|
ಪುಸ್ತಕದ ಆಲಯದಲ್ಲಿ ಜ್ಞಾನ ದಾಹಿಗಳ ಹಿಂಡು |
ಕಳೆದ ಶನಿವಾರ ಬ್ಲಾಗ್ ಗೆಳೆಯರ ಗುಂಪು ಬೆಂಗಳೂರಿನಿಂದ ಆಚೆ ಬರಲು ಮನಸ್ಸು ಮಾಡಿ , ಶ್ರೀ ರಂಗ ಪಟ್ಟಣದೆಡೆಗೆ ಹೊರಟಿತ್ತು. ಹೊರಟ ತಂಡಕ್ಕೆ ತಾವು ಎಲ್ಲಿಗೆ ಹೊರಟು, ಏನು ನೋಡುತ್ತೇವೆ ಎನ್ನುವ ಸರಿಯಾದ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೂ ಬರಲಿದ್ದ ತಂಡಕ್ಕೆ ಒಂದು ಗ್ರಂಥಾಲಯಕ್ಕೆ ಭೇಟಿ ಅಂತಾ ಅಷ್ಟೇ ಹೇಳಲಾಗಿತ್ತು. ಗ್ರಂಥಾಲಯ ಅಂದರೆ ಸುಮಾರು ಕೆಲವು ಪುಸ್ತಕಗಳ ಸಂಗ್ರಹ ಇರುತ್ತೆ , ಹೀಗೆ ಹೋಗಿ ಹಾಗೆ ಬಂದು ಬೇರೆ ಪ್ರದೇಶ ನೋಡ ಬಹುದು ಎನ್ನುವ ಕಲ್ಪನೆ ಬಹಳಷ್ಟು ಜನಕ್ಕೆ ಇತ್ತು. ಹಾಗೆ ಹೊರಟ
ತಂಡಹೊರಟಿದ್ದು , ಪಾಂಡವಪುರ ತಾಲೂಕಿನ ಹರಳಳ್ಳಿಯ ವಿಶ್ವೇಶ್ವರ ನಗರ ಸಮೀಪ ಇರುವ "
ಅಂಕೆ ಗೌಡರ ಪುಸ್ತಕದ ಮನೆಗೆ" .
ಮಂಡ್ಯಾ ಜಿಲ್ಲೆ ಜನಗಳು ಒರಟರು , ಸಂಸ್ಕೃತಿ ಅರಿಯದವರೂ ಅನ್ನುವ ಜನರಿಗೆ ಸವಾಲ್ ಎಸೆದು
ಸೆಡ್ಡು ಹೊಡೆದು ಮಂಡ್ಯಾ ಜಿಲ್ಲೆ ಜನ ಹೀಗೂ ಉಂಟು ಅನ್ನುವ ಸಂದೇಶ ಸಾರುತಿಹರು.ಬನ್ನಿ
ನಮ್ಮ ಪುಸ್ತಕ ಸಾಮ್ರಾಟ ಅಂಕೆ ಗೌಡರ ಲೋಕಕ್ಕೆ ಹೋಗೋಣ .ನನಗೆ ಸುಮಾರು ಎಂಟು
ವರುಷಗಳಿಂದ ಪರಿಚಯ ವಿರುವ ಇವರು ಮೃದುಭಾಷಿ,ಸಜ್ಜನ. .ಸ್ವಾಮೀ!!! ಒಬ್ಬ ವ್ಯಕ್ತಿ
ಎಷ್ಟು ಪುಸ್ತಕ ಸಂಗ್ರಹಿಸ ಬಹುದು??ಹವ್ಯಾಸಕ್ಕಾಗಿ ಗಳಿಸಿದ ಹಣವನ್ನು ಎಷ್ಟು ಸುರಿಯ
ಬಹುದು?? ಇಂತಹ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ??ಇದಕ್ಕೆ ಉತ್ತರ
ಈ ಅಂಕೆ ಗೌಡರುಸಾಧಿಸಿರುವ ಈ ಪುಸ್ತಕ ಲೋಕ.ಈ ಪುಸ್ತಕದ ಮನೆ ಬಗ್ಗೆ ನನ್ನ ಇನ್ನೊಂದು ಬ್ಲಾಗ್ '' ನಿಮ್ಮಳಗೊಬ್ಬ ಬಾಲು" ನಲ್ಲಿ ಲೇಖನ ಪ್ರಕಟಿಸಿದ್ದೆ ಲಿಂಕ್ ಇಲ್ಲದೆ ನೋಡಿ
http://nimmolagobba.blogspot.in/2010html /08/blog-post_16.ಅದರಲ್ಲಿ ಬಹಳಷ್ಟು ವಿಚಾರಗಳು ಬ್ಲಾಗ್ ಮಿತ್ರರ ಮನಸೆಳೆದಿದ್ದವು.ಬನ್ನಿ ಬ್ಲಾಗಿಗರ ಪುಸ್ತಕದ ಮನೆಯ ಚಟುವಟಿಕೆ ಚಿತ್ರಣ ನೋಡೋಣ
|
ವಾಹ್ ಇದೇನ್ ಸಾರ್ ಇದೂ ...........!!! |
|
ಹೀಗೂ ಉಂಟೆ .........!!! ಪುಸ್ತಕ ಸಾಗರದ ಮದ್ಯೆ ಹೊರಟ ಬ್ಲಾಗಿಗರ ಉದ್ಘಾರ |
|
ತಾಳಿ ಈ ಜಾಗದ ವಿಡಿಯೋ ತೆಗೆಯೋಣ , ....!!! |
|
|
ಪುಸ್ತಕದ ಮದ್ಯೆ ನವ ದಂಪತಿಗಳ ಸಲ್ಲಾಪ |
|
ಬಾ ಜೊತೆ ಜೊತೆಯಾಗಿ ಓದೋಣ .......!!!! ಜ್ಞಾನ ಜ್ಯೋತಿ ಬೆಳಗೋಣ. |
|
ವಿಸ್ಮಯ ಪುಸ್ತಕ ಲೋಕದ ವಿಹಾರ , ವಿವಿಧ ಭಾವಗಳ ಅನಾವರಣ. |
|
ಬನ್ನಿ ಸ್ವಲ್ಪ ಆತ್ಮೀಯವಾಗಿ ಕುಳಿತು ಮಾತಾಡೋಣ.........!!! |
|
ಬನ್ನಿ ನೆನಪಿನ ಬುತ್ತಿ ಕಟ್ಟೋಣ ಅಂದ್ರೂ ಕೆಲವು ಛಾಯಾಗ್ರಾಹಕರು ........!! |
|
ಮನ ತುಂಬಿದ ಭಾವನೆಗಳು ಮಾತಾಗಿ ಹೊರಬಂದ ಸಮಯ........11 |
|
ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಪುಟ್ಟ ಕಾಣಿಕೆ ......!!! |
|
ಪುಸ್ತಕದ ಮನೆಯಲ್ಲಿ ಕಂಡ ಜ್ಞಾನದ ಭಂಡಾರ |
|
ಇಷ್ಟೊಂದು ಪುಸ್ತಕ ಸಂಗ್ರಹಿಸಿದ ಇವರ ಬಗ್ಗೆ ತಿಳಿಯೋಣ ,,,,,,,,,,!!! |
|
ಇವರ ಬಗ್ಗೆ ವಿಕಿಪಿಡಿಯಾ ದಲ್ಲಿ ಬರಬೇಕೂ , ವಿಶ್ವಕ್ಕೆ ಇವರ ವಿಚಾರ ತಿಳಿಸುವೆ ..............!!! |
|
ನಮ್ಮಿಬ್ಬರಿಗೆ ಈ ಲೋಕವೇ ಚಂದಾ , ಇದೆ ಮಹದಾನಂದಾ ....!!! |
|
ಪುಸ್ತಕದ ಮನೆ ಒಡೆಯನಿಗೆ ನವ ದಂಪತಿಗಳ ಮೆಚ್ಚುಗೆ ಮಾತು.....!! |
|
ಏನ್ ಹೇಳಲಿ ಇವರ ಬಗ್ಗೆ ...!!! |
|
ಏನ ಹೇಳಲಿ ...................................ನಾ !!!!!!!!!!!ಮನ ತುಂಬಿದೆ ನನಗೆ. |
|
ಬಾಳ್ ಚಲೋ ಜಾಗ ............ನ ಬೆರಗಾದಿ ನೋಡ್ರಲಾ ................!!! |
|
ಈ ಜಾಗ ನನಗೆ ಸಂತಸ ತಂದಿದೆ ......!!!!!!!!! |
|
ಇದೊಂದು ಜ್ಞಾನದ ಬೀಡು ...........!!!!!!!!!!!!! |
|
ನಮ್ಮೆಲ್ಲರ ಪ್ರೀತಿ ನಿಮಗೆ ಸಾರ್ ............!!!! |
|
ನಾ ಕಂಡ ಒಂದು ಅದ್ಭುತ ಲೋಕ ..........!!! |
|
ನೆನಪಿಗಾಗಿ ಒಂದು ಚಿತ್ರ ಇರ್ಲಿ. |
|
ನಾವೆಲ್ಲಾ ಇಲ್ಲಿ ಸೇರಿದ್ವಿ ಅನ್ನೋ ನೆನಪು..............ಎಂದಿಗೂ ಅಮರವಾಗಿರಲಿ. |
|
ಯಾವುದೋ ಲೋಕದಿಂದ ಹೊರಗೆ ಬಂದ ಆ ಕ್ಷಣ ................!!!! |
ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ ವ್ಯಕ್ತಿಗೆ ಸಹಾಯ ಮಾಡಲು ನಿಮಗೆ ಇಷ್ಟ
ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು.