ಮಂಗಳವಾರ, ಜುಲೈ 19, 2011

ಮುಸ್ಸಂಜೆ ಮಬ್ಬಿನಲ್ಲಿ ಬ್ಲಾಗಿಗರ ಕಣ್ಣಾ ಮುಚ್ಚಾಲೆ!!!

ಕಳೆದ ತಿಂಗಳು ಬೆಂಗಳೂರಿಗೆ  ಬಂದಾಗ  ಇಬ್ಬರು ಬ್ಲಾಗ್ ಸ್ನೇಹಿತರೊಡನೆ ಬೆಂಗಳೂರಿನ ಸಮೀಪ ಒಂದು ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಒಳ್ಳೆಯ ಸೂರ್ಯಾಸ್ತ  ದರ್ಶನ ವಾಯಿತು. ಹಾಗೆ ಮುಸ್ಸಂಜೆಯ ಮಬ್ಬಿನಲ್ಲಿ ಆಗಸದಲ್ಲಿ  ಮೋಡಗಳ ರಂಗು ರಂಗಿನ ಚಿತ್ತಾರದ ಹಿಮ್ಮೇಳದಲ್ಲಿ  ಇಬ್ಬರು ಬ್ಲಾಗ್ ಮಿತ್ರರು ನಡೆಸಿದ ಕಣ್ಣಾ ಮುಚ್ಚಾಲೆ ಇಲ್ಲಿದೆ.  ಬನ್ನಿ ಈ ಬ್ಲಾಗಿಗರು ಯಾರೆಂದು ಪತ್ತೆ ಮಾಡಿ. ಸುಂದರ ಚಿತ್ರಗಳನ್ನು ನೋಡಿ ಸಂತಸಪಡಿ.                                 
ಆಗಸದ ಚಿತ್ತಾರ ಲೋಕಕ್ಕೆ ಸಮನಾವುದು !!!
ಚಿತ್ತಾರದ ಸಾಗರವನ್ನು ಕ್ಯಾಮರದಲ್ಲಿ ಅಡಗಿಸುವ ಈ ಪರಿ.!!!!
ಮುಸಂಜೆಯ ಮಸುಕಿನ ಮೋಹಕ ಜಾಲ ಇದು !!!
ಮುಸ್ಸಂಜೆಯ ಮಾಯಾ ಲೋಕ !!!
ಮುಸಂಜೆಯಲ್ಲಿ  ಕಲ್ಪನೆಗಳ ಸಕಾರಕ್ಕೆ ನಿರ್ದೇಶನ !!!
ಮುಸ್ಸಂಜೆಯಲ್ಲಿ ನೆರಳು  ಮಬ್ಬು ಬೆಳಕಿನ  ಆಟದ ಮಾಯಾ ನೋಟ !!!!
ಆ  ಆಗಸ  ................................................!!!!!ಬಣ್ಣಗಳ ಚಿತ್ತಾರ !!!!!

ಸೋಮವಾರ, ಜುಲೈ 4, 2011

ಕಣ್ಣಾಮುಚ್ಚೇ ಕಾಡೇ ಗೂಡೇ ಅಂದಿದ್ವು ಚೀತಾ ಹಾಗು ಮೂರು ಮರಿಗಳು.!!!!


ನಾನು ನನ್ನ ಮಕ್ಕಳು!!!
ಮೈಸೂರಿನ ಜೂ ನಲ್ಲಿ ಚೀತಾ ಮರಿ ಹಾಕಿದ್ಯಂತೆ ಅಂತಾ ಸ್ವಲ್ಪ ದಿನಗಳ ಹಿಂದೆ  ಮಾಧ್ಯಮಗಳಲ್ಲಿ ಸುದ್ದಿ ಬಂತು . ಸರಿ  ಇವುಗಳೊಂದಿಗೆ ನಾನು ಕಣ್ಣಾ ಮುಚ್ಚಾಲೆ ಆಡೇ ಬಿಡೋಣ  ಅಂತಾ ನನ್ನ ಕ್ಯಾಮರಾ ಜೊತೆ ಜೂ ಗೆ ಹೊರಟೆ. ನನ್ನ ಅದೃಷ್ಟ ಚೆನ್ನಾಗಿತ್ತು. ತಾಯಿ ಹಾಗು ಮೂರು ಮಕ್ಕಳು  ಒಳ್ಳೆಯ ಲಹರಿಯಲ್ಲಿ ಇದ್ದವು. ಇವುಗಳನ್ನು ನೋಡುತ್ತಾ ಮೈಮರೆತೆ , ನನ್ನ ಕ್ಯಾಮರಾ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿತ್ತು, ಬನ್ನಿ ಕೆಲವು ದೃಶ್ಯಗಳು ನಿಮಗಾಗಿ ಇಲ್ಲಿವೆ.          
ಶ್ ...........................!!!!! ಗಲಾಟಿ ಮಾಡ್ಬೇಡಿ.
ನನ್ನ ಮಕ್ಕಳ  ಹತ್ತಿರ  ಬಂದೀರ  ಎಚ್ಚರ !!!!
ನನ್ನ ಪಂಜರದ ಮುಂದೆ ನಿಮ್ಮ ವರ್ತನೆ ನೋಡಿ "ನಗೆಯು ಬರುತಿದೆ  ಎಂಗೆ ನಗೆಯು ಬರುತಿದೆ"!!!!

                 
ನಮ್ಮಮ್ಮ ಅಂದ್ರೆ ನಮಗೆ ಇಷ್ಟಾ!!!!
ಸ್ವಲ್ಪ ರೆಸ್ಟ್ ತಗೊತೀವಿ  ತಾಳ್ರೀ!!!

ಮಕ್ಕಳೇ ಇಲ್ನೋಡಿ  ಇವರೇ ಮನುಷ್ರು ಅಂದ್ರೆ !!! 
ಮನುಷ್ಯರನ್ನು  ನೋಡಿದ್ರೆ ಹೆದರ್ಕೆ ಆಗುತ್ತೆ !!!!!
ನಮ್ಮ ಬಾಲ್ಯ ನಮ್ಮದು!!!!