ಸೋಮವಾರ, ಡಿಸೆಂಬರ್ 11, 2017

ತುಂಟ ಮನಸುಗಳ ಜತೆಯಲ್ಲಿ ಹಾಸ್ಯದ ಕಣ್ಣಾಮುಚ್ಚಾಲೆ. ..!




ಇನ್ನೂ  ಯಾರೂ ಬಂದಿಲ್ವಾ... !




ಕಳೆದ ವಾರ ಅಂದ್ರೆ ೯ ನೆ ನವೆಂಬರ್  ೨೦೧೭ ರಂದು  ಡಬಲ್ ಧಮಾಕ  ಇತ್ತು, ವಿಶೇಷ ಏನಪ್ಪಾ  ಅಂದ್ರೆ  ಹಳೆಯ  ಗೆಳೆಯರ ಬಳಗದ ಜಾತ್ರೆ ಜೊತೆಗೆ  ನಮ್ಮ dom ಮಹೇಶ್  ಹುಟ್ಟುಹಬ್ಬದ ಸಂಭ್ರಮ . ಇನ್ನೇನು  ವಯಸ್ಸಿನ ಅಂತರವಿಲ್ಲದೆ  ಬೆರೆಯುವ  ಮನಸುಗಳು ಪರಸ್ಪರ ಪ್ರೀತಿ ಗೌರವಗಳಿಂದ   ತುಂಟಾಟ ಆಡಿದ್ದವು, ಅದರ ಬಗ್ಗೆ ಅಕ್ಷರಗಳಲ್ಲಿ ಹೇಳುವ ಸಾಹಸ ಮಾಡಲಾರೆ, ಕೆಲವು ದೃಶ್ಯಗಳ  ನೋಟವನ್ನು ನಿಮ್ಮ ಮುಂದೆ ಇಡುತ್ತೇನೆ, ಇಷ್ಟಾ ಆದ್ರೆ ನಕ್ಕು ಬಿಡೀ, ಇಲ್ಲಾಂದ್ರೆ ನಿಮ್ಮ ಮುಂದಿನ  ಕಂಪ್ಯೂಟರ್ ಸ್ಕ್ರೀನ್ ಗೆ   ಕೋಪದಿಂದ ಒಂದು ಪಂಚ್  ಮಾಡಿ. ಇನ್ನೇಕೆ  ತಡ  ಬನ್ನಿ  ಜೊತೆಯಾಗಿ ನಗುತ್ತಾ  ಸಾಗೋಣ.


ಪ್ರಕಾಶಣ್ಣನ ಉದ್ದನೆಯ  ಲೆನ್ಸಿನ  ಕ್ಯಾಮರಾ ಕಂಡು  ಹೆದರಿ ನಿಂತ  ಉಮೇಶ್ ಸರ್  








ಎಲ್ರಿಗೂ  ನಮಸ್ಕಾರ   ಅಂದವು   ತುಂಟ ಮನಸುಗಳು 




 ಪ್ರಮಾಣ  ವಚನಕ್ಕೆ ಸಿದ್ದವಾದ ತುಂಟಾಟದ  ಸರದಾರರು 





ಸಾರಿ  ಜಿಂಕೆಮರಿ  .....! ನೀನು ನನ್ನ ಜೊತೆ ಬರ್ಬೇಕಿತ್ತು. 




ತುಂಟ ನಗುವಿಗೆ  ಸಾಥ್ ನೀಡಿ   ಕುಣಿದಾಡಿದ   ಕೆಂಚ ಮೀಸೆ , 





ಇನ್ನೇನು ವಿಶೇಷ ಇಲ್ಲಾ  ಸಾರ್ ,  ಮದುವೇ    ಆಗೋಯ್ತು  ಅಷ್ಟೇ 



ನಾನ್   ಮಾತಾಡ್ತಾನೆ  ಇದ್ದೀನಿ , ನೀವಿಬ್ರೂ  ಮೊಬೈಲ್  ಹಿಡ್ಕೊಂಡು   ಉತ್ತರ ಕೊಡ್ತಾನೆ ಇಲ್ಲಾ ..... !






ಅವರವ್ರ್  ಇಷ್ಟಾ  .... ಬಂದಂಗೆ   ಸಿದ್ಧವಾಗುತ್ತಿರುವ  ಮನಸುಗಳು. 







ಪತ್ನಿಯು  ಖುಷಿಯಿಂದ  ನಕ್ಕಾಗ  ಪತಿಯ  ನಗು ಇಷ್ಟೇ ಪ್ರಮಾಣದಲ್ಲಿರಬೇಕು  ಎಂಬ  ನಿಯಮಕ್ಕೆ ಉದಾಹರಣೆ ಇಲ್ಲಿದೆ.





  ಏನ್ಮಾಡಿದ್ರೂ   ನಂ ಹಸ್ಬೆಂಡು   ನಗೋದು ಇಷ್ಟೇ ಸಾರ್ 




ಕ್ಯಾಮರಾ  ದೂರದಲ್ಲೇ ಇರಲಿ  ಹತ್ತಿರದಲ್ಲೇ ಇರಲಿ ನಮ್ಮ ನಗು ಇಷ್ಟೇ . 




ನೀನ್  ಬರ್ಲಿಲ್ವಲ್ಲ  ಅದ್ಕೆ  ನಿನ್ನ  ಸ್ಕಾರ್ಫ್   ತಲೆಗೆ  ಕಟ್ಟಿಕೊಂಡು ಬಂದೆ  ಚಿನ್ನ . 

ಒಂದು ಮಳೆ ಬಿಲ್ಲೂ...   ಅಂತಾ ಹಾಡ್  ಹೇಳ್ತೀನಿ  ಸುಮ್ನಿರು  ಚಿನ್ನ 






ಉದ್ದದ  ಲೆನ್ಸ್  ಹಾಕಿದ್ರೂ  ಜಿಂಕೆಮರಿ   ಕಾಣಿಸ್ತಾ  ಇಲ್ಲ 



ಓ   ಇದು  ನಮ್   ಫೋಟೋನಾ ..... !





ಎಲ್ಲೀ  ನನ್ನ ಅರಗಿಣಿಯು  ಅಂತಾ  ಉಮೇಶಣ್ಣ    ಉಷಾ  ಅವರನ್ನು  ಹುಡುಕಾಡಿದ  ಸಮಯ . 




ನನ್   ಕಾಲೇಜಿನ  ದಿನಗಳ ನೆನಪು ಬರ್ತಾ ಇದೆ. 





ಹರೆಯದ ಮನಸುಗಳು  ....ಪಾಪ ಖುಷಿಯಾಗಿ ಇರ್ಲಿ   ಆಮೇಲೆ ಇದ್ದೇ  ಇದೆ 






ಅರೆ   ನಾನೂ  ಹೀಗೆ ಮಾಡಿದ್ದೆ    ಬಸವನಗುಡಿ   ಪಾರ್ಕಲ್ಲಿ .  






ಲಕ್ಶ್ಮಿಯ  ಪತಿಯೇ  ನನ್ನ ಜೊತೆಯಲ್ಲಿರಲು  ನನಗೆ ಇನ್ಯಾವ  ಆತಂಕವಿಲ್ಲ




ಇಲ್ಲಿ  ನಗೆಯ ಹಬ್ಬಾ  ಮಾಡ್ತಾ ಇದ್ದೀನಿ  

ಈಗ್ತಾನೇ   ವಿದ್ಯಾರ್ಥಿ ಭವನ್ ನಲ್ಲಿ    ದೋಸೆ  ತಿಂದೆ 

ವಿಜ್ಞಾನಿಯ ತುಂಟ ನಗು  ಜೊತೆ ಜೊತೆಗೆ   ಸುಲೋಚನದ ಒಳಗೆ  ಮಿಂಚಿದ  ನಯನ.  





ಅಣ್ಣಾ ...  ವಿದ್ಯಾರ್ಥಿ ಭವನ್  ದೋಸೆ  ಸರಿಯಾಗಿ ತಿನ್ನೋಕೆ ಆಗ್ಲಿಲ್ಲ. 

ಒಂದು ಹಿನ್ನೋಟ ......   ಯಾರನ್ನು ಕಂಡು ....?

ಬರುವೆಯಾ  ಗೆಳತೀ ,  ಜೊತೆಯಾಗಿ ಸಾಗೋಣ  


ಹೀಗೆ ನಿಂತೂ ಸಹ  ಧ್ಯಾನ ಮಾಡಬಹುದು , ಗೊತ್ತಾ...?


 ರೀ ನಾನು ಕಣ್ಣು ಮುಚ್ಚಿರ್ಲಿಲ್ಲ  ಗೊತ್ತಾಯ್ತಾ ....?

ಅಣ್ಣಾ   ನನ್  ಹುಟ್ದಬ್ಬಕ್ಕೆ   ಎಷ್ಟ್  ಕೇಜಿ  ಕೇಕ್  ಬತ್ತದೆ  ಗೊತ್ತಾ ...?

ಸೂಪರ್ ಮ್ಯಾನ್ ದು ಕೆಂಪು  ಬಟ್ಟೆ ನಂದು   ನೀಲಿದು  ಅಷ್ಟೇಯಾ .... 

ಅಣ್ಣಾ    ಹಿಂಗ್   ನಿಂತ್ ಕಳ್ಳಾ ...? ಓ .ಕೆ .ನಾ ..?

ಏನೇ ಆದ್ರೂ  ಅವ್ಳಿರ್ಬೇಕಿತ್ತು .....?

ಬಾಲಣ್ಣಾ   ನೋಡ್ತಾ ಇದ್ದೀನಿ  ಹುಷಾರ್ ... 

ಅಳಿಮಯ್ಯನ  ಚಿತ್ರ  ತೆಗೆಯಲು ಮಾವ ಪಟ್ಟ ಶ್ರಮದ ದರ್ಶನ 



ಅಳಿಮಯ್ಯ   ಹಾಗೆ ಇರು ಒಳ್ಳೆ ಚಿತ್ರಾ ಬರ್ತಾ ಇದೆ. 

ಇವತ್ತು  ಯಾಕೋ ಗೊತ್ತಿಲ್ಲ  ಜಿಂಕೆ ಮರಿ ಬಹಳ ನೆನಪಾಗ್ತಾ ಇದೆ. 

 ಕಾಲೇಜಿನ ದಿನಗಳನ್ನು  ನೆನೆಯುತ್ತಾ   ತನ್ನ  ಉಷೆಯನ್ನು  ಹಿಂಬಾಲಿಸಿದ  ಉಮೇಶಣ್ಣ  ....



ಪಾರ್ಕ್ ಗೆ ಓಯ್ತಾ  ಇದ್ದೀರಾ ...? ಕಳ್ಳೇ  ಕಾಯ್  ತಗೋಳಿ .  ಬದುಕು ಕಳ್ಳೇಕಾಯ್  ತರಾನೇ ... ಆಲ್ವಾ .. ?





ನನ್   ಪುಣ್ಯ  ಕಣ್ರೀ  ಹಸಿರ ನಡುವೆ  ಕುಳ್ಳರಿಸಿ  ನೆರಳಿಗೆ ಕೊಡೆ  ಕೊಟ್ಟಿದ್ದಾರೆ ....!  ಅಂದ್ರೂ  ಪೂಜ್ಯ  ಡಿ .ವಿ .ಜಿ 

ನಾನು ಯಾರು ಅಂತಾ   ಹೇಳೋಕೆ  ನಾನೇ  ಬೋರ್ಡ್   ಹಾಕೋಬೇಕಾಗಿದೆ  ಇವತ್ತು .... !


ಈ ಪೋಸ್    ಸಾಕೇನ್ರೀ ...?

ಈ ಕ್ಲೋಸ್   ಅಪ್  ಲುಕ್  ಓ .ಕೆ .ನಾ... ?

  ಪ್ಯಾಕ್ ಅಪ್ .....    ! ನೋ  ಮೊರ್   ಶಾಟ್ಸ್  ಪ್ಲೀಸ್ 

ಇವ್ರು   ಕಾಲ್  ಶೀಟ್ ತಗೋಂಡಿಲ್ಲಾ   ನೋಡ್ರೀ  ....  ಅದಕ್ಕೆ ಪ್ಯಾಕ್ ಅಪ್ ಮಾಡಿಸ್ತೇ .  

ಈ ಚಿತ್ರ ನೋಡಿ ರಾಮ ಸೇತು  ನೆನಪಿಗೆ ಬಂದ್ರೆ ನನ್ನ ತಪ್ಪಲ್ಲ 

ಭಾರವಾದ  ಕೇಕನ್ನು  ತಂದಿಟ್ಟ  ಗುಂಡನನ್ನ ಕಂಡ  ಎಲ್ಲರೂ ಸಹಾನುಬೂತಿ  ಸೂಚಿಸಿದರು. 




ಕೇಕ್  ಕತ್ತರಿಸುವ ಮೊದಲು  ಪ್ರಾರ್ಥನೆ ಮಾಡಲು  ಉಷಾ  ಉಮೇಶ್  ಅವರಿಗೆ ಅಭಿಮಾನಿಗಳ ಒತ್ತಾಯ. 





ನಾನು  ಚಿಕ್ಕ ವಯಸ್ಸಲ್ಲಿ  ಗೋಲಿ  ಆಡ್ತಾ ಇದ್ದೆ ಗೊತ್ತಾ ...?




ಮಹೇಶ್  ಹುಟ್ಟುಹಬ್ಬಕ್ಕೆ  ಉಷಾ ಉಮೇಶ್ ರಿಂದ  ಇಂಗ್ಲಿಷ್ನಲ್ಲಿ  ಪ್ರಾರ್ಥನೆ.

ಓ  ನನ್ನ ಇಂಗ್ಲಿಷ್ ಪ್ರಾರ್ಥನೆ ಇವರಿಗೆ ಅರ್ಥಾನೇ   ಆಗಲಿಲ್ಲವಂತೆ ಅಂದ್ರೂ  ಉಷಾ ಉಮೇಶ್ 



ಪಾರ್ಕ್ನಲ್ಲಿ   ಮಿಂಚಿದ  ತುಂಟರು 






ಮಹೇಶ ಹುಟ್ಟುಹಬ್ಬಕ್ಕೆ  ಸಿಂಗರಿಸಿಕೊಂಡ  ಪಾರ್ಕು 




ವಿವಿಧ ಬಂಗಿ  ವಿವಿಧ  ತುಂಟ  ಆಲೋಚನೆ 



ಕೇಕ್ ತಂದ  ಮಲ್ಲೇಶ್   ಕೇಕ್ನಲ್ಲಿ   ಹಬ್ಬವನ್ನೇ   ತಿಂದು ಬಿಟ್ಟಿದ್ದರು [ ಡಿ .ಓ .ಎಮ್ .]
{ ಹುಟ್ಟುಹಬ್ಬದ  ಶುಭಾಶಯಗಳು  ಎಂಬ ಬದಲಾಗಿ ಹುಟ್ಟು ಶುಭಾಶಯಗಳು ಅಂತಾ ಇದೆ ಕೇಕಿನಲ್ಲಿನ ಬರಹ }



ಕೇಕ್ನಲ್ಲಿ ಹಬ್ಬವನ್ನು ಹುಡುಕಾಡಿದ ಮಹೇಶ್ 




 ಕೇಕಿಗೆ  ಚಾಕೂ  ಹಾಕುವ ಸಂಭ್ರಮದ  ಕ್ಷಣಗಳು. 







ಕೇಕಿನಲ್ಲಿ  ಬರೆಸುವಾಗ  ಹಬ್ಬ ತಿಂದು ಹಾಕಿದ್ದ ಮಲ್ಲೇಶ್ ಗೆ   ಕೇಕಿನ ನೈವೇದ್ಯ  



ಬೈಬೇಡ  ಅಣ್ಣಯ್ಯ   ಮುಂದೆ  ಇಂತಹ ತಪ್ಪು ಮಾಡೋಲ್ಲ  ಅಂದ  ಗುಂಡ 




ನನ್ನ ಹುಟ್ಟುಹಬ್ಬದಲ್ಲಿ  ಹಬ್ಬಾನೇ ತಿಂದೆ ....  ಇನ್ನೇನು ತಗೋ ಈ ಕೈನೂ ತಿಂದಾಕು  ಅಂತಾ  ಗುಂಡನಿಗೆ ಕೈನೀಡಿದ  ಮಹೇಶ್ 



ಕೇಕ್  ಗೆ  ಯಾಕಪ್ಪಾ   ಹೀಗೆ  ಗುದ್ದಾಡುತ್ತೀರಾ ....? ಬನ್ನಿ ಎಷ್ಟ್  ಬೇಕೋ ಕೊಡಿಸ್ತೀನಿ 


ಅಣ್ಣನ  ಬಾಯಿಗೆ ಕೇಕ್   ತುರುಕಿ  ಬಚಾವಾದ ಗುಂಡ 



ಗುಂಡನ ಮೇಲಿನ ಸಿಟ್ಟನ್ನು ಕೇಕಿನ  ಮೇಲೆ ತೀರಿಸಿಕೊಂಡ ಮಹೇಶ್ 




ಅಯ್ಯೋ ಇಷ್ಟ್  ಚಿಕ್ಕ   ಕೇಕ್   ತುಂಡು  ಕೊಟ್ರಲ್ರೀ .....!




ಸಾರ್  ನನ್  ಹೆಂಡ್ತಿಗೆ   ಹೇಳ್ಬೇಡಿ .....!



ಅಜಾದ್ ರಿಂದ   ಕೇಕಿನ ವೈಜ್ಞಾನಿಕ   ವಿಶ್ಲೇಷಣೆ 



ಅಣ್ಣೋ   ಬಲ್   ಸುಸ್ತಾಗೋಯ್ತು   ಕಣಣ್ಣ .  ಒಸಿ  ಕೇಕ್   ಇದ್ರೆ ಕೊಡೀ .... !


ಕಣ್   ಬಿಡೂ  ಚಿನ್ನ .... ಕೇಕ್  ತಿನ್ನಿಸ್ತೀನಿ,   ಅಂದ್ರೂ  ಇವರು. 



ರೀ  ಪ್ಲೀಸ್  ದಿನಾ ಹೀಗೆ ತಿನ್ನಿಸ್ತೀರಾ ...? 

"ಚಿನ್ನದ ಮಲ್ಲಿಗೆ ಹೂವೆ  ತಿನ್ನು ನೀ ಕೇಕನ್ನು  ಚೆಲುವೆ " ಅಂದ್ರು ನವೀನ್ 



"ಬಾಳೆಂಬ ಪಥದಲ್ಲಿ  ಒಲವೆಂಬ ರಥದಲ್ಲಿ ... ಕನಸೆಲ್ಲ ನನಸಾಗಿ   ಕೇಕಿ ನಂತೆ  ಸಿಹಿಯಾಗಿ  ಬಾರಾ....  ಬಾರಾ !"




"ಒಲವಿನ ಕೇಕನ್ನು  ಕೊಡಲೇನು ...? ಸಿಹಿಯಲಿ   ಮಾಡಿಹೆ ಇದ ನಾನು .. !"



ಪ್ರೀತಿನೇ  ಆ ದ್ಯಾವ್ರು  ತಂದ    ಕೇಕು  ನಮ್ಮ ಬಾಳಿಗೆ ... !


"ಎಂದೆಂದೂ ನೀವು ಖುಷಿಯಾಗಿರಿ  ಕೇಕನ್ನು  ತಿಂತಾ  ಹಾಯಾಗಿರಿ "



"ಒಲವಿನ ಗೆಳೆಯನೇ ನಿನಗೆ  ಕೇಕ್  ಜೊತೆಗೆ  ನಗು ಕೊಡುವೆ " 



ನಲ್ಲನೆ  ಸಿಹಿ ಕೇಕ್  ಒಂದ,  ತಿನ್ನೆಯಾ ....! ನಾನಿನ್ನ   ಬಿಡೇನೂ  ಇಂದಿಗೂ .....!

ನಮ ಯೆಜ್ಮಾನ್ರು  ಯಾರ್ಗೂ  ಕಮ್ಮಿಯಿಲ್ಲಾ  ರೀ ...!

ಅಣ್ಣಾ  ಅತ್ತಿಗೆ  ನವೀನ್ ಗೆ ಕೇಕೆಲ್ಲಾ  ತಿನ್ನಿಸಿ ಬಿಟ್ರೂ   ನನಗೆ ಉಳಿದದ್ದು ಇಷ್ಟೇ ...! 


ಏನ್  ತಬ್ಲಾ  ಸಮಾಚಾರಾ...? 

ಮಹೇಶಣ್ಣನ  ಭಾರಿಸುವಿಕೆಗೆ  ತಬ್ಬಿಬ್ಬಾದ ತಬಲಗಳು 



ಅಣ್ಣಾ   ಎಂಗದೇ  ನಮ್   ಹವಾ ....? 



ಯಪ್ಪೋ  ಇಲ್ನೋಡ್ರಪ್ಪಾ  ಎಷ್ಟು  ಆರಾಮಾಗಿ ಕುಂತವ್ರೆ  ಎಲ್ರೂ ...!


ನಾನ್  ಭಾಷಣ  ಮಾಡ್ಬೇಕಾದ್ರೆ  .. ಮೇಲೆ ಕುಳಿತ  ದೇವತೆಗಳು ಸುಸ್ತು ಸುಸ್ತು  ಅಂತಾರೆ . 



ಏನೆಂದು ಬಣ್ಣಿಸಲಿ  ನನ್ನ ಮಡದಿಯ  ಪ್ರೀತಿಯ ...?

ಲೇ ಗುಂಡ ಗಲಾಟೆ ಮಾಡ್ಬೇಡ  ಸುಮ್ನೆ  ಕುಂತ್ಕೊ 


ಮೈಕ್   ಟೆಸ್ಟಿಂಗ್   ಒನ್, ಟು,   ಥ್ರೀ 

ಏನೆಂದೂ ನಾ ಹೇಳಲಿ   ಮಾವನ  ಆಸೆಗೆ  ಕೊನೆ ಎಲ್ಲಿ ...? 


ಈ ಚಿತ್ರ ನೋಡಿ ರಾಮಾಯಣ ಜ್ಞಾಪಕ  ಬಂದ್ರೆ ನನ್ನ ತಪ್ಪಲ್ಲ 



ನಿನ್ನ ಗಾತ್ರಕ್ಕೆ ತಕ್ಕಂತೆ ಕೇಕ್   ತರಬೇಕಾಗಿತ್ತು   ...? 

ಅಕ್ಕ ಪಿಸುಮಾತು ಹೇಳ್ತಿದ್ರೆ , ತಮ್ಮ ಎತ್ತಲೋ ನೋಡ್ತಿದ್ದ 



ಅಕ್ಕ  ಏನ್ ಹೇಳಿದ್ರೂ ....?



 ಗುಂಡಾ  ಬೇಗ ಮದ್ವೆ  ಆಗು ...!



ಅಜಾದ್ ಸಾರ್   ಇವತ್ತಿಂದ   ಮೀನ್  ತಿನ್ಬೇಡಿ 


 ಏ   ಮೀನ್ ತಿನ್ನದೆ ಇರೋದು ಹೇಗೆ ...?  ಅಂದ್ರೂ ಅಜಾದ್ 

ಆಹಾ  ಯಾರೋ ಮೀನು ಅಂತಿದ್ದಾರೆ ....?



   ಮಹೇಶ್  ಮುಂದಿನ ಸಾರಿ  ದೊಡ್ಡ ಕೇಕ್   ತರ್ಸಿ ...!

ಅಕ್ಕಾ   ಏನ್ ಹೇಳಿದ್ರೀ  ಕೇಳಿಸ್ಲಿಲ್ಲಾ ...!


ನೀನು ನೀನೆ  ಇಲ್ಲಿ ನಾನು ನಾನೇ ...!



 ಕಲ್ಲು ಗುಂಡಮ್ಮನಿಗೆ  ಗೌರವದ ನಮನಗಳು  


ಕಲ್ಲು ಗುಂಡಮ್ಮನಿಗೆ  ನರ್ತನದ ಸೇವೆ 




ಬನ್ನಿ ಸಾರ್  ಡಾನ್ಸ್  ಮಾಡೋಣ ...!


ಸ್ಟೆಪ್  ಡಾನ್ಸ್   ಮಾಡೋದು ಹೀಗೆ 


ಅಪೂರ್ವ ಸಂಗಮ ಸೀನು 



ಬೊ   ಖುಸಿಯಾಯ್ತು ... ಸಾ 



ಹೆಂಗದೆ  ನಮ್  ಪೋಸು ...?


ಅಣ್ಣಾ   ಇವರು ಇಂಗ್ಲಿಷ್ ನಲ್ಲಿ  ಪ್ರಾರ್ಥನೆ   ಮಾಡಿದ್ರಂತೆ. 


ಇವತ್ತಿನ  ಊಟದ ಖರ್ಚು ನಿಮ್ಮದು 



ಅಯ್ಯೋ ಅದಕ್ಕೇನಂತೆ  ಕೊಡ್ಸೋಣ  ಬಿಡೀ 



ನೋಡ್ರಪ್ಪಾ  ಒಬ್ಬೊಬ್ಬರು  ಎರಡು ತಿಂಡೀ    ಆರ್ಡರ್  ಮಾಡಬೌದು . 



ಯಾಕಣ್ಣ    ಜಿಂಕೆ ಮರಿ  ಇಲ್ಲಾ  ಅಂತಾ ಬೇಜಾರಾಯ್ತಾ . ...?


ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು .....!

ಈ ಪಾರ್ಕ್ ನಲ್ಲಿ  ಗೆಳೆಯರ ಕಲರವದ  ಕಹಳೆ ಸದಾ ಮೊಳಗುತ್ತೆ. 




ಏನ್ ಈಗಾ .....?   



ಏನೂ ಪಾರ್ಕ್ನಲ್ಲಿ  ಗಲಾಟೆ ಜೋರಿತ್ತಂತೆ ...?



ಇವತ್ತಿನ ಬಿಲ್ಲನ್ನು  ಎತ್ತುವ ಅರ್ಜುನ ನಾನೇ ...! ಫೀಲ್ ಫ್ರೀ 



ಇವತ್ತು  ಮಾಯಾಬಜಾರ್   ಊಟ 

ಔತಣ ಪ್ರಾರಂಭಕ್ಕೆ ಮೊದಲು ನಡೆದ ಸಿದ್ದತಾ ಸಭೆ 



ಔತಣ ಕೂಟದ  ಕಾರ್ಯದರ್ಶಿಗಳ  ಭಾಷಣ 

ಎಲ್ರೂ  ನಗು ನಗುತ್ತಾ  ಊಟ ಮಾಡಿ , ಸ್ವೀಟ್ ಮಾತ್ರಾ ಮುಟ್ಟಬೇಡಿ . 



ಓ  ಇವತ್ತು  ಮಹೇಶ್ ಹುಟ್ಟುಹಬ್ಬದ  ಕೇಕ್  ನನಗೆ ಸಿಗಲಿಲ್ಲ . 



ಲೇ ಗುಂಡ ನೋಡು ಈಗ  ನಿನ್ನಿಂದ   ನನ್ ಮಾನಾ ಹೋಯ್ತಾ ಅದೇ ... 


ಕನ್ನಡದ  ಮಕ್ಕಳೆಲ್ಲ ಒಂದಾಗಿ ಬನ್ನಿ , ಓಡಿಬಂದು ನೀವೆಲ್ಲಾ  ಚಾಕ್ಲೇಟು  ತಿನ್ನಿ 


  ಸ್ವಲ್ಪ   ತಾಳಿ  ಅಜಾದ್,    ಮಜ್ಜಿಗೆ ಕುಡಿದು ಬರ್ತೀನಿ 



ಯಾರಪ್ಪಾ  ಅದು ಮಜ್ಜಿಗೆಗೆ ಇಷ್ಟೊಂದು ಉಪ್ಪು ಹಾಕಿದ್ದು . ...?



ಈಗ ಕೊಟ್ಟಿರುವ   ಮಜ್ಜಿಗೆ ಪರವಾಗಿಲ್ಲ. 

 ಆಹಾ.....  ರುಚಿಯಾಗಿದೆ ,   ನನ್ನ ಬಾಲ್ಯದಲ್ಲಿ ಮಜ್ಜಿಗೆ ಕುಡೀತಿದ್ದ  ನೆನಪು ಬರ್ತಾ ಇದೆ. 



ಒಂದೇ  ತರಹ  ಯೋಚಿಸೋದು ಎಷ್ಟು  ಕಷ್ಟಾ   ಗೊತ್ತಾ ...?



ಇನ್ನು ಯಾಕ   ಬರಲಿಲ್ಲವ್ವ    ಊಟ ಕೊಡವ್ವಾ .....!



ಊಟ ಮಾಡೋಕೆ ಮುಂಚೆ  ಮುಖದಲ್ಲಿ  ನಗುವಿದ್ದರೆ  ಆರೋಗ್ಯ ಕಣ್ರೀ 



 ಮೊದಲ ತುತ್ತು  ತಿಂದು ,    ರುಚಿ ಸವಿಯುವ   ಸಮಯ 




ಔತಣಕ್ಕೆ   ಮುಂಚೆ   ಕೈ ಬೆರಳುಗಳಿಗೆ ವ್ಯಾಯಾಮ ... ಪಾಠ 



 ಕೈ ಬೆರಳುಗಳ ಆತ್ಮೀಯ ಸಂಭಾಷಣೆ 



 ಸಪ್ಪಳವಿಲ್ಲದೆ  ಬಂದಿತ್ತು ಹಪ್ಪಳ  




ತಲ್ಲೀನತೆ  ಯಲ್ಲಿ ನಿರತ   ಜನತೆ 



ಅಣ್ಣಾ   ಇದನ್ನೇ ಸ್ಲೇಟು  ಅಂದುಕೊಳ್ಳಿ ...!




ಔತಣದ ಜೊತೆ   ಪ್ರೀತಿಯ  ಬಾಗಿನ  ಅಜಾದ್ ರಿಂದ ಉಮೇಶ್ ವಸಿಷ್ಠ  ಅವರಿಗೆ 



ಅವತ್ತಿನ  ಪದ ಕಮ್ಮಟದ  ಸಂಭ್ರಮದ  ನೆನಪನ್ನು  ಕಾಪಿಟ್ಟು    ಇಂದು  ಬಾಗಿನ ರೂಪದಲ್ಲಿ ನೀಡಲಾಯ್ತು. 


ನನ್   ಪುಸ್ತಕ  ಬಿಡುಗಡೆಗೆ  ಖಂಡಿತಾ ಬರಬೇಕು  ಸಾರ್ 



ಸಾರ್  ಅಜಾದ್ ಸಿಕ್ಕಿದ್ದು  ಬಹಳ ಖುಷಿ  ಆಗ್ತಿದೆ  ನನಗೆ. 


ಹಿತವಾದ  ನೋಟ  ರುಚಿಯಾದ ಊಟ. ಮುಖದಲ್ಲಿ  ಮಂದಹಾಸ 



   ನಾನು  ಹಾಡ್ ಹೇಳೋದಾ ....!


  ಅದೇನಾಯ್ತಪ್ಪಾ   ಅಂದ್ರೆ .... !  ಡಾಕ್ಟ್ರುಗೆ  ವಾಯ್ಸ್   ಸರಿ ಇಲ್ಲ . 


ಒಳ್ಳೆಯ ಸಂಗೀತ ಒಳ್ಳೆಯ ಊಟ   ಎರಡೂ ಒಳ್ಳೆಯ ಕಾಂಬಿನೇಶನ್  ಆಲ್ವಾ...? 




ಗಾಯನದಲ್ಲಿ   ಸ್ವರ ತಪ್ಪ ಬಾರದು  ಊಟದಲ್ಲಿ ರುಚಿ ತಪ್ಪಬಾರದು .. ಗೊತ್ತಾಯ್ತಾ ..?



 ಸಂಗೀತದಲ್ಲಿ    ಶ್ರುತಿ  ತಪ್ಪಬಾರದು  ಹಾಗು  ನಟನೆಯಲ್ಲಿ  ಭಾವನೆಯೂ  ತಪ್ಪಬಾರದು 



 ಊಟದ ಜೊತೆ   ಗಾಯನ ,  ಸಂಗೀತ,  ನಟನೆ ವಿಚಾರ ಮಾಡ್ತಾ  ಊಟ ಮಾಡಿದ್ದೆ ಗೊತ್ತಾಗ್ಲಿಲ್ಲ . 




ಆಹಾ  ಇಂತಹ ಒಳ್ಳೆಯ ವಿಚಾರ    ತಿಳಿಸಿದ್ರೀ ... !




ನೋಡ್ರೀ  ಎಂತಹ  ಒಳ್ಳೆಯ ಮನಸಿನ ಜನ  ನಮ್ಮ ಜೊತೆ ಇದ್ದಾರೆ ..! 





ಏನಿವಾಗ ....? ಅರೆ  ಹಂಗಂದ್ರೆ   ಏನಿವಾಗ ...? 



ಕನ್ನಡ ಭಾಷೆಗೂ   ಊಟಕ್ಕೂ   ಏನ್ರೀ    ಸಂಬಂಧ ...?



 ಅಕ್ಕಾ  ಅಲ್ಲಕ್ಕಾ   ಇಲ್ಲಿ ಇಂಗ್ಲಿಷ್ ಬೇಕಿತ್ತಾ ...?   



ಮಹಿಳಾ  ನ್ಯಾಯಾಧೀಶರಿಂದ  ಮಹಿಳೆಯ ಪರವಾಗಿ   ತೀರ್ಪು 



ಹೆಣ್ಮಕ್ಳು   ಸ್ಟ್ರಾಂಗು   ಗೊತ್ತಾಯ್ತಾ....?



 ನಾನು  ತೀರ್ಪು ಹೇಳಿದ್ನಲ್ಲಾ   ಆ ಖುಷಿಗೆ  ಅಕ್ಕ  ಐಸ್ ಕ್ರೀಮ್  ಕೊಡಿಸ್ತಾರೆ 



ಒಳ್ಳೆ ತೀರ್ಮಾನಕ್ಕೆ  ಐಸ್ ಕ್ರೀಮ್ ಕೊಡಿಸಿದ್ರೆ  ತಪ್ಪೇನು ...?



 ಅಕ್ಕಾ   ಇಂತದಕ್ಕೆಲ್ಲಾ   ಮ್ಯಾಚ್  ಫಿಕ್ಸಿಂಗ್   ಬೇಕಾ...? 



ಇದು  ಮ್ಯಾಚ್ ಫಿಕ್ಸಿಂಗ್  ಅಲ್ಲಾ .....  ಗುಂಡಾ , ಫಿಕ್ಸೆಡ್  ಮ್ಯಾಚ್  ಅಷ್ಟೇ. 



  ನನ್   ಪತ್ನಿ ಪಕ್ಕ ಇದ್ದಿದ್ರೆ  ಇನೊಂದ್ ಇಷ್ಟ್  ಚೆನ್ನಾಗಿ ಊಟ ಮಾಡ್ತಿದ್ದೆ. 



  ಉಷಾ   ಪಕ್ಕದಲ್ಲಿ  ಇಲ್ಲದಿದ್ರೆ  ಊಟಾನೇ ಸೇರೊಲ್ಲಾ  ಸಾರ್.


  ರಾಘುಗೆ   ಮದುವೇ   ಆಗೂ ಅಂತಾ ನಾನೂ ಹೇಳ್ತಾ  ಇದ್ದೀನಿ. 




ನನಗೆ   ಎರಡು ಐಸ್ಕ್ರೀಂ   ಬೇಕಪ್ಪ .... 



ಅಣ್ಣಾ   ನನಗೊಂದು   ಮತ್ತೆ    ನನ್ನ  ಡವ್ ಗೆ ಒಂದು . 





 i scream for ice cream 




ಇವತ್ತು ನನ್ನ ವಾಯ್ಸ್ ಗೆ  ರಜಾ  ಸಾರ್. 



 ಯಾರಲ್ಲಿ   ಸೌಂಡು  ಮಾಡೋದು ...?




 ಮನದಲ್ಲಿ ಭಾವ ಗೀತೆ ಗುನುಗುವ  ಸಮಯ. 





 ಕಾಲೇಜು  ಕ್ಯಾಂಟೀನ್  ನಲ್ಲಿ    ಶಿಸ್ತಾಗಿ ಕುಳಿತ   ತುಂಟ  ವಿದ್ಯಾರ್ಥಿಗಳು . 




 ಎಲ್ಲವನ್ನೂ  ಶೂಟ್ ಮಾಡುತ್ತಿದ್ದ   ಬೇಟೆಗಾರ  ಪ್ರಕಾಶಣ್ಣ . 



ಈಗ  ಕ್ಯಾಮರಾ ನೋಡುವ ತುಂಟ ಸಮಯ 


ಏನಿದೆ ಇಲ್ಲಿ .......?


  ಆಹಾ     ಮುದ್ದು ಬೀಡವೇ ....,   ನಗು ನಗುತ್ತಾ  ನನ್ನ ಬಾಯಿಯ ಒಳಗೆ ಪ್ರವೇಶಿಸು 







ಈ ಸಮಯ  ಆನಂದಮಯ ..... 










ಗುಳುಂ  ಸ್ವಾಹಾ    ..... !





ಏನ್  ಸಮಾಚಾರ  ..... ?





ಕಂಬಕ್ಕೆ ಕನ್ನಡದಲ್ಲಿ  ಏನಂತಾರೆ ....? 






ಈ  ಕಂಬದಲ್ಲೂ   ಇರುವುದೇ   ಕನ್ನಡ  . 








  ಒಹ್  ಹೌದಾ....?  ನಿಜಕ್ಕೂ ಖುಷಿಯಾಯ್ತು 






ಎಲೆ ಎಲೆ ಓ  ಕಾಮತ್  ಹೋಟೆಲ್  ನಿನ್ನ ಮುಂದೆ ಒಂದು ಸೆಲ್ಫೀ  ಸ್ಟೈಲ್ 







ಏನ್ ಸಾರ್ ನೀವು  ಹಂಗೆಲ್ಲಾ  ಸವಾಲ್ ಹಾಕೋದ ...?  ದಯಮಾಡಿ    ಬನ್ನಿ ಸಾರ್ ಒಳಗೆ 





ತೃಪ್ತಿಗೊಂಡ  ತುಂಟ ಮನಸುಗಳು 











ಬಂದ್ರೂ  ಸಾರ್...  ಓ ಹೊ   ಅರ್ಜುನ  ಬಿಲ್ ಕೊಟ್ಟು ಬಂದ್ರೂ ಸಾರ್ ... ಓ  ಹೊ ಹೊ 







ಸಂತಸದಿ ಮಿಂದು ಖುಷಿಯಾಗಿ ಬಂದ   ಮಣಿಯ ಕಾಂತಾ 




ಸಂತೋಷಕ್ಕೆ   ಹಾಡೂ  ಸಂತೋಷಕ್ಕೆ 





ಔತಣದ ನಂತರ   ಕಂಡುಬಂದ  ಸುಸ್ತಾದ ಮುಖಗಳು 





ಅಂತಿಮ ಕ್ಷಣದಲ್ಲಿ  ತಲೆಯ ಮೇಲೆ ಕೈ ಹೊತ್ತ  ಪ್ರಕಾಶಣ್ಣ 







 ಉಂಡು ಸುಸ್ತಾಗಿ  ನಿದ್ದೆಗಣ್ಣಿನಲ್ಲಿಯೂ  ನಕ್ಕ ಮುಖಗಳು 





ನಕ್ಕರೆ ಅದೇ ಸ್ವರ್ಗ 




ಇಷ್ಟು ಬೇಗಾ  ಮುಗಿದು ಹೋಯ್ತಾ ...?





ಇಬ್ಬರು ಸಜ್ಜನರ ನಡುವೆ  ಪ್ರೀತಿಯ  ಸಜ್ಜಿಗೆ ತಿಂದ ಸಮಯ. 


 ಚಿತ್ರ ನೋಡಿ  ಖುಷಿಯಾಯ್ತಾ .... ಇನ್ಯಾಕೆ   ತಡಾ   ನಿಮ್ಮ ಅನಿಸಿಕೆ ಮೆತ್ತಿಬಿಡೀ    ...  ಯಾರನ್ನು ವಯಕ್ತಿಕವಾಗಿ ಹಂಗಿಸುವ  ಉದ್ದೇಶವಿಲ್ಲ,  ಇಲ್ಲಿನ ಶೀರ್ಷಿಕೆಗಳನ್ನು ಹಾಸ್ಯವಾಗಿ  ಅನುಭವಿಸಿ ನಕ್ಕು ಬಿಡೀ  ಎಂಬ ಕೋರಿಕೆ ನನ್ನದು.