ಸೋಮವಾರ, ನವೆಂಬರ್ 4, 2013

ಪುಸ್ತಕ ಬಿಡುಗಡೆಯಲ್ಲಿ ಸ್ಪೋಟಗೊಂಡ ನಗೆಯ ಬೆಳಕಿನ ದೀಪಾವಳಿ ಯಲ್ಲಿ ಕಣ್ಣಾ ಮುಚ್ಚಾಲೆ .......... !!!

ನವೆಂಬರ್ ಮೂರು ೨೦೧೩ ಕ್ಕೆ  ನಾವೆಲ್ಲಾ ಕಾತರದಿಂದ ಕಾಯುತ್ತಿದ್ದ ದಿನ ಬಂದೆ ಬಿಟ್ಟಿತ್ತು,  ವಿಶೇಷ ಏನೂ ಅಂದ್ರಾ ...?  ಅದೇ ನಮ್ಮ ಬ್ಲಾಗ್ ಲೋಕದ ಪ್ರೀತಿಯ ಹಿರಿಯರಾದ ಸುನಾಥ್ ಕಾಕ  , ನಮ್ಮ ಪ್ರೀತಿಯ ಪಡೆಯಪ್ಪನ್ ದಿನಕರ್ ಮೊಗೆರ , ಮಗುವಿನಂತಹ  ಮನಸಿನ ಬದರಿ ನಾಥ್ ಪಲವಳ್ಳಿ ಇವರುಗಳ  ಪುಸ್ತಕ ಬಿಡುಗಡೆ  ಕಾರ್ಯಕ್ರಮ , ದೀಪಾವಳಿಯ  ರಜೆಗಳ ಸಾಲು  ಜನ  ಎಷ್ಟು ಬರ್ತಾರೆ ಎನ್ನುವ ಗೋಜಲು , ಆದರೆ ಪ್ರೀತಿಯ ಕರೆಗೆ ಬರದಿಹರೆ  ನಮ್ಮ ಬ್ಲಾಗ್ ಮಂದಿ, ದೂರದ ಊರುಗಳಿಂದ , ವಿದೇಶದಿಂದ , ಜೊತೆಗೆ ಬೆಂಗಳೂರಿನ  ಜಂಜಾಟ ಮರೆತು  ಓಡೋಡಿ ಬಂದರು  ನಗೆಯ ದೀಪಾವಳಿಯ  ಪಟಾಕಿ ಹಚ್ಚಲು, ಈ ಪ್ರೀತಿಯ ಬೆಳಕಿನ   ದೀಪಾವಳಿಯಲ್ಲಿ  ಆಡೋಣ ಬನ್ನಿ ಹಾಸ್ಯದ ಕಣ್ಣಾಮುಚ್ಚಾಲೆ . ಇದು ಹಾಸ್ಯಕ್ಕಾಗಿ ಮಾತ್ರ ಯಾರೂ ತಪ್ಪು ತಿಳಿಯುವುದು ಬೇಡ . ಬನ್ನಿ ಪಟಾಕಿ ಬಿಟ್ಟಾಕಿ  ಹಾಸ್ಯಲೋಕಕ್ಕೆ ತೆರಳೋಣ .


ಅರೆ  ಇಲ್ನೋಡಿ   ಸ್ವಾಗತಿಸಲು ನಿಂತ ಮಂದಿಯನ್ನು

ನನ್ನ ಮೂಕಮನದ ಮಾತು ನಿನಗೆ ಕೇಳದೆ ಗೆಳೆಯ

ಪ್ರೀತಿಯ ಅಪ್ಪುಗೆ ಗೆ ಹೊಟ್ಟೆಗಳ  ಅಡ್ಡಿ

ಸ್ವಲ್ಪ  ನಿಲ್ಸಿ ಹಾಗೆಲ್ಲಾ ನನ್ನ ತಮ್ಮನ ಬಗ್ಗೆ ಹಾಸ್ಯ ಮಾಡಬೇಡಿ

ಒಹ್ ನೀವಾ  ಪರವಾಗಿಲ್ಲಾ   ಮುಂದುವರೆಸಿ

ಹೇಗೆ  ಕೀಟಲೆ ಮಾಡಲಿ ಎಂಬ ಬಗ್ಗೆ ಸ್ಕೆಚ್

ಮುಂದೆ ನೀವ್ ಹೋದಾಗ ಹಿಂದೆ ನಾ ಬರುವೆ ................... !

ಒಹ್ ಗೆಳೆಯ ಜೀವದ್  ಗೆಳೆಯ ................. ನಿಂಗೆ ಸ್ಯಾನೆ  ಪ್ರೀತಿ ಕಣೋ

ಅಪ್ಪಾಲೇ  ತಿಪ್ಪಾಲೆ

ಅಣ್ಣಾ  ಪ್ರಕಾಶಣ್ಣ ಬದರಿ ಯಾಕೋ ಅವರನ್ನ ಬಿಡ್ತಾ ಇಲ್ಲಾ

ನಮ್ ಕೈ ಇರೋದೇ ಇಷ್ಟುದ್ದಾ  ಇನ್ಸ್ವಲ್ಪ ಮುಂದೆ ಬನ್ನಿ

ಚಿಕ್ಕ ಮಗಳೂರ  ಪುಟ್ಟ ಮಲ್ಲಿಗೆ ಯಂತಹ  ಪುಟ್ಟಿ

ಅಯ್ಯೋ  ಅಣ್ಣಾ  .. ನೀವ್ ಇದ್ದೀರಾ ...?

ಇವರೋ ಫೋಟೋ ತೆಗೆಯೋಕೆ ಮುಂಚೆ  ನಿರ್ದೇಶನ ಮಾಡ್ತಾರೆ  ಕಣ್ರೀ

ನನಗೂ ಈ ಹುಡುಗರ ತರಹ  ಬ್ಯಾಚಲರ್ ಲೈಫ್ ಇದ್ದಿದ್ರೆ .....!!! ಅಂದ್ರೂ ಶ್ರೀಕಾಂತ್

ಭಕ್ತಿ ಭಾವದ ಈ ಪರಿ

ಮೂವರು ಸಿವಿಲ್ ಇಂಜಿನಿಯರ್ ಗಳು ಸೇರಿದರೆ   ಅದರ ಮಜಾನೆ ಬೇರೆ ಬಿಡಿ,

ಸಾಹಿತ್ಯದ  ಕಾಂಕ್ರೀಟ್ ಗೆ  ಜ್ಞಾನ ಎಂಬ ಸಿಮೆಂಟ್ ಬೇಕೇಬೇಕು  ಅಂದ್ರು ಸುನಾಥ್ ಕಾಕ

ರೀ ಬನ್ರೀ ಸುನಾಥ್ ಕಾಕನ  ಮಾತು ಕೇಳೋದು ಬಿಟ್ಟು ಪೆದ್ದರಂತೆ ಫೋಟೋ ತೆಗೆತಾ ಇದ್ದೀರಾ ಅಂದ್ರು  ಅಜಾದ್ ಸರ್

ಸುನಾಥ್ ಕಾಕ  ನಿಮ್ಮ ದರ್ಶನ ನಮಗೆ  ಜ್ಞಾನ ದರ್ಶನ ,

ಪಡೆಯಪ್ಪನ್  ಹಾಗು ಶಿವೂ ಜುಗಲ್ ಬಂದಿ , ಹಾಸ್ಯ ರಾಗ  , ನಗುವಿನ ತಾಳ

ಯಾಕೆ ಬ್ಲಾಗ್ ಬರೀತಾ ಇಲ್ಲಾ ಯಾರು? ಎಲ್ರೂ ಸೋಮಾರಿ ಆಗ್ಬಿಟ್ರ ...?

ಫೆಸ್ ಬುಕ್ ಬಿಟ್ಟು ಬ್ಲಾಗ್ ಬರೀರಪ್ಪಾ  .... ಒಳ್ಳೆದಾಗುತ್ತೆ

ಒಬ್ಬೊಬ್ಬರಿಗೆ ಒಂದೊಂದು ಚಿಂತೆ

ಸ್ನೇಹಲೋಕದ ಪಟೇಲರ ಜೊತೆ  ಅಶೋಕ್  ಶೆಟ್ರು

ಅಯ್ಯೋ ಇನ್ನು ತಿಂಡಿ ಬಂದಿಲ್ವಾ ...... ?



ಹುಡುಗರು ಏನೋ ಒಳ್ಳೆ ಕೆಲ್ಸಾ ಮಾಡ್ತಾ ಇದ್ದಾರೆ  , ಬನ್ನಿ ಹರಸೋಣ

ಇಲ್ಲಿ ಹೊಟ್ಟೆ ಹಸಿತಾ ಇದೆ ಇಲ್ಲಿ ..... ನಮ್ ಅಪ್ಪನಿಗೆ  ಕ್ಯಾಮರ ಚಿಂತೆ  , 

ಸರ್ ಜಿ  ಹೊಟ್ಟೆ ಹಸಿತಾ ಇದೆ ಆಲ್ವಾ ....??

ನಮ್ ಪಕ್ಷದ ಸದಸ್ಯತ್ವಕ್ಕೆ ಇನ್ನು ಸ್ವಲ್ಪ ಹೊಟ್ಟೆ ಬೇಕು ಶಿವೂ

ಸ್ವಲ್ಪ ಅಡ್ಜೆಸ್ಟ್  ಮಾಡ್ಕಂಡ್  ಒಂದು ಸದಸ್ಯತ್ವ ಕೊಡ್ಸಿ  ಬದರಿ ಜಿ,

ವೆಂಡರ್ ಕಣ್ಣು , ಇಟ್ಟಿಗೆ ಸಿಮೆಂಟು ಒಟ್ಟಿಗೆ ನಕ್ಕಾಗ

ಬಲು ಅಪರೂಪ ನಮ್ ಜೋಡಿ

ಬನ್ನಿ  ದೀಪಾವಳಿಯಲ್ಲಿ  ನಗೆಯ ಪಟಾಕಿ ಹಚ್ಚೋಣ  ಅಂದ್ರು ಅತ್ರಾಡಿ ಸುರೇಶ್  ಸರ್

ಈ ಇಬ್ಬರಲ್ಲಿ ಮನ ತುಂಬಿ ನಕ್ಕವರು ಯಾರು ..?

ಬಂದ್ರು ಸಾರ್  ಓ ಹೊ ... ಬಂದ್ರು ಸಾರ್ ಓ ಹೊ...       d o m

ಇಳಿದು ಬಾ  ತಟ್ಟೆ  ಲೋಟ ದೊಡನೆ ಗೆಳೆಯ ಇಳಿದು ಬಾ

ಕೊನೆಗೂ ಬಂತು  ನೋಡಿ  ಎಲ್ಲರಿಗೂ ಬೇಕಾದದ್ದು

ಎರಡು ಬ್ಯಾಗುಗಳ  ಸುಂದರ ಅಪ್ಪುಗೆ

ಅಜಾನು ಬಾಹು ಬಂಧನದಲ್ಲಿ  ನಿಟ್ಟುಸಿರ ನಗೆ ಚೆಲ್ಲಿ

ನನ್ನ ಭಾರವನ್ನು  ಸಮನಾಗಿ ಹಂಚಿದ್ದೇನೆ ಅಂದ್ರು ಮಹೇಶ್ [ d o m ]

ತುಂಟ  ಹೈಕಳ ಜೊತೆ  ಮತ್ಸ್ಯ ವಿಜ್ಞಾನಿ  some    ಶೋಧನೆ

ಮಣಿಕಾಂತ್  ಈ ತುಂಟ  ಹೈಕಳ ಸಹವಾಸ ಬೇಡ ಬನ್ನಿ  

ಯಾರ್ ಬರ್ತೀರಿ ಬನ್ರಿ  .... ನೋಡೇ ಬಿಡ್ತೀವಿ  ಒಂದು ಕೈ

ಫೋಟೋ ತೆಗೀಬೇಕು  ನಗ್ರಪ್ಪಾ  ...... ಪ್ಲೀಸ್

ಬಾರೆ ...... ಕುಂಟೆ  ಬಿಲ್ಲಿ ಆಡೋಣ

ಕಾದಿರುವೆವು ನಿಮಗಾಗಿ  ಓ ಅತಿಥಿಗಳೇ

ನಿರೂಪಕರೆ  ಎಲ್ಲಿದ್ದೀರಿ ....??

ಬಂತು ಬಂತು .....   ಕರೆಂಟು ಬಂತು , ಅಲ್ಲಲ್ಲಾ   ಮೇವು ಬಂತು

ತಿಂಡಿ ಬೇಕೇ ತಿಂಡಿ ....... ಬಿಸಿ ಬಿಸಿ ತಿಂಡಿ

 ಮೊಗ್ಯಾಮ್ಬೋ   ಖುಷ್  ಹು ವಾ .....!!

ಅಪರೂಪದ  ಚಿಂತಾಮಣಿಯ ಆಗಮನ

ಪ್ರಕಾಶಣ್ಣ  ನಿಜ ಹೇಳಿ  ನಿಮ್ ತರಾ ಆಗಲು ಏನ್ ಮಾಡ್ಬೇಕು ..?

ನಗುವುದೇ ಸ್ವರ್ಗ 

ಪದೆಯಪ್ಪನ್ ಜೊತೆ ಹಾಥ್  ಮಿಲಾವ್  ಅಂದ  ತುಂಟ  ಪ್ರದೀಪ್

ವೆಂಕಿ ಪಿಡಿಯ  ಜೊತೆ  ಕವಿವರ್ಯ ನಕ್ಕರು

ಅಯ್ಯೋ ಮಗು ನಾ ಬರೆದ ಪುಸ್ತಕ  ನಿನಗೆ ಭಾರವಾಯ್ತೆ......!

ಇಬ್ಬರು ಜ್ಞಾನಿಗಳ ಸಂಗಮ  ಕ್ಲಿಕ್ಕಿಸಿದ ಒಬ್ಬ ಅಜ್ಞಾನಿ

ಜಯದ ಲಕ್ಷ್ಮಿಯ  ಹಾದಿ ಹಿಡಿದ  ರಾಯರು

ಮೌನದ ಆಭರಣ ಹೊತ್ತ ದಂಪತಿಗಳು ಇವರು

ನೀವ್ ಅಂದ್ರೆ  ನನಗೆ ಇಷ್ಟಾ



ನಮ್ಮಣ್ಣ ಭದ್ರ ಬಾಹು ಎಲ್ಲಿ

ಯಾಕ್ರೀ ನಂ  ತಂಗಿನಾ   ಶಕ್ತಿ ದೇವತೆ ಅಂತೀರಾ ...??

ಇವರಿಬ್ಬರನ್ನು ನೋಡಿದ್ರೆ ಶಿರಸಿ ಜ್ಞಾಪಕ ಬಂದ್ರೆ ನಂ ತಪ್ಪಲ್ಲಾ .....!!

ಅಣ್ಣಾ  ಒಂದ್  ಫೋಟೋ ಪ್ಲೀಸ್

ಅಪ್ಪುಗೆಯಲ್ಲಿ ಅರಳಿದ  ನಗೆಯ ಹೂ

ಸ್ನೇಹ ಲೋಕದ  ತುಂಟ ಹೂಗಳು

ನಾನೂ ಸ್ನೇಹ ಲೋಕದವನೇ .. ಗೊತ್ತಾ ?

ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳಿಗೆ ....

ನನ್  ಪ್ರೀತಿಯ  ತಂಗಿಗೆ  ಏನೋ ಕೊಟ್ಟೆ ಗೊತ್ತಾ ...ಅಂದ  ಸಂಧ್ಯಾ ಪುಟ್ಟಿ

ಬದರಿಯ ಬಗ್ಗೆ ಏನ್ ಹೇಳೋದು ಅದೊಂದು ಪ್ರೀತಿಯ ಖಣಜ  

ನೀವಿಬ್ರು ಮೊಬೈಲ್ ನಲ್ಲಿ ಆಟಾ ಆಡ್ತೀರಿ  ನಾನು ತಿಂಡಿ ತಿಂದು ಬರುವೆ ...

ಬಾಯಲ್ಲಿ ತಿಂಡಿ ಇದೆ ಮಾತನಾಡಲು ಆಗುತ್ತಿಲ್ಲ ಮೇಡಂ

ಪ್ರಕಾಶಣ್ಣ ನಿಮ್ ಅಳಿಯಂದ್ರ ಗುಂಪಿಗೆ ನಾನು ಬರ್ಲಾ ..?

ಬಾಕಿ ಅಳಿಯನ್ದ್ರನ್ನ  ಕೇಳಬೇಕು  ಚಿನ್ಮೈ , ಆಮೇಲೆ ಬರೋವಂತೆ

ಕಾರ್ಯಕ್ರಮದ ಮೊದಲು ಸ್ವಲ್ಪ  ಸಿಹಿ ತಿನ್ನೋಣ ಬನ್ನಿ

ನನ್ನ ಸೃಷ್ಟಿ ಹೇಗಿದೆ .....?

ಎಲ್ಲಾ  ಉಡೀಸ್  ಪೇಂದ .... ಖಾಲಿಯಾಗೊಯ್ತು ಸಾರ್  ....!!!

ಅಯ್ಯೋ ಕಾಪಾಡಿ ಕಾಪಾಡಿ  ... ಈ ಪ್ರೀತಿಯ ಅಪ್ಪುಗೆ ಇಂದ

ಅಬ್ಬಬ್ಬ ಕೊನೆಗೂ  ಅಪ್ಪಿಕೋ ಚಳುವಳಿಯಿಂದ  ಮುಕ್ತನಾದೆ

ಬನ್ನಿ ಎಲ್ಲರೂ  ಕಾರ್ಯಕ್ರಮ ಶುರು ಮಾಡೋಣ

ಮೂರು ಪುಟ್ಟ ಮಕ್ಕಳ ತುಂಟಾಟ


ಸ್ನೇಹಲೋಕದ  ಸೌಮ್ಯ ಮುಖದ  ತುಂಟ ಮಕ್ಕಳು

ಕಾರ್ಯಕ್ರಮಕ್ಕೆ ನಾವ್ ರೆಡಿ .. ನಾವ್ ರೆಡಿ

ಭಕ್ತಿಯಿಂದ ವಿನಾಯಕನನ್ನು ಕರೆದರೂ ಇವರು

ಆ ಸಮಯ ಆನಂದ ಮಯ [ ಸರ್ವಿಸ್ ಆದ ಬದರಿ ಮುಖದಲ್ಲಿನ ನಗು ]

ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ  ಎಂದರು  ಮತ್ಸ್ಯ ವಿಜ್ಞಾನಿ  

ಪ್ರೀತಿಯ  ಸ್ವಾಗತದ ಜೊತೆಗೆ ಸಿಹಿಯಾದ ಪ್ರೀತಿ ಇತ್ತು

ವೇದಿಕೆಯಲ್ಲಿ  ಭಾವುಕತೆಯ  ಜೊತೆ ನಗೆಯ ಪಟಾಕಿ

ಆತ್ಮೀಯ ಸ್ವಾಗತ ನಿಮಗೆ ಶ್ರೀ ನಂಜುಂಡ ಸ್ವಾಮಿ ಸಾರ್ ಎಂದರು ಬ್ಲಾಗಿಗರು

ಬ್ಲಾಗ್ ಲೋಕದ ಬಗ್ಗೆ  ಮಾತಾಡಿದರು ಇವರು  ಬ್ಲಾಗ್ ತುಂಟರ ಬಗ್ಗೆ  ಮಾತಾಡಲಿಲ್ಲ 

ಇದೆಂತದು ಇದು  ಹೀಗೂ ಉಂಟೆ  ಎಂದಳು  ಮೊದಲ ಬಾರಿ ಬಂದ  ಪುಟ್ಟ ತಂಗಿ


ಓಯ್  ಅಲ್ಲಿ ನೋಡು ನಮ್ಮ ಫೋಟೋ ತೆಗೆತಾ ಇರೋದು

ದೀಪಾವಳಿಯ  ಸಂಭ್ರಮಕ್ಕೆ ಹೊರಬಂದ  ನಾಲ್ಕು ಪುಸ್ತಕಗಳು ಇವು  ಕೊಂಡು  ಓದಿ ನೀವು

ಪ್ರೇಕ್ಷಕರಿಗೂ  ವೇದಿಕೆಗೂ ಮಧ್ಯೆ  ಕ್ಯಾಮರ ಮಂದಿಯ ಅಡ್ಡ ಗೋಡೆ  ,

ಇವರೆಲ್ಲರ ಪ್ರೀತಿಯ ಸಾಕ್ಷಿ  ಈ ಸುಂದರ  ಗಳಿಗೆಗೆ

ಸುನಾಥ ಕಾಕ   ನಿಮ್ಮ ಮಾತು ನಮಗೆ ಪರಮಾನ್ನ

ಕ್ಯಾಮರ ತುಂಟಾಟ

ಯಾಕ್ರಪ್ಪಾ  ಕೈ ಕೈ  ಹಿಸುಕಿ ಕೊಳ್ಳುತ್ತಾ ಇದ್ದೀರಾ ..?? ಯಾರಾದ್ರು  ಕೈ .....?

ನಗುವೇ ಪ್ರೀತಿಯ ಹಾಡು

ಅಭಿಮಾನದ ಮಾತುಗಳು  ಇವರದು

ಕಾರ್ಯಕ್ರಮಕ್ಕೆ ಸಹಕಾರ ನೀಡಿದ  ಬಟನ್ನುಗಳು

ಮೈಕ್   ನಿಯಂತ್ರಣ ಇಲ್ಲಿತ್ತು

ನಿಲ್ಲದ ಜಡಿ  ಮಳೆಯನ್ನೂ ನಿಲ್ಲಿಸುವುದು ಹೇಗೆ

ಈ ಮಾತಿನ ಹಿಂದಿನ ಅರ್ಥವೇನು ??

ಅಯ್ಯೋ ಇಷ್ಟೊಂದು ಇಷ್ಟೊತ್ತು ಮಾತಾಡಿದ್ರೆ  ಹೇಗೆ....?

ಇತ್ತ ತುಂಟ ಹುಡುಗಿಯ  ತುಂಟ ನೋಟ , ಅತ್ತ ಆಕಳಿಕೆಯ  ನಾಗಾಲೋಟ

ಏನಾದ್ರೂ ಮಾಡ್ಕೊಳ್ಳಿ  ನಮ್ ಲೋಕ ನಮ್ದು



ಪ್ರೀತಿಯ ಅಮ್ಮನಿಗೆ ಸಹೋದರಿಯ  ಸಾಥ್

ಏನು ಮಾಡಲಿ  ನಾನೂ ಏನು ಹೇಳಲಿ ....  

ಅನಿವಾರ್ಯುದ  ಕಷ್ಟ ಬಂದಾಗ  ಕಣ್ಮುಚ್ಚಿ ಧ್ಯಾನಿಸ ಬೇಕು

ಪಾಪ ಎಂತಹ  ಮುಗ್ಧ  ಜನರಪ್ಪಾ ಇವರು .....!! ವ್ಯಂಗ  ಅಂತಾ ಭಾವಿಸ ಬೇಡಿ

ಗೆಳೆತನದಲ್ಲಿ   ಹೀಗೂ  ಉಂಟು ಸಾರ್ ...!

ತಸ್ಮೈ ಶ್ರೀ  ಗುರುವೇ  ನಮಃ

ಅಕ್ಷರ ಗೆಳೆತನ  ತಂದ ಸುಂದರ ಕ್ಷಣ

ಏನ್ರಪ್ಪಾ  ಇದು   ಬಾಂಬ್  ಅಲ್ಲಾ ತಾನೇ

 ಪ್ರೀತಿಯ ಹಿರಿಯ ಕವಿಗೆ  ಹೃದಯ ಸ್ಪರ್ಶಿ ಸನ್ಮಾನ

ಅಭಿನೇತ್ರಿಗೆ ಅಭಿಮಾನದ  ಸನ್ಮಾನ

ಸಾರ್ಥಕವಾಯಿತು ತಮ್ಮ  ನಿನ್ನ ಜೊತೆ  ಬಾಳಿದ್ದಕ್ಕೆ

ಬಿಡ್ ಬೇಡಿ .... ಬಿಡ್ ಬೇಡಿ  ಹಿಡ್ಕಳಿ  , ಸನ್ಮಾನಕ್ಕೆ ಸಿಗದೇ  ತಪ್ಪಿಸ್ಕೊಳ್ತಾರೆ ... ಪ್ರೀತಿಯ  ಪ್ರಕಾಶಣ್ಣ ನಿಗೆ ಸನ್ಮಾನ

ಅಭಿಮಾನದ ಜೊತೆ  ಪ್ರೀತಿಯ ನಗುವಿನ  ಸನ್ಮಾನ  ಶ್ರೀ ಜಿ. ಎನ್ . ಮೋಹನ್  ರವರಿಗೆ

ಚಿಕ್ಕದಾದ ಚೊಕ್ಕ  ಅಭಿಮಾನದ ಮಾತುಗಳು

ಗುಟ್ಟೊಂದ  ಹೇಳುವೆ ಹತ್ತಿರ  ಹತ್ತಿರ ಬಾ

ಬ್ಲಾಗ್ ಮಂದಿ  ಮಾಡ್ತಿದ್ದಾರೆ ಕಮಾಲ್ ಅಂದ್ರು ಅಭಿಮಾನದಿಂದ  

ಮಗುವಿನೊಡನೆ ಮಗುವಿನ ಮನಸಿನ ಬದರಿ



ಬದರಿ ಬರವಣಿಗೆ ಒಂದು ಮಹಾನ್  ಚೇತನ ನೀಡುತ್ತೆ

ಇನ್ಯಾವ ಪುಸ್ತಕ ತರಲಿ ಬೇಗ ಹೇಳು



ತುಂಟ ಕಣ್ಣಿನ ಸರದಾರರು ಇವರು,
ಪುಸ್ತಕ ಹೇಗಿದೆ ನೋಡೋಣ ಬನ್ನಿ

ಸುನಾಥ್  ಕಾಕರ  ಅದ್ಭುತ  ಕಾವ್ಯಯಾನ  ಓದಲು ಮರೆಯ ಬೇಡಿ

ಒಂದೊಂದು ಕವಿತೆಯಲ್ಲೂ  ಒಂದೊಂದು  ಪಾತ್ರದ ಅನ್ವೇಷಣೆ ಇಲ್ಲಿದೆ  ಒಮ್ಮೆ ಓದಿಬಿಡಿ


ದಿನಕರನ ಮನದ ಮಾತುಗಳು  ಮನಮುಟ್ಟುವಂತೆ  ಇಲ್ಲಿವೆ, ಬನ್ನಿ  ಈ ಪುಸ್ತಕದ  ಒಳಗೆ 


ನನಗೆ ಪುಸ್ತಕಗಳು  ಇಷ್ಟಾ ಆಯ್ತು  ಸಾರ್  

ಮಂಡ್ಯದ  ಹೈದನ ತಲೆಗೆ  ಬೆರಳಿನ  ಕಿರೀಟ

ಎಷ್ಟು ತಳ್ಳಿದರು  ಕದಲದ  ತಲೆ ಕಣ್ರೀ ಇದು

ನಗು ನಗುತಾ ನಲಿಯೋಣ ಬನ್ನಿ

ಅವರಿಬ್ಬರ ಫೋಟೋ ಅಷ್ಟೊಂದು ಯಾಕೆ  ತೆಗೀತೀರ  ಸಾರ್ 




ನಮ್ ಹುಡುಗರೂ ಸಾರ್

ಕೊಳಲಿನ ಮಾಂತ್ರಿಕನ ಹಾಡಿನ ಮೋಡಿ , ಎಲ್ಲರು ಬೆರಗಾದರು  ಇವರ ಆಸಕ್ತಿ ನೋಡಿ

ಪ್ರೀತಿಯ  ಮಾತುಗಳು  ಹೃದಯ ತಟ್ಟಿದವು

ಪ್ರೀತಿಯಿಂದ  ಆಗಮಿಸಿದ ಗಣ್ಯರಿಗೆ ವಂದನೆಗಳು

ಜೊತೆಗೆ   ನಿಮಗೂ ಸಹ ವಂದನೆಗಳು

 ಸುಂದರ ಕನ್ನಡ ಪದಗಳ ಪುಷ್ಪಾರ್ಚನೆ ಮಾಡಿದವರು ಇವರು

ನಾವು ಯುವಜನ ನಮಗೆ ಜಾಗ ಬಿಡಿ ಬರಲು ಸಿದ್ದರಾಗಿದ್ದೇವೆ

ನಮ್ ಲೋಕ  ನಮ್ ಪಾಡು , ನಮ್ ಹಾಡು

ತಪೋ ಬಂಗ  ಮಾಡಬಾರದು ಗುರುವೇ  ಹೆಗಲ ಮೇಲೆ ಕೈ ತೆಗೀ  ಕಂದ [ ಡಿ .ಒ .ಎಮ್ ]

ಕನ್ನಡ ಏನೇ ಕುಣಿದಾಡುವ  ಬಯಕೆ


ವೀರ ಕೇಸರಿ ಮಣಿಕಾಂತ್

ನಮ್ಮ ಓಟು ಪೂರಿ ಪಕ್ಷಕ್ಕೆ

ಪೂರಿ ಪಕ್ಷ ಜಿಂದಾಬಾದ್

ಬಿಲ್ಲನ್ನು  ಎತ್ತಿದ ಪಾರ್ಥನ ಮುಖದಲ್ಲಿ ಗೆಲುವಿನ ನಗೆ

ಹಪ್ಪಳ  ಹಂಚಿ ತಿನ್ನಲು  ಎಂ .ಒ .ಯು ಸಹಿ ಮಾಡಿದ ಸಮಯ

ಹೋಟೆಲ್ ಗೆ ದಾಳಿಯಿಟ್ಟ ಸ್ನೇಹಲೋಕದ  ಸೈನ್ಯ

ನಮ್ಮನ್ನು ಬಿಟ್ಟು ಊಟಕ್ಕೆ  ಬಂದಿದ್ದು ಯಾಕೆ ಮಹೇಶಣ್ಣ [ d o m ]

ಓ .ಕೆ . ನಾ ಸಾರ್ , ಈಗ ತಿನ್ನೋಕೆ ಬಿಡಿ

ನಗುವಿನಲ್ಲಿ ಅಡಗಿದೆ  ಹಸಿವಿನ ಕೋಪ

ಇದು ಎಂತಾ  ಲೋಕವಯ್ಯ

ತಾಳಿ ಒಂದು ಥರ್ಟಿ  ಕಾಫಿ ಕುಡೀತೀನಿ

ಯಾವ ಸುಂದರಿಯ ಫೋಟೋ ಗಿರೀಶು

ಊಟ ಮಾಡಿದ ನಂತರದ ಸಂತೃಪ್ತ  ಮುಖಗಳು ಚಿಮ್ಮಿಸಿದ ನಗು



ಯಾರ್ಗೂ  ಮನೆ ಯೋಚನೆ ಇಲ್ಲಾ  ಕಣ್ರೀ

ಅಪ್ಪನ ಬರುವಿಗೆ ಕಾದ  ಮಗಳು

ನಿಮ್ಮನ್ನು ನಗಿಸಿ ನಮಗೆ  ಸುಸ್ತಾಯ್ತು  ನಮ್ಮನ್ನು ಹೋಗಲು ಬಿಡಿ ಪ್ಲೀಸ್ ಮತ್ತೆ ಸಿಗೋಣ


ಹೇಗಿತ್ತು  ಹಾಸ್ಯದ ದೀಪಾವಳಿಯ  ಬೆಳಕಿನ ಕಣ್ಣಾಮುಚ್ಚಾಲೆ , ನಗುವಿನ ಮುಖದಿಂದ ನಿಮ್ಮ ಅನಿಸಿಕೆ ತಿಳಿಸಿ ಬಿಡಿ  ಈ ಬ್ಲಾಗಿನಲ್ಲಿ .

29 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲಣ್ಣ....
ನಿಮಗೆ ನೀವೇ ಸಾಟಿ....

ನಾನು .. ಅಮ್ಮ... ಮನೆಯವರೆಲ್ಲ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತಾ ಇದ್ದೀವಿ.....

ನಮ್ಮ ಹೊಟ್ಟೆ ನೋವಿಗೆ ನೀವೇ ಜವಾಬ್ದಾರರು....

ಕೋರ್ಟಿನಲ್ಲಿ ಕೇಸ್ ಹಾಕುತ್ತೇನೆ.... ಪರಿಒಹಾರ ಕೊಡಬೇಕು....

ಹ್ಹಾ.. ಹ್ಹಾ...,

Srikanth Manjunath ಹೇಳಿದರು...

ಫೋಟೋಗಳನ್ನು ಪಟ ಪಟ ತೆಗೆದು.. ಅದಕ್ಕೆ ಹಣೆ ಬರಹವನ್ನು ಲಟ ಪಟ ಬರೆದು ಹೊಟ್ಟೆಯಲ್ಲಿ ತಕ ತಕ ಮಾಡುವ ತಾಕತ್ ನಿಮಗೆ ಮಾತ್ರ ಮೀಸಲು.. ಪ್ರತಿಯೊಂದು ಚಿತ್ರವೂ ಅದಕ್ಕೆ ಕೊಟ್ಟ ಬರಹ ಅಧ್ಬುತ.. ಕ್ಯಾಮೆರ ಮತ್ತು ಕೀ ಬೋರ್ಡ್ಗಳ ಅಮೋಘ ಸಂಗಮ ಇಲ್ಲಿದೆ ಸೂಪರ್ ಬಾಲೂ ಸರ್.. ಸೂಪರ್

mshebbar ಹೇಳಿದರು...

ಸಮಾರಂಭಕ್ಕೆ ಬಂದಸ್ಟೇ ಖುಷಿಯಾಯ್ತು.TNX ಬಾಲಣ್ಣ.
-mshebbar

Blog ಹೇಳಿದರು...

ನಿಮ್ಮ ಬ್ಲಾಗ್ ನೋಡಿದೆ ಬಾಲು ಸರ್ ಪ್ರತಿಕ್ರಿಯಿಸಲು ಪದಗಳಿಗಾಗಿ ತಡಕಾಡುತ್ತಿರುವೆ ಒಂದೊಂದು ಚಿತ್ರಗಳೂ ಅದರ ಅಡಿ ಬರಹಗಳೂ ಅದ್ಭುತ

Dr.D.T.Krishna Murthy. ಹೇಳಿದರು...

ನೂರು ಕಣ್ಣು ಸಾಲದು ನಿಮ್ಮ ಚಿತ್ರಗಳ ನೋಡಲು !!!ನೂರಾರು ಮಾತು ಸಾಲದು ಅವುಗಳ ಅಂದ ಬಣ್ಣಿಸಲು.ಬಾಲಣ್ಣ ನಿಮಗೆ,ನಿಮ್ಮ ಪ್ರೀತಿಗೆ,ನಿಮ್ಮ ಸ್ನೇಹಕ್ಕೆ ನೀವೇ ಸಾಟಿ.ಒಂದಕ್ಕಿಂತ ಒಂದು ಸುಂದರ ಚಿತ್ರ !!! ಅದಕ್ಕೆ ತಕ್ಕ ಅಡಿ ಬರಹ !!! ಇದೋ ನನ್ನದೊಂದು ಸಲಾಮ್....,ನಿಮ್ಮ ಅದ್ಭುತ ಚೈತನ್ಯಕ್ಕೆ.ಓಂ ನಮೋ ಬಾಲಣ್ಣ !!! :-)

Mahesh Gowda ಹೇಳಿದರು...

karyakrama evaga sompoorna gonditu :) DOM

shivu.k ಹೇಳಿದರು...

ಬಾಲು ಸರ್,
ಕಳೆದ ಎರಡು ದಿನಗಳಿಂದ ಪಟಾಕಿ ಫೋಟೊಗ್ರಫಿ ಮತ್ತು ಅದರ ಬಗ್ಗೆ ಲೇಖನ ಬರೆಯುತ್ತಿದ್ದವನು ಅರ್ಧ ಮುಗಿಸಿ ಕ್ಲೋಸ್ ಮಾಡಿ ಮಲಗಬೇಕೆಂದುಕೊಂಡವನು ಅಚಾನಕ್ಕಾಗಿ ಇರಲಿ ಎಂದು ಸುಮ್ಮನೇ ಫೇಸ್ ಬುಕ್ ತೆರೆದು ನಿಮ್ಮ ಕಣ್ಣುಮುಚ್ಚಾಲೆ ಫೋಸ್ಟಿಂಗ್ ನೋಡಿದ ಮೇಲೆ ಏನು ಹೇಳಬೇಕೆನ್ನುವುದೇ ಗೊತ್ತಾಗಲಿಲ್ಲ. ಗಂಭೀರವಾಗಿ ಲೇಖನವನ್ನು ಬರೆಯುತ್ತಿದ್ದ ನನಗೆ...ಇದನ್ನು ನೋಡಿ ಸಕ್ಕತ್ ನಗು ಬಂತು. ಇನ್ನೂ ನಗುತ್ತಿದ್ದೇನೆ...ಏನು ಕಾಮೆಂಟಿಸಬೇಕೆಂದು ಗೊತ್ತಾಗುತ್ತಿಲ್ಲ....ನಿಮ್ಮ ಫೋಟೊಗ್ರಫಿ ಮತ್ತು ಅದಕ್ಕೆ ನೀವು ಕೊಟ್ಟ ಶೀರ್ಷಿಕೆಗಳು ಅದ್ಬುತ...ಈ ವಿಚಾರದಲ್ಲಿ ನಿಮಗೆ ನೀವೇ ಸಾಟಿ..

ಬಾರೆ ಕುಂಟೆಬಿಲ್ಲೆ ಆಡೋಣ..ಎನ್ನುವ ಸಾಲಿನಂತೆ ಮುಗ್ದತೆಯೊಳಗೆ ಸರಳತೆ ಬೆರೆತಂತೆ ಚಿತ್ರಗಳು ಮತ್ತು ಶೀರ್ಷಿಕೆಗಳು ಒಂದಾಗಿವೆ...

umesh desai ಹೇಳಿದರು...

superb photos and sir u r a master in giving captions

ಚಿನ್ಮಯ ಭಟ್ ಹೇಳಿದರು...

ಉದ್ದುದ್ದಾ ಕಮೆಂಟ ಹಾಕಕ್ ಪುರ್ಸೋತ್ತಿಲ್ಲಾ..ಏನೇನೋ ಹಾಕಕ್ ಇಷ್ಟಾ ಇಲ್ಲಾ..ಸಧ್ಯಕ್ಕೆ
"ಅನನ್ಯ ಅಮೋಘ ಅಪೂರ್ವ ಅಮರ ಅಹ್ಲಾದಕರ ಅಜರಾಮರ ಅತೀಮಧುರ ಹಾಗೂ ಅತೀ ರಂಜನೀಯ " ಅಷ್ಟೇ...ಉಳಿದದ್ದು ಬ್ರೇಕ್ ಕೆ ಬಾದ್..ಟೈ ಪ್ಲೀಸ್ !!!

Badarinath Palavalli ಹೇಳಿದರು...

ಸತ್ಯ ಹೇಳಲಾ ಸಾರ್,
ಒಂದು ಶಾಪಗ್ರಸ್ತ ಕವಿಯ - ಅಜ್ಞಾತ ಪೊರೆ ಕಳಚಿದ ದಿನ ಅದು.
ಮುಂಬೈನ ಅಶೋಕ್ ಸಾರ್ ಮುಂದೆ ಬಂದು ನನ್ನ ಕವನ ಸಂಕಲನ ಪ್ರಕಟಿಸದೇ ಇದ್ದರೆ!!!! ಯಾವತ್ತಿಗೋ ಮತ್ತೆ?

ಪ್ರಕಾಶಣ್ಣ ಮುಂದೆ ನಿಂತು ಆಯೋಜಿಸಿದರೆ, ಕುವೈತಿನಿಂದ ಬಂದು ಸ್ವಾಗತ ಭಾಷಣ ಮಾಡಿ ಹರೆಸಿದ ಆಜಾದಣ್ಣ. cover page ಮಾಡಿಕೊಟ್ಟ ಶ್ರೀಮತಿ. ಸುಗುಣ ಮಹೇಶ್ ಅವರುಗಳ ಒಲುಮೆಯನ್ನು ನಾನು ಮರೆಯಲುಮ್ಟೇ?

ಮೈಸೂರಿನಿಂದ ಹಬ್ಬ ಬಿಟ್ಟು ಬಂದ ಬಾಲಣ್ಣ, ನನಗಾಗಿ ಬಂದ ಶ್ರೀಮಾನ್ ಕುಟುಂಬ, ನನ್ನ ಅಪ್ಪಾಜಿ ಕೊಳಲು ಡಿ.ಟಿ.ಕೆ, ಚಿಕಮಗಳೂರಿನ ಭಾಗ್ಯ, ಭದ್ರಾವತಿಯಿಂದ ಹಿಂದಿರುಗಿದ ಸತೀಶ. ನನಗಾಗಿ ಬಂದ ಎಲ್ಲ ಬ್ಲಾಗರುಗಳು - ಮುಖ ಪುಟ ಸ್ನೇಹಿತರನ್ನೂ ನಾನು ಮರೆಯುವುದುಂಟೇ!

ಅಂದು ಪ್ರಕಾಶಣ್ಣ, ಬಾಲಣ್ಣ, ಶ್ರೀಮಾನ್ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು... ಖುಷಿಯಾಗಿ ಹೋದೆ.

I must be thank full to u all...

Badarinath Palavalli ಹೇಳಿದರು...

Best captions:
ಪ್ರೀತಿಯ ಅಪ್ಪುಗೆಗೆ ಹೊಟ್ಟೆಗಳ ಅಡ್ಡಿ
ಅಣ್ಣಾ ಪ್ರಕಾಶಣ್ಣ ಬದರಿ ಯಾಕೋ ಅವರನ್ನ ಬಿಡ್ತಾ ಇಲ್ಲಾ
ನನಗೂ ಈ ಹುಡುಗರ ತರಹ ಬ್ಯಾಚಲರ್ ಲೈಫ್ ಇದ್ದಿದ್ರೆ .....!!! ಅಂದ್ರೂ ಶ್ರೀಕಾಂತ್
ಬಾರೆ ...... ಕುಂಟೆ ಬಿಲ್ಲಿ ಆಡೋಣ
ಮೊಗ್ಯಾಮ್ಬೋ ಖುಷ್ ಹು ವಾ .....!!
ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳಿಗೆ ....
ಬದರಿಯ ಬಗ್ಗೆ ಏನ್ ಹೇಳೋದು ಅದೊಂದು ಪ್ರೀತಿಯ ಖಣಜ


ultimate

ಆ ಸಮಯ ಆನಂದ ಮಯ [ ಸರ್ವಿಸ್ ಆದ ಬದರಿ ಮುಖದಲ್ಲಿನ ನಗು ]

Santhoshkumar LM ಹೇಳಿದರು...

ಖುಷಿಯಂದ್ರೆ ನಾ ಕೂತಿದ್ದ ಜಾಗ, ನಾ ಬಂದ ಸಮಯ ನಿಮ್ಮ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ !!

ಇಲ್ಲಾಂದ್ರೆ ನನ್ನ ಫೋಟೋಗೆ ಅದ್ಯಾವ ಕ್ಯಾಪ್ಶನ್ ಕೊಡ್ತಿದ್ರೋ . ಹಹಹ :-)

ಸೂಪರ್ ಆಗಿದೆ..

Pradeep Rao ಹೇಳಿದರು...

ಬಾಲು ಸರ್... ಪ್ರತೀ ಸಲದಂತೆ ನಮ್ಮ ನಿರೀಕ್ಷೆಗೆ ಮೀರಿ ಅದ್ಭುತ ಚಿತ್ರಗಳನ್ನು ನೀಡಿದ್ದೀರಾ... ನಿಮ್ಮ captions ಎಂದಿನಂತೆ ಬಿದ್ದು ಬಿದ್ದು ನಗುವ ಹಾಗೆ ಮಾಡಿತು... ನಮ್ಮೆಲ್ಲರನ್ನು ನಗೆಯಲ್ಲಿ ತೇಲಿಸಿದ್ದಲ್ಲದೆ ಮಧುರ ಕ್ಷಣಗಳನ್ನು ನಮ್ಮ ನೆನಪಿಗಾಗಿ ಸೆರೆ ಹಿಡಿದು ಕೊಟ್ಟಿದ್ದೀರ.. ತುಂಬ ತುಂಬಾ ಧನ್ಯವಾದಗಳು...

ಈಶ್ವರ ಹೇಳಿದರು...

super photos and captions :)

ಭಾವಲಹರಿ ಹೇಳಿದರು...

ಒಂದೊಂದೇ ಹಲಬಗೆಯ ಹೂಗಳ ಪೋಣಿಸಿ ಕಟ್ಟಿದ ಹೂಮಾಲೆಯಂತೆ ಇದೆ ಈ ನಿಮ್ಮ ಪ್ರಯತ್ನ. ಅದರಲ್ಲೂ ಪೋಟೋಗಳಿಗೆ ಕೊಟ್ಟ ಅಡಿ ಬರಹ ಹೊಟ್ಟೆ ಹುಣ್ಣಾಗಿಸುತ್ತೆ ಬಾಲು ಸರ್.

Jayalaxmi ಹೇಳಿದರು...

ಮತ್ತೊಮ್ಮೆ ಸಮಾರಂಭವನ್ನ ಅನುಭವಿಸಿದಷ್ಟು ಖುಷಿಯಾಯ್ತು ಫೋಟೋಸ್ ಮತ್ತು ಅವುಗಳ ಅಡಿ ಬರಹ ನೋಡಿ. :)

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

Super photo s and Captions Anna..:)

ಜೋಗಿತಿ ಹೇಳಿದರು...

ಸುಪರ್ ಪೋಟೋ ಸರ್.. ಪೋಟೋಗಳಿಂದ ಕಾರ್ಯಕ್ರಮಕ್ಕೆ ಹೋಗಿ ಬಂದಷ್ಟೇ ಖುಷಿ ಆಯ್ತು. ಎಲ್ಲೋ ಒಂಚೂರು ಬೇಸರವೂ ಆಯ್ತು ಅನ್ನಿ. ಮಿಸ್ ಮಾಡ್ಕೊಂಡ್ವಿ ಇಷ್ಟೊಳ್ಳೆ ಸ್ನೇಹಬಳಗದಲ್ಲಿ ಸೇರುವ ಕ್ಷಣಗಳನ್ನ ಅಂತ. ಅದೇನೇ ಇರಲಿ. ದೀಪಾವಳಿಯ ಶುಭ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ಎಲ್ಲ ಪುಸ್ತಕಗಳು ದೀಪಾವಳಿ ಕಡುಬಿನಂತೆ ಬೇಗ ಬೇಗ ಕಾಲಿಯಾಗಲಿ. :) ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.

ವನಿತಾ / Vanitha ಹೇಳಿದರು...

Thanks for giving us nice photos :)

Shashi jois ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shashi jois ಹೇಳಿದರು...

ಬಾಲಣ್ಣ,

ಪ್ರಕಾಶಣ್ಣ ಹೇಳಿದ ಹಾಗೆ ನಿಮಗೆ ನೀವೇ ಸಾಟಿ!!!!ನಿಮ್ಮ ಫೋಟೋಗ್ರಫಿ ಬಗ್ಗೆ ಎರಡು ಮಾತಿಲ್ಲ !!!

ನಿಮ್ಮ ಹಾಥ್ ನಲ್ಲಿ ಕ್ಯಾಮರ ಸಾಥ್ ಸೊಗಸಾಗಿ ಮೂಡಿ ಬಂದಿದೆ !!!! . ನಿಮ್ಮಫೋಟೋ ದಷ್ಟೇ ನಿಮ್ಮ ಹಾಸ್ಯ ಅಡಿಬರಹ ಸೂಪರ್ ...

ಸಿರ್ಸಿ ಅಣ್ಣ -ತಂಗಿ ಸುದ್ದಿಗೆ ಬಂದ್ರೆ ಸುಮ್ಮನಿರಲ್ಲ ಹೇಳಿದ್ದೀನಿ ಹಹಹ

ಫೋಟೋ ನೋಡುವಾಗ ಕಾರ್ಯಕ್ರಮದ ನೆನಪು ಮರಳಿ ಬರಿಸುವ ಯತ್ನ !!!

ಮನಸು ಹೇಳಿದರು...

ನಾವು ಕಾರ್ಯಕ್ರಮಕ್ಕೆ ಬರದಿದ್ದರೂ ನಿಮ್ಮ ಪೋಟೋಗಳು ಮತ್ತು ಅದಕ್ಕೆ ತಕ್ಕಂತ ಶೀರ್ಷಿಕೆ ವಿವರ ಎಲ್ಲಾ ಕಣ್ಣ ಮುಂದೆ ನಡೆದಂತೆ ಇದೆ. ಅಬ್ಬಾ ಎಂತಾ ಪೋಟೋಗಳು ಸಕ್ಕತ್ ಕ್ಲಾಸಿಕ್ ಧನ್ಯವಾದಗಳು ಸರ್ ಸದಾ ನಿಮ್ಮ ಬರವಣಿಗೆಗೆ ನೀವೇ ಸಾಟಿ. ಧನ್ಯವಾದಗಳು

Ramesh Rammy ಹೇಳಿದರು...

Thumba channagidhe sir

ಮನಸ್ವಿ ಹೇಳಿದರು...

ಕಾರ್ಯಕ್ರಮಕ್ಕೆ ಬಂದಷ್ಟೇ ಖುಷಿ ಆಯಿತು... ಅದೆಷ್ಟು ಫೋಟೋಸ್ ಇದೆ.. ಕ್ರಮಸಂಖ್ಯೆ ಇದ್ದಿದ್ರೆ ಎಷ್ಟಾಗ್ತಿತ್ತೋ ಏನೋ... ಕ್ಯಾಪ್ಷನ್ಗಳು ಚಿತ್ರದೊಂದಿಗೆ ಬೆರೆತಿದೆ, ಅದೇನೋ ಹೇಳ್ತಾರಲ್ಲ, ಅದೇ ಸಿಂಕ್ ಆಗಿದೆ ಅಂತ ಅದೇ,,,,,,,,,, :)

ಸತೀಶ್ ನಾಯ್ಕ್ ಹೇಳಿದರು...

ಬಾಲು ಸಾರ್.. ಎಲ್ಲಾ ಚಿತ್ರಗಳೂ ಬಹಳ ಚೆನ್ನಾಗಿ ಮೂಡಿ ಬಂದಿವೆ. ಅವುಗಳ ಅಂದ ಚೆಂದವನ್ನ ಮತ್ತಷ್ಟು ಹೆಚ್ಚಿಸಿದ್ದು ಅವುಗಳ ಅಡಿ ಬರಹಗಳು.. ಟೈಮಿಂಗ್ ನೋಡಿ ಕ್ಲಿಕ್ ಮಾಡುವ ನಿಮ್ಮ ಕೈ ಬೆರಳುಗಳದ್ದು ಅದ್ಭುತ ಅನುಭವ ಬೆರೆತ ಕೈಚಳಕ.. ಒಂದಷ್ಟು ಚಿತ್ರಗಳು ನಗಿಸಿವೆ.. ಒಂದಷ್ಟು ಮೋಹಿಸಿವೆ.. ಒಂದಷ್ಟು ನಿಬ್ಬೆರಗಾಗಿಸಿವೆ.. ಮತ್ತೊಂದಷ್ಟು ಚಿತ್ರಗಳು ನಿಮ್ಮ ಮೇಲಣ ಅಭಿಮಾನವನ್ನ ಮತ್ತೂ ಜಾಸ್ತಿಯಾಗುವಂತೆ ಮಾಡಿವೆ. ನಮ್ಮೆಲ್ಲರಿಗೂ ಒಬ್ಬರೇ ಬಾಲಣ್ಣ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು. :)

bilimugilu ಹೇಳಿದರು...

ಫೋಟೋಗಳು ತೆಗೆಯುವುದು ಮಾತ್ರವಲ್ಲ, ಅದಕ್ಕೆ ಮನಸೂರೆಗೊಳ್ಳುವ ಶೀರ್ಷಿಕೆ ಬರೆದು ಇನ್ನಷ್ಟು ಚೆ೦ದಗೊಳಿಸುವ ನಿಮ್ಮ ಕಲೆಗೆ ಹ್ಯಾಟ್ಸ್ ಆಫ಼್ ಬಾಲು ಸರ್. ತು೦ಬಾ ಚೆನ್ನಾಗಿದೆ, ಸು೦ದರ ಕಾರ್ಯಕ್ರಮ ಮತ್ತೊಮ್ಮೆ ಕಣ್ಮು೦ದೆ ಸುಳಿದ೦ತಾಯಿತು.

Unknown ಹೇಳಿದರು...

ಸೂಪರ್ ಬಾಲಣ್ಣ ...
ದೀಪಾವಳಿಯ ಆ ದಿನ ನಿಜಕ್ಕೂ ನಯನ ಸಭಾಂಗಣದಲ್ಲಿ ಎಲ್ಲರೂ ಖುಷಿಯಾಗಿದ್ರು ಅಲ್ವಾ .
ಚಂದದ ಫೋಟೋಗಳು ..ಅಷ್ಟೇ ಚಂದದ ಅಡಿ ಮಾತುಗಳು ತುಂಬಾ ಇಷ್ಟವಾಯ್ತು.
ಅದಕ್ಕೆ ಹೇಳಿದ್ದು ಕ್ಯಾಮರಾ ಇಲ್ಲದೇ ಅವರು ಬಾಲಣ್ಣ ಆಗಲಾರರು ಅಂತಾ ;)
ಅಂದ ಹಾಗೆ ಅವತ್ತಿನ ಚಾಲೆಂಜ್ ನಾ ಮಾತು ಉಳಿದುಕೊಂಡಿದೆ ..ನೆನಪಿರ್ಲಿ ;)

ಮೌನರಾಗ ಹೇಳಿದರು...

ಬಾಲು ಸರ್...
ಅಬ್ಬಾ ಅದೆಂತ ಚಂದ ಚಂದ ಫೋಟೋ ಹಾಕಿದ್ದೀರಿ...? ಕೆಳಗೆ ಅದಕ್ಕೊಪ್ಪುವ ಕ್ಯಾಪ್ಶನ್ಸ್ ಬೇರೆ... ನನ್ನದೊಂದು ಫೋಟೋ ಇರಬಾರದಿತ್ತಾ ಇಲ್ಲಿ...?
ಎಂದಿನಂತೆ ಸೂಪರ್ ....

ಶಿವಪ್ರಕಾಶ್ ಹೇಳಿದರು...

Caption Balannanige Jai... Nice photos :)