ಮಂಗಳವಾರ, ಜುಲೈ 19, 2011

ಮುಸ್ಸಂಜೆ ಮಬ್ಬಿನಲ್ಲಿ ಬ್ಲಾಗಿಗರ ಕಣ್ಣಾ ಮುಚ್ಚಾಲೆ!!!

ಕಳೆದ ತಿಂಗಳು ಬೆಂಗಳೂರಿಗೆ  ಬಂದಾಗ  ಇಬ್ಬರು ಬ್ಲಾಗ್ ಸ್ನೇಹಿತರೊಡನೆ ಬೆಂಗಳೂರಿನ ಸಮೀಪ ಒಂದು ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಒಳ್ಳೆಯ ಸೂರ್ಯಾಸ್ತ  ದರ್ಶನ ವಾಯಿತು. ಹಾಗೆ ಮುಸ್ಸಂಜೆಯ ಮಬ್ಬಿನಲ್ಲಿ ಆಗಸದಲ್ಲಿ  ಮೋಡಗಳ ರಂಗು ರಂಗಿನ ಚಿತ್ತಾರದ ಹಿಮ್ಮೇಳದಲ್ಲಿ  ಇಬ್ಬರು ಬ್ಲಾಗ್ ಮಿತ್ರರು ನಡೆಸಿದ ಕಣ್ಣಾ ಮುಚ್ಚಾಲೆ ಇಲ್ಲಿದೆ.  ಬನ್ನಿ ಈ ಬ್ಲಾಗಿಗರು ಯಾರೆಂದು ಪತ್ತೆ ಮಾಡಿ. ಸುಂದರ ಚಿತ್ರಗಳನ್ನು ನೋಡಿ ಸಂತಸಪಡಿ.                                 
ಆಗಸದ ಚಿತ್ತಾರ ಲೋಕಕ್ಕೆ ಸಮನಾವುದು !!!
ಚಿತ್ತಾರದ ಸಾಗರವನ್ನು ಕ್ಯಾಮರದಲ್ಲಿ ಅಡಗಿಸುವ ಈ ಪರಿ.!!!!
ಮುಸಂಜೆಯ ಮಸುಕಿನ ಮೋಹಕ ಜಾಲ ಇದು !!!
ಮುಸ್ಸಂಜೆಯ ಮಾಯಾ ಲೋಕ !!!
ಮುಸಂಜೆಯಲ್ಲಿ  ಕಲ್ಪನೆಗಳ ಸಕಾರಕ್ಕೆ ನಿರ್ದೇಶನ !!!
ಮುಸ್ಸಂಜೆಯಲ್ಲಿ ನೆರಳು  ಮಬ್ಬು ಬೆಳಕಿನ  ಆಟದ ಮಾಯಾ ನೋಟ !!!!
ಆ  ಆಗಸ  ................................................!!!!!ಬಣ್ಣಗಳ ಚಿತ್ತಾರ !!!!!

ಸೋಮವಾರ, ಜುಲೈ 4, 2011

ಕಣ್ಣಾಮುಚ್ಚೇ ಕಾಡೇ ಗೂಡೇ ಅಂದಿದ್ವು ಚೀತಾ ಹಾಗು ಮೂರು ಮರಿಗಳು.!!!!


ನಾನು ನನ್ನ ಮಕ್ಕಳು!!!
ಮೈಸೂರಿನ ಜೂ ನಲ್ಲಿ ಚೀತಾ ಮರಿ ಹಾಕಿದ್ಯಂತೆ ಅಂತಾ ಸ್ವಲ್ಪ ದಿನಗಳ ಹಿಂದೆ  ಮಾಧ್ಯಮಗಳಲ್ಲಿ ಸುದ್ದಿ ಬಂತು . ಸರಿ  ಇವುಗಳೊಂದಿಗೆ ನಾನು ಕಣ್ಣಾ ಮುಚ್ಚಾಲೆ ಆಡೇ ಬಿಡೋಣ  ಅಂತಾ ನನ್ನ ಕ್ಯಾಮರಾ ಜೊತೆ ಜೂ ಗೆ ಹೊರಟೆ. ನನ್ನ ಅದೃಷ್ಟ ಚೆನ್ನಾಗಿತ್ತು. ತಾಯಿ ಹಾಗು ಮೂರು ಮಕ್ಕಳು  ಒಳ್ಳೆಯ ಲಹರಿಯಲ್ಲಿ ಇದ್ದವು. ಇವುಗಳನ್ನು ನೋಡುತ್ತಾ ಮೈಮರೆತೆ , ನನ್ನ ಕ್ಯಾಮರಾ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿತ್ತು, ಬನ್ನಿ ಕೆಲವು ದೃಶ್ಯಗಳು ನಿಮಗಾಗಿ ಇಲ್ಲಿವೆ.          
ಶ್ ...........................!!!!! ಗಲಾಟಿ ಮಾಡ್ಬೇಡಿ.
ನನ್ನ ಮಕ್ಕಳ  ಹತ್ತಿರ  ಬಂದೀರ  ಎಚ್ಚರ !!!!
ನನ್ನ ಪಂಜರದ ಮುಂದೆ ನಿಮ್ಮ ವರ್ತನೆ ನೋಡಿ "ನಗೆಯು ಬರುತಿದೆ  ಎಂಗೆ ನಗೆಯು ಬರುತಿದೆ"!!!!

                 
ನಮ್ಮಮ್ಮ ಅಂದ್ರೆ ನಮಗೆ ಇಷ್ಟಾ!!!!
ಸ್ವಲ್ಪ ರೆಸ್ಟ್ ತಗೊತೀವಿ  ತಾಳ್ರೀ!!!

ಮಕ್ಕಳೇ ಇಲ್ನೋಡಿ  ಇವರೇ ಮನುಷ್ರು ಅಂದ್ರೆ !!! 




ಮನುಷ್ಯರನ್ನು  ನೋಡಿದ್ರೆ ಹೆದರ್ಕೆ ಆಗುತ್ತೆ !!!!!
ನಮ್ಮ ಬಾಲ್ಯ ನಮ್ಮದು!!!!

ಸೋಮವಾರ, ಜೂನ್ 27, 2011

ಕಾಡಿನಲ್ಲಿ ಕಣ್ಣಾಮುಚ್ಚಾಲೆ !!! ಲಾಂಗೂರ್ ಹಾರಿದ ಈ ಪರಿ !!!!!!!

ಕೋತಿ ಹಾರುತಿದೆ ...............ನೋಡಿದಿರಾ !!!!
ಕಳೆದ ವರ್ಷ ಕಾನನ ಪ್ರವಾಸದಲ್ಲಿ  ನಾವು ಬುರುಡೆ ಎಂಬ ಪ್ರದೇಶಕ್ಕೆ ಹೋಗುತ್ತಿದ್ದೆವು.ಆಗ ಕಂಡ ದೃಶ್ಯ ಇದು .ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿದ ಬಗ್ಗೆ ಓದಿದ್ದೆ , ಆದರೆ ಈ ಹನುಮಂತ [ಲಾಂಗೂರ್ ಮಂಗ ] ಮರದಿಂದ ವೇಗವಾಗಿ ಚಂಗನೆ ನೆಗೆದಿದ್ದ . ಬನ್ನಿ ಈ ನೋಟ ನಿಮಗಾಗಿ.

ಶನಿವಾರ, ಜೂನ್ 25, 2011

ಬಿಳಿಗಿರಿಯ ಕೆರೆಯ ನೀರಿನಲ್ಲಿ ಹಾವಿನ ಕಣ್ಣಾಮುಚ್ಚಾಲೆ !!!!!


ಈಜ ಬೇಕು ಈಜಿ ಜೈಸಬೇಕು !!!!
ಬಿಳಿಗಿರಿ ರಂಗನ ಬೆಟ್ಟದಲ್ಲಿ ಒಂದು ಸಂಜೆ  ಕಲ್ಯಾಣಿಯ  ದಡದಲ್ಲಿ  ಕುಳಿತಿದ್ದೆ.ಯಾಕೋ ಗೊತ್ತಿಲ್ಲ  ನನಗೆ ಅರಿವಿಲ್ಲದಂತೆ ತಿರುಗಿ ನೋಡಿದರೆ , ಸಂಜೆಯ ವೇಳೆಯಲ್ಲಿ  ಈ ಯಜಮಾನರು ಉಲ್ಲಾಸದಿಂದ  ಕಲ್ಯಾಣಿಯ ನೀರಿನಲ್ಲಿ ಈಜಾಡುತ್ತಿದ್ದರು.ಸುಮಾರು ಹೊತ್ತು ಈ ಹಾವಿನ  ಆಟ ನೋಡುತ್ತಿದ್ದ ನನಗೆ ಕ್ಯಾಮರಾ  ಕ್ಲಿಕ್ಕಿಸುವ ಯೋಚನೆಯೇ ಮರೆತು ಹೋಗಿತ್ತು. ಹಾಗೆ ಸಾವರಿಸಿಕೊಂಡು ಈ ಯಜಮಾನರಿಗೆ  ತೊಂದರೆ ಯಾಗದಂತೆ ಕೆಲವು ದೃಶ್ಯಗಳನ್ನು ಕ್ಲಿಕ್ಕಿಸಿದೆ. ಬನ್ನಿ ಹೆದರಬೇಡಿ  ನೋಡಿಬಿಡಿ.ಈ ಕಣ್ಣಾ ಮುಚ್ಚಾಲೆಯ  ಆಟ !!!!                                                                                   
ಈಜೋದ್ರಲ್ಲಿ ಇರೋ ಸುಖ ಗೊತ್ತೇ ಇರ್ಲಿಲ್ಲಾ !!!! ಹೂ ಅಂತೀರಾ ??ಉ ಹೂ ಅಂತೀರಾ ???
ಜೀವನ ಸಂಜೀವನ  ನನ್ನ ಜೀವಕೆ ನೀನೆ!!!!
ನಲಿದಾದುವಾ ವಯಸ್ಸಿದು ..............!!!!!
ಸರಿ  ನಾ ಹೋಗಿ ಬರುವೆ ............. ಮತ್ತೆ ನೀ ಎಂದು ಸಿಗುವೆ ???

ಭಾನುವಾರ, ಜೂನ್ 19, 2011

ಬನ್ನೇರು ಘಟ್ಟದ ಹುಲಿಯ ಮುಂದೆ ಕ್ಯಾಮರ ಆಡಿದ ಕಣ್ಣಾಮುಚ್ಚಾಲೆ !!!!



ಹಲೋ ಏನ್ ಸಮಾಚಾರ ???

ಕಳೆದಶನಿವಾರ ಹಾಗು ಭಾನುವಾರ [೧೧/೦೬/೨೦೧೧ ಹಾಗು ೧೨/೦೬/೨೦೧೧] ವಾರ ಎರಡು ದಿನ ಗೆಳೆಯರಾದ ಪ್ರಕಾಶ್ ಹೆಗ್ಡೆ ಹಾಗು ದಿಗ್ವಾಸ್ ಹೆಗ್ಡೆ ಜೊತೆ  ಬೆಂಗಳೂರಿನ ಬನ್ನೇರು ಘಟದ ದರ್ಶನ ವಾಯಿತು.ಅಲ್ಲಿ ಹಲವಾರು ಚಿತ್ರಗಳನ್ನು ತೆಗೆದೆವು. ಅದರಲ್ಲಿ  ನನಗೆ ಇಷ್ಟವಾದ  ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೇನೆ. ಹುಲಿರಾಯನ  ಗಾಂಭೀರ್ಯ ದೊಂದಿಗೆ ನನ್ನ ಕ್ಯಾಮರ ಕಣ್ಣಾಮುಚ್ಚಾಲೆ ಆಡಿದ್ದು ಹೀಗೆ.
ಹುಲಿ ಅಂದ್ರೆ ನಾನೇ ರೀ !!!!! ಸ್ವಲ್ಪ ಹತ್ತಿರ ಬನ್ನಿ!!!!
           

ನಾಲಿಗೆಗೆ ರುಚಿಯಾದ ಆಹಾರವೇ ಇಲ್ಲಿಲ್ಲಾ  ಕಣ್ರೀ !!!
ನನ್ನನ್ನು ಕಾಡಿಗೆ  ಬಿಟ್ರೆ  ಆಹಾಹ ಎಂತಹ ರುಚಿಯಾದ ಆಹಾರ ಸಿಗುತ್ತೆ ಗೊತ್ತಾ???
      
ನನ್ನ ಫೋಟೋ ಬೇಕಾ ??? ಹತ್ತಿರಾ ಬನ್ನಿ.!!!
ಹುಲಿಯ ಮಹಾತ್ಮೆಯೇ ಹೀಗೆ ಸ್ವಾಮೀ.

ಭಾನುವಾರ, ಜೂನ್ 5, 2011

ಮೈಸೂರಿನ ಅರಮನೆ ಬೆಳಕಿನ ಚಿತ್ತಾರದ ಕಣ್ಣಾ ಮುಚ್ಚಾಲೆ !!!!

ನನಗೆ ನಾನೇ ಸಾಟಿ!!!



ಮೈಸೂರಿನ  ಅರಮನೆ ಬಗ್ಗೆ ಹೇಳೋದೇ ಬೇಡ ಅದು ಪ್ರವಾಸಿಗಳ ಡಾರ್ಲಿಂಗ್ ಇದ್ದ ಹಾಗೆ .ಪ್ರತಿನಿತ್ಯ ಸಾವಿರಾರು ಕ್ಯಾಮರಾಗಳಲ್ಲಿ  ಲಕ್ಷಾಂತರ ಚಿತ್ರಗಳ ರೂಪ ಪಡೆದು ಮೆರೆಯುತ್ತಿದೆ.ಎಲ್ಲರೂ ಮೈಸೂರಿನ ಅರಮನೆಯನ್ನು ಹತ್ತಿರ ದಿಂದ ನೋಡಿರುತ್ತಾರೆ. ಆದರೆ ಅದೇ ಅರಮನೆಯನ್ನು ಚಾಮುಂಡಿ ಬೆಟ್ಟದ ಮೇಲಿಂದ ರಾತ್ರಿ ವೇಳೆ ನೋಡುವ ಮಜವೇ  ಬೇರೆ.ಕೆಳಗಿನ ಮೊದಲ ಐದು ಚಿತ್ರಗಳು ಚಾಮುಂಡಿ ಬೆಟ್ಟದ ಮೇಲಿನಿಂದ ತೆಗೆದದ್ದು , ಉಳಿದ ಚಿತ್ರಗಳು ಅರಮನೆಯ ಸಮೀಪ ಕ್ಲಿಕ್ಕಿಸಲಾಗಿದೆ.ಬನ್ನಿ ರಾತ್ರಿವೇಳೆಯಲ್ಲಿ ಮೈಸೂರಿನ ಅರಮನೆಯ ಬೆಳಕಿನ ಚಿತ್ತಾರದ ಕಣ್ಣಾಮುಚ್ಚಾಲೆ ನೋಡೋಣ!!!!
ಇದು ಎಂಥಾ ಲೋಕವಯ್ಯ
 ನಕ್ಷತ್ರ ಲೋಕದೊಳಗೆ ಬಂಗಾರದ ಅರಮನೆ!!!
ನೂರು ಕಣ್ಣು ಸಾಲದು!!!!
ಇತಿಹಾಸದ ನೆನಪಿನ ಹೊನ್ನಿನ ಅರಮನೆ!!!  

ತೆರೆದಿದೆ ಅರಮನೆ ಓ ಬಾ ಅತಿಥಿ !!!

ಯಾವ ಶಿಲ್ಪಿ ಕಂಡ ಕನಸೋ ನೀನು!!!
ಅಂತಃ ಪುರ  ಸುಂದರ ಅತೀ ಸುಂದರ !!!

ಜನಗಳ ಮನದ ಮಹಾರಾಜ!!!
ಇತಿಹಾಸದ ಕಗ್ಗತ್ತಲೆಯಲ್ಲಿ ಬೆಳಗಿರುವ ಹೊನ್ನಿನ ಅರಮನೆ!!!!!
ಗಂಧದ ಗುಡಿಯಲ್ಲಿ  ಮಲ್ಲಿಗೆ ಪರಿಮಳ ಚೆಲ್ಲಿ ಈ ಹೊನ್ನಿನ ಅರಮನೆ ನೆನಪಲ್ಲಿ!!!
ಹೊನ್ನಿನ ಅರಮನೆಗೆ ಮಂಜಿನ  ಚುಂಬನವೆ????[ನನ್ನ ಕ್ಯಾಮರಾಗೆ ಸಿಕ್ಕ ಅಪರೂಪದ ಚಿತ್ರಣ]

ಮಂಗಳವಾರ, ಮೇ 31, 2011

ಕಾರಂಜಿ ಕೆರೆಯಲ್ಲಿ ನವಿಲಿನ ಪ್ರಣಯ ನರ್ತನದ ಕಣ್ಣಾಮುಚ್ಚಾಲೆ !!!!







ನಾನೇ .......ರಾಜಕುಮಾರ !!!!!

ಸ್ವಲ್ಪ ದಿನಗಳ ಹಿಂದೆ ಮೈಸೂರಿನಲ್ಲಿ ಕಾರಂಜಿ ಕೆರೆಗೆ  ಪಕ್ಷಿ ವೀಕ್ಷಣೆಗೆ ಹೋಗಿದ್ದೆ. ಅಲ್ಲಿ ನನಗೆ ಬೋನಸ್ ಆಗಿ ಈ ನವಿಲು ರಾಜಕುಮಾರ ಪ್ರಣಯ ನರ್ತನ ಮಾಡಿ ಮನಸೆಳೆದ , ಆ ನವಿಲಿನ   ನಲಿವಿನ ನಾಟ್ಯ ದೃಶ್ಯಗಳು  ಮನಸೆಳೆದವು , ನಿಮ್ಮೊಂದಿಗೆ  ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇನೆ ಬನ್ನಿ  ಆನಂದಿಸಿ.ನಿಮಗೆ ಸ್ವಾಗತ.                                                                       
ಎಲ್ಲಿರುವೆ??????  ಮನವ ಕಾಡುವ ರೂಪಸಿಯೇ ........!!!!
ಬಾ ನಲ್ಲೆ.... ಬಾ ನಲ್ಲೆ.... ಮಧುಚಂದ್ರಕೆ ........!!!!

ಎಂದೆಂದೂ ನಿನ್ನನು ಮರೆತು .........ನಾನಿರಲಾರೆ ......!!!
ಬಾ ಚಕೋರಿ ,ಬಾ ಚಕೋರಿ ಚಂದ್ರ ಮಂಚಕೆ...........!!!!

ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ .............!!!!
ಕೆಂಪಾದವೋ ಎಲ್ಲ ಕೆಂಪಾದವೋ ............!!!!

ಈ ಚೆಲುವು ಒಲವು ನಿನಗಾಗಿ ಪ್ರಿಯೆ !!!
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ................!!!!!
ಬಾರೆ ಬಾರೆ ಚಂದದ ಚೆಲುವಿನ ತಾರೆ .........!!!!

ನಮ್ಮೂರ ಮಂದಾರ ಹೂವೆ ..........!!!!!!
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು............!!!!!!
ನಿನ್ನ ಪ್ರೀತಿ ನರ್ತನಕ್ಕೆ ಹಾಗು  ಹಾಡುಗಳಿಗೆ ನಾಚಿ ನೀರಾದೆ ಓ ನಲ್ಲಾ .........!!!!