳುವಳಿಯಿಂದ ಮುಕ್ತನಾದೆ |
| ಬನ್ನಿ ಎಲ್ಲರೂ ಕಾರ್ಯಕ್ರಮ ಶುರು ಮಾಡೋಣ |
| ಮೂರು ಪುಟ್ಟ ಮಕ್ಕಳ ತುಂಟಾಟ |
| ಸ್ನೇಹಲೋಕದ ಸೌಮ್ಯ ಮುಖದ ತುಂಟ ಮಕ್ಕಳು |
| ಕಾರ್ಯಕ್ರಮಕ್ಕೆ ನಾವ್ ರೆಡಿ .. ನಾವ್ ರೆಡಿ |
| ಭಕ್ತಿಯಿಂದ ವಿನಾಯಕನನ್ನು ಕರೆದರೂ ಇವರು |
| ಆ ಸಮಯ ಆನಂದ ಮಯ [ ಸರ್ವಿಸ್ ಆದ ಬದರಿ ಮುಖದಲ್ಲಿನ ನಗು ] |
| ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ ಎಂದರು ಮತ್ಸ್ಯ ವಿಜ್ಞಾನಿ |
| ಪ್ರೀತಿಯ ಸ್ವಾಗತದ ಜೊತೆಗೆ ಸಿಹಿಯಾದ ಪ್ರೀತಿ ಇತ್ತು |
| ವೇದಿಕೆಯಲ್ಲಿ ಭಾವುಕತೆಯ ಜೊತೆ ನಗೆಯ ಪಟಾಕಿ |
| ಆತ್ಮೀಯ ಸ್ವಾಗತ ನಿಮಗೆ ಶ್ರೀ ನಂಜುಂಡ ಸ್ವಾಮಿ ಸಾರ್ ಎಂದರು ಬ್ಲಾಗಿಗರು |
| ಬ್ಲಾಗ್ ಲೋಕದ ಬಗ್ಗೆ ಮಾತಾಡಿದರು ಇವರು ಬ್ಲಾಗ್ ತುಂಟರ ಬಗ್ಗೆ ಮಾತಾಡಲಿಲ್ಲ |
| ಇದೆಂತದು ಇದು ಹೀಗೂ ಉಂಟೆ ಎಂದಳು ಮೊದಲ ಬಾರಿ ಬಂದ ಪುಟ್ಟ ತಂಗಿ |
| ಓಯ್ ಅಲ್ಲಿ ನೋಡು ನಮ್ಮ ಫೋಟೋ ತೆಗೆತಾ ಇರೋದು |
| ದೀಪಾವಳಿಯ ಸಂಭ್ರಮಕ್ಕೆ ಹೊರಬಂದ ನಾಲ್ಕು ಪುಸ್ತಕಗಳು ಇವು ಕೊಂಡು ಓದಿ ನೀವು |
| ಪ್ರೇಕ್ಷಕರಿಗೂ ವೇದಿಕೆಗೂ ಮಧ್ಯೆ ಕ್ಯಾಮರ ಮಂದಿಯ ಅಡ್ಡ ಗೋಡೆ , |
| ಇವರೆಲ್ಲರ ಪ್ರೀತಿಯ ಸಾಕ್ಷಿ ಈ ಸುಂದರ ಗಳಿಗೆಗೆ |
| ಸುನಾಥ ಕಾಕ ನಿಮ್ಮ ಮಾತು ನಮಗೆ ಪರಮಾನ್ನ |
| ಕ್ಯಾಮರ ತುಂಟಾಟ |
| ಯಾಕ್ರಪ್ಪಾ ಕೈ ಕೈ ಹಿಸುಕಿ ಕೊಳ್ಳುತ್ತಾ ಇದ್ದೀರಾ ..?? ಯಾರಾದ್ರು ಕೈ .....? |
| ನಗುವೇ ಪ್ರೀತಿಯ ಹಾಡು |
| ಅಭಿಮಾನದ ಮಾತುಗಳು ಇವರದು |
| ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಬಟನ್ನುಗಳು |
| ಮೈಕ್ ನಿಯಂತ್ರಣ ಇಲ್ಲಿತ್ತು |
| ನಿಲ್ಲದ ಜಡಿ ಮಳೆಯನ್ನೂ ನಿಲ್ಲಿಸುವುದು ಹೇಗೆ |
| ಈ ಮಾತಿನ ಹಿಂದಿನ ಅರ್ಥವೇನು ?? |
| ಅಯ್ಯೋ ಇಷ್ಟೊಂದು ಇಷ್ಟೊತ್ತು ಮಾತಾಡಿದ್ರೆ ಹೇಗೆ....? |
| ಇತ್ತ ತುಂಟ ಹುಡುಗಿಯ ತುಂಟ ನೋಟ , ಅತ್ತ ಆಕಳಿಕೆಯ ನಾಗಾಲೋಟ |
| ಏನಾದ್ರೂ ಮಾಡ್ಕೊಳ್ಳಿ ನಮ್ ಲೋಕ ನಮ್ದು |
| ಪ್ರೀತಿಯ ಅಮ್ಮನಿಗೆ ಸಹೋದರಿಯ ಸಾಥ್ |
| ಏನು ಮಾಡಲಿ ನಾನೂ ಏನು ಹೇಳಲಿ .... |
| ಅನಿವಾರ್ಯುದ ಕಷ್ಟ ಬಂದಾಗ ಕಣ್ಮುಚ್ಚಿ ಧ್ಯಾನಿಸ ಬೇಕು |
| ಪಾಪ ಎಂತಹ ಮುಗ್ಧ ಜನರಪ್ಪಾ ಇವರು .....!! ವ್ಯಂಗ ಅಂತಾ ಭಾವಿಸ ಬೇಡಿ |
| ಗೆಳೆತನದಲ್ಲಿ ಹೀಗೂ ಉಂಟು ಸಾರ್ ...! |
| ತಸ್ಮೈ ಶ್ರೀ ಗುರುವೇ ನಮಃ |
| ಅಕ್ಷರ ಗೆಳೆತನ ತಂದ ಸುಂದರ ಕ್ಷಣ |
| ಏನ್ರಪ್ಪಾ ಇದು ಬಾಂಬ್ ಅಲ್ಲಾ ತಾನೇ |
| ಪ್ರೀತಿಯ ಹಿರಿಯ ಕವಿಗೆ ಹೃದಯ ಸ್ಪರ್ಶಿ ಸನ್ಮಾನ |
| ಅಭಿನೇತ್ರಿಗೆ ಅಭಿಮಾನದ ಸನ್ಮಾನ |
| ಸಾರ್ಥಕವಾಯಿತು ತಮ್ಮ ನಿನ್ನ ಜೊತೆ ಬಾಳಿದ್ದಕ್ಕೆ |
| ಬಿಡ್ ಬೇಡಿ .... ಬಿಡ್ ಬೇಡಿ ಹಿಡ್ಕಳಿ , ಸನ್ಮಾನಕ್ಕೆ ಸಿಗದೇ ತಪ್ಪಿಸ್ಕೊಳ್ತಾರೆ ... ಪ್ರೀತಿಯ ಪ್ರಕಾಶಣ್ಣ ನಿಗೆ ಸನ್ಮಾನ |
| ಅಭಿಮಾನದ ಜೊತೆ ಪ್ರೀತಿಯ ನಗುವಿನ ಸನ್ಮಾನ ಶ್ರೀ ಜಿ. ಎನ್ . ಮೋಹನ್ ರವರಿಗೆ |
| ಚಿಕ್ಕದಾದ ಚೊಕ್ಕ ಅಭಿಮಾನದ ಮಾತುಗಳು |
| ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ |
| ಬ್ಲಾಗ್ ಮಂದಿ ಮಾಡ್ತಿದ್ದಾರೆ ಕಮಾಲ್ ಅಂದ್ರು ಅಭಿಮಾನದಿಂದ |
| ಮಗುವಿನೊಡನೆ ಮಗುವಿನ ಮನಸಿನ ಬದರಿ |
| ಬದರಿ ಬರವಣಿಗೆ ಒಂದು ಮಹಾನ್ ಚೇತನ ನೀಡುತ್ತೆ |
| ಇನ್ಯಾವ ಪುಸ್ತಕ ತರಲಿ ಬೇಗ ಹೇಳು |
| ತುಂಟ ಕಣ್ಣಿನ ಸರದಾರರು ಇವರು, |
| ಪುಸ್ತಕ ಹೇಗಿದೆ ನೋಡೋಣ ಬನ್ನಿ |
| ಸುನಾಥ್ ಕಾಕರ ಅದ್ಭುತ ಕಾವ್ಯಯಾನ ಓದಲು ಮರೆಯ ಬೇಡಿ |
| ಒಂದೊಂದು ಕವಿತೆಯಲ್ಲೂ ಒಂದೊಂದು ಪಾತ್ರದ ಅನ್ವೇಷಣೆ ಇಲ್ಲಿದೆ ಒಮ್ಮೆ ಓದಿಬಿಡಿ |
| ದಿನಕರನ ಮನದ ಮಾತುಗಳು ಮನಮುಟ್ಟುವಂತೆ ಇಲ್ಲಿವೆ, ಬನ್ನಿ ಈ ಪುಸ್ತಕದ ಒಳಗೆ |
| ನನಗೆ ಪುಸ್ತಕಗಳು ಇಷ್ಟಾ ಆಯ್ತು ಸಾರ್ |
| ಮಂಡ್ಯದ ಹೈದನ ತಲೆಗೆ ಬೆರಳಿನ ಕಿರೀಟ |
| ಎಷ್ಟು ತಳ್ಳಿದರು ಕದಲದ ತಲೆ ಕಣ್ರೀ ಇದು |
| ನಗು ನಗುತಾ ನಲಿಯೋಣ ಬನ್ನಿ |
| ಅವರಿಬ್ಬರ ಫೋಟೋ ಅಷ್ಟೊಂದು ಯಾಕೆ ತೆಗೀತೀರ ಸಾರ್ |
| ನಮ್ ಹುಡುಗರೂ ಸಾರ್ |
| ಕೊಳಲಿನ ಮಾಂತ್ರಿಕನ ಹಾಡಿನ ಮೋಡಿ , ಎಲ್ಲರು ಬೆರಗಾದರು ಇವರ ಆಸಕ್ತಿ ನೋಡಿ |
| ಪ್ರೀತಿಯ ಮಾತುಗಳು ಹೃದಯ ತಟ್ಟಿದವು |
| ಪ್ರೀತಿಯಿಂದ ಆಗಮಿಸಿದ ಗಣ್ಯರಿಗೆ ವಂದನೆಗಳು |
| ಜೊತೆಗೆ ನಿಮಗೂ ಸಹ ವಂದನೆಗಳು |
| ಸುಂದರ ಕನ್ನಡ ಪದಗಳ ಪುಷ್ಪಾರ್ಚನೆ ಮಾಡಿದವರು ಇವರು |
| ನಾವು ಯುವಜನ ನಮಗೆ ಜಾಗ ಬಿಡಿ ಬರಲು ಸಿದ್ದರಾಗಿದ್ದೇವೆ |
| ನಮ್ ಲೋಕ ನಮ್ ಪಾಡು , ನಮ್ ಹಾಡು |
| ತಪೋ ಬಂಗ ಮಾಡಬಾರದು ಗುರುವೇ ಹೆಗಲ ಮೇಲೆ ಕೈ ತೆಗೀ ಕಂದ [ ಡಿ .ಒ .ಎಮ್ ] |
| ಕನ್ನಡ ಏನೇ ಕುಣಿದಾಡುವ ಬಯಕೆ |
| ವೀರ ಕೇಸರಿ ಮಣಿಕಾಂತ್ |
| ನಮ್ಮ ಓಟು ಪೂರಿ ಪಕ್ಷಕ್ಕೆ |
| ಪೂರಿ ಪಕ್ಷ ಜಿಂದಾಬಾದ್ |
| ಬಿಲ್ಲನ್ನು ಎತ್ತಿದ ಪಾರ್ಥನ ಮುಖದಲ್ಲಿ ಗೆಲುವಿನ ನಗೆ |
| ಹಪ್ಪಳ ಹಂಚಿ ತಿನ್ನಲು ಎಂ .ಒ .ಯು ಸಹಿ ಮಾಡಿದ ಸಮಯ |
| ಹೋಟೆಲ್ ಗೆ ದಾಳಿಯಿಟ್ಟ ಸ್ನೇಹಲೋಕದ ಸೈನ್ಯ |
| ನಮ್ಮನ್ನು ಬಿಟ್ಟು ಊಟಕ್ಕೆ ಬಂದಿದ್ದು ಯಾಕೆ ಮಹೇಶಣ್ಣ [ d o m ] |
| ಓ .ಕೆ . ನಾ ಸಾರ್ , ಈಗ ತಿನ್ನೋಕೆ ಬಿಡಿ |
| ನಗುವಿನಲ್ಲಿ ಅಡಗಿದೆ ಹಸಿವಿನ ಕೋಪ |
| ಇದು ಎಂತಾ ಲೋಕವಯ್ಯ |
| ತಾಳಿ ಒಂದು ಥರ್ಟಿ ಕಾಫಿ ಕುಡೀತೀನಿ |
| ಯಾವ ಸುಂದರಿಯ ಫೋಟೋ ಗಿರೀಶು |
| ಊಟ ಮಾಡಿದ ನಂತರದ ಸಂತೃಪ್ತ ಮುಖಗಳು ಚಿಮ್ಮಿಸಿದ ನಗು |
| ಯಾರ್ಗೂ ಮನೆ ಯೋಚನೆ ಇಲ್ಲಾ ಕಣ್ರೀ |
| ಅಪ್ಪನ ಬರುವಿಗೆ ಕಾದ ಮಗಳು |
| ನಿಮ್ಮನ್ನು ನಗಿಸಿ ನಮಗೆ ಸುಸ್ತಾಯ್ತು ನಮ್ಮನ್ನು ಹೋಗಲು ಬಿಡಿ ಪ್ಲೀಸ್ ಮತ್ತೆ ಸಿಗೋಣ |
ಹೇಗಿತ್ತು ಹಾಸ್ಯದ ದೀಪಾವಳಿಯ ಬೆಳಕಿನ ಕಣ್ಣಾಮುಚ್ಚಾಲೆ , ನಗುವಿನ ಮುಖದಿಂದ ನಿಮ್ಮ ಅನಿಸಿಕೆ ತಿಳಿಸಿ ಬಿಡಿ ಈ ಬ್ಲಾಗಿನಲ್ಲಿ .