ಬುಧವಾರ, ಜೂನ್ 27, 2012

ಹೀಗೊಬ್ಬ ಪುಸ್ತಕ ಪ್ರೇಮಿ!!ಅಂಕೆ ಗೌಡರ ವಿಸ್ಮಯ ಪುಸ್ತಕ ಲೋಕದೊಳಗೆ ನೆರೆದಿತ್ತು ಬ್ಲಾಗಿಗರ ದಂಡು.!!

ಪುಸ್ತಕದ ಆಲಯದಲ್ಲಿ ಜ್ಞಾನ ದಾಹಿಗಳ ಹಿಂಡು

ಕಳೆದ ಶನಿವಾರ ಬ್ಲಾಗ್ ಗೆಳೆಯರ ಗುಂಪು ಬೆಂಗಳೂರಿನಿಂದ ಆಚೆ ಬರಲು ಮನಸ್ಸು ಮಾಡಿ , ಶ್ರೀ ರಂಗ ಪಟ್ಟಣದೆಡೆಗೆ ಹೊರಟಿತ್ತು. ಹೊರಟ ತಂಡಕ್ಕೆ ತಾವು ಎಲ್ಲಿಗೆ   ಹೊರಟು, ಏನು ನೋಡುತ್ತೇವೆ ಎನ್ನುವ ಸರಿಯಾದ ಸ್ಪಷ್ಟ  ಮಾಹಿತಿ ಇರಲಿಲ್ಲ. ಆದರೂ ಬರಲಿದ್ದ  ತಂಡಕ್ಕೆ ಒಂದು ಗ್ರಂಥಾಲಯಕ್ಕೆ ಭೇಟಿ ಅಂತಾ ಅಷ್ಟೇ ಹೇಳಲಾಗಿತ್ತು. ಗ್ರಂಥಾಲಯ ಅಂದರೆ ಸುಮಾರು ಕೆಲವು ಪುಸ್ತಕಗಳ ಸಂಗ್ರಹ ಇರುತ್ತೆ , ಹೀಗೆ ಹೋಗಿ ಹಾಗೆ ಬಂದು ಬೇರೆ ಪ್ರದೇಶ ನೋಡ ಬಹುದು ಎನ್ನುವ ಕಲ್ಪನೆ ಬಹಳಷ್ಟು ಜನಕ್ಕೆ ಇತ್ತು. ಹಾಗೆ ಹೊರಟ ತಂಡಹೊರಟಿದ್ದು , ಪಾಂಡವಪುರ ತಾಲೂಕಿನ ಹರಳಳ್ಳಿಯ ವಿಶ್ವೇಶ್ವರ ನಗರ ಸಮೀಪ ಇರುವ " ಅಂಕೆ ಗೌಡರ   ಪುಸ್ತಕದ ಮನೆಗೆ" .
ಮಂಡ್ಯಾ ಜಿಲ್ಲೆ ಜನಗಳು ಒರಟರು , ಸಂಸ್ಕೃತಿ ಅರಿಯದವರೂ ಅನ್ನುವ ಜನರಿಗೆ ಸವಾಲ್ ಎಸೆದು ಸೆಡ್ಡು ಹೊಡೆದು ಮಂಡ್ಯಾ ಜಿಲ್ಲೆ ಜನ ಹೀಗೂ  ಉಂಟು ಅನ್ನುವ ಸಂದೇಶ  ಸಾರುತಿಹರು.ಬನ್ನಿ ನಮ್ಮ ಪುಸ್ತಕ ಸಾಮ್ರಾಟ ಅಂಕೆ ಗೌಡರ  ಲೋಕಕ್ಕೆ ಹೋಗೋಣ .ನನಗೆ ಸುಮಾರು ಎಂಟು ವರುಷಗಳಿಂದ  ಪರಿಚಯ ವಿರುವ ಇವರು ಮೃದುಭಾಷಿ,ಸಜ್ಜನ.   .ಸ್ವಾಮೀ!!! ಒಬ್ಬ ವ್ಯಕ್ತಿ ಎಷ್ಟು ಪುಸ್ತಕ ಸಂಗ್ರಹಿಸ ಬಹುದು??ಹವ್ಯಾಸಕ್ಕಾಗಿ  ಗಳಿಸಿದ ಹಣವನ್ನು ಎಷ್ಟು ಸುರಿಯ ಬಹುದು??  ಇಂತಹ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ??ಇದಕ್ಕೆ ಉತ್ತರ ಈ  ಅಂಕೆ ಗೌಡರುಸಾಧಿಸಿರುವ  ಈ ಪುಸ್ತಕ ಲೋಕ.ಈ ಪುಸ್ತಕದ ಮನೆ ಬಗ್ಗೆ ನನ್ನ ಇನ್ನೊಂದು ಬ್ಲಾಗ್ '' ನಿಮ್ಮಳಗೊಬ್ಬ ಬಾಲು" ನಲ್ಲಿ ಲೇಖನ ಪ್ರಕಟಿಸಿದ್ದೆ  ಲಿಂಕ್ ಇಲ್ಲದೆ ನೋಡಿ http://nimmolagobba.blogspot.in/2010html /08/blog-post_16.ಅದರಲ್ಲಿ ಬಹಳಷ್ಟು ವಿಚಾರಗಳು ಬ್ಲಾಗ್ ಮಿತ್ರರ ಮನಸೆಳೆದಿದ್ದವು.ಬನ್ನಿ ಬ್ಲಾಗಿಗರ ಪುಸ್ತಕದ ಮನೆಯ ಚಟುವಟಿಕೆ ಚಿತ್ರಣ ನೋಡೋಣ
ವಾಹ್ ಇದೇನ್ ಸಾರ್ ಇದೂ ...........!!!
ಹೀಗೂ ಉಂಟೆ .........!!! ಪುಸ್ತಕ ಸಾಗರದ ಮದ್ಯೆ  ಹೊರಟ ಬ್ಲಾಗಿಗರ ಉದ್ಘಾರ
ತಾಳಿ ಈ ಜಾಗದ ವಿಡಿಯೋ ತೆಗೆಯೋಣ , ....!!!
ಪುಸ್ತಕದ ಮದ್ಯೆ ನವ ದಂಪತಿಗಳ  ಸಲ್ಲಾಪ
ಬಾ ಜೊತೆ ಜೊತೆಯಾಗಿ ಓದೋಣ .......!!!! ಜ್ಞಾನ ಜ್ಯೋತಿ ಬೆಳಗೋಣ.
ವಿಸ್ಮಯ ಪುಸ್ತಕ ಲೋಕದ ವಿಹಾರ , ವಿವಿಧ ಭಾವಗಳ ಅನಾವರಣ.
ಬನ್ನಿ ಸ್ವಲ್ಪ ಆತ್ಮೀಯವಾಗಿ ಕುಳಿತು ಮಾತಾಡೋಣ.........!!!
ಬನ್ನಿ ನೆನಪಿನ ಬುತ್ತಿ ಕಟ್ಟೋಣ ಅಂದ್ರೂ ಕೆಲವು ಛಾಯಾಗ್ರಾಹಕರು ........!!
ಮನ ತುಂಬಿದ ಭಾವನೆಗಳು ಮಾತಾಗಿ ಹೊರಬಂದ ಸಮಯ........11
ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಪುಟ್ಟ ಕಾಣಿಕೆ ......!!!
ಪುಸ್ತಕದ ಮನೆಯಲ್ಲಿ  ಕಂಡ  ಜ್ಞಾನದ ಭಂಡಾರ
ಇಷ್ಟೊಂದು ಪುಸ್ತಕ ಸಂಗ್ರಹಿಸಿದ ಇವರ ಬಗ್ಗೆ ತಿಳಿಯೋಣ ,,,,,,,,,,!!!
ಇವರ ಬಗ್ಗೆ ವಿಕಿಪಿಡಿಯಾ ದಲ್ಲಿ ಬರಬೇಕೂ , ವಿಶ್ವಕ್ಕೆ ಇವರ ವಿಚಾರ ತಿಳಿಸುವೆ ..............!!!
ನಮ್ಮಿಬ್ಬರಿಗೆ ಈ ಲೋಕವೇ ಚಂದಾ , ಇದೆ ಮಹದಾನಂದಾ ....!!!
 ಪುಸ್ತಕದ ಮನೆ  ಒಡೆಯನಿಗೆ ನವ  ದಂಪತಿಗಳ  ಮೆಚ್ಚುಗೆ ಮಾತು.....!!
ಏನ್ ಹೇಳಲಿ ಇವರ ಬಗ್ಗೆ  ...!!!
ಏನ ಹೇಳಲಿ  ...................................ನಾ !!!!!!!!!!!ಮನ ತುಂಬಿದೆ ನನಗೆ.

ಬಾಳ್  ಚಲೋ ಜಾಗ ............ನ ಬೆರಗಾದಿ  ನೋಡ್ರಲಾ ................!!!
ಈ ಜಾಗ ನನಗೆ  ಸಂತಸ ತಂದಿದೆ ......!!!!!!!!!
ಇದೊಂದು ಜ್ಞಾನದ  ಬೀಡು ...........!!!!!!!!!!!!!
ನಮ್ಮೆಲ್ಲರ ಪ್ರೀತಿ ನಿಮಗೆ ಸಾರ್ ............!!!!
ನಾ ಕಂಡ ಒಂದು ಅದ್ಭುತ ಲೋಕ ..........!!!
ನೆನಪಿಗಾಗಿ  ಒಂದು  ಚಿತ್ರ ಇರ್ಲಿ.
ನಾವೆಲ್ಲಾ ಇಲ್ಲಿ ಸೇರಿದ್ವಿ ಅನ್ನೋ ನೆನಪು..............ಎಂದಿಗೂ ಅಮರವಾಗಿರಲಿ.
ಯಾವುದೋ ಲೋಕದಿಂದ ಹೊರಗೆ ಬಂದ ಆ ಕ್ಷಣ ................!!!!
ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ  ವ್ಯಕ್ತಿಗೆ  ಸಹಾಯ ಮಾಡಲು ನಿಮಗೆ ಇಷ್ಟ ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು.
ಅವರ ವಿಳಾಸ. ಶ್ರೀ ಅಂಕೆ ಗೌಡ ,ಪುಸ್ತಕದ ಮನೆ ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] ಹರಳ ಹಳ್ಳಿ  ಪಾಂಡವಪುರ ತಾಲೂಕ್  ,ಮಂಡ್ಯ ಜಿಲ್ಲೆ.571434 ಮೊಬೈಲ್ ನಂಬರ್ ;9242844934 ,9242844206 ಗಳನ್ನೂ ಸಂಪರ್ಕಿಸಬಹುದು .ಪುಸ್ತಕ ಪ್ರಕಟಣೆ ಮಾಡುವವರು ತಮ್ಮ ಒಂದು ಪ್ರತಿಯನ್ನು ಇಲ್ಲಿಗೆ  ಉಚಿತವಾಗಿ ಕಳುಹಿಸಿದರೆ ಅದೂ ಸಹ ಒಂದು ಉತ್ತಮ ಕಾರ್ಯ ವಾಗುತ್ತದೆ. ನೀವು ಒಮ್ಮೆ ಮೈಸೂರಿಗೆ ಬಂದರೆ ಮರೆಯದೆ ಇಲ್ಲಿಗೆ ಹೋಗಿಬನ್ನಿ ನಿಮ್ಮ ಗೆಳೆಯರಿಗೂ ತೋರಿಸಿ.ಒಂದು ಉತ್ತಮ ಹವ್ಯಾಸಿಯ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ.........!!

21 ಕಾಮೆಂಟ್‌ಗಳು:

Sulatha Shetty ಹೇಳಿದರು...

nimma lekana oodi innomme pusthakada manege hoda haagaythu .

ಓ ಮನಸೇ, ನೀನೇಕೆ ಹೀಗೆ...? ಹೇಳಿದರು...

ಫೋಟೋಸ್ ಎಲ್ಲ ನೋಡಿ ಕುಶಿಯಾಯ್ತು..ಬ್ಲಾಗಿಗರ ಪ್ರವಾಸ ಅರ್ಥಪೂರ್ಣವಾಗಿತ್ತು ಅನ್ನಿಸ್ತಿದೆ. :)

Sulatha Shetty ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

ವಾವ್ ನಿಜವಾಗಿಯು ಅದ್ಬುಥ....ವೊಮ್ಮೆ ಭೇಟಿ ಕೊಡಲೆ ಭೇಕು..
ವಿಸ್ಮಯ ಪುಸ್ಥಕ ಲೋಕ ಪರಿಚಯಿಸದ್ದಕ್ಕೆ ಥ್ಯಾಂಕ್ಸ್...

shivu.k ಹೇಳಿದರು...

ಬಾಲು ಸರ್,
ಮತ್ತೊಮ್ಮೆ ಪುಸ್ತಕ ಲೋಕದೊಳಗೆ ಹೋಗಿಬಂದಂತೆ ಆಯ್ತು...ನೀವು ಅವರ ಬಗ್ಗೆ ನಿಮಗಿರುವ ಅರಿವು, ಕಾಳಜಿ ಅದರಿಂದಾಗಿ ನಾವೆಲ್ಲ ಹೋಗಿದ್ದು ನಿಮ್ಮ ಸಹಕಾರಕ್ಕೆ ಅನಂತ ಧನ್ಯವಾದಗಳು. ನಿಮ್ಮ ಲೇಖನ ಕೊನೆಯ ಪ್ಯಾರವನ್ನು ನಾನು ನನ್ನ ಬ್ಲಾಗಿನಲ್ಲಿ ಹಾಗೆ ಬಳಸಿಕೊಂಡಿದ್ದೇನೆ. ನಿಮ್ಮ ಅಭ್ಯಂತರವೇನು ಇಲ್ಲವೆಂದುಕೊಳ್ಳುತ್ತೇನೆ..
ಪುಸ್ತಕ ದೇಗುಲಕ್ಕೆ ಜಯವಾಗಲಿ...ವಿಶ್ವದಾದ್ಯಂತ ಕೀರ್ತಿ ಬೆಳಗಲಿ..ಜೈ ಹೋ...

ಸುಬ್ರಮಣ್ಯ ಹೇಳಿದರು...

ಪುಣ್ಯಾತ್ಮರು

ಜಲನಯನ ಹೇಳಿದರು...

ಬಾಲು ಸೂಪರ್...ಕಾಮೆಂಟರಿ...ಫೋಟೋಗಳು ಎಲ್ಲಾ....

Srikanth Manjunath ಹೇಳಿದರು...

ನಡೆದಾಡುವ ದೇವರನ್ನು ನೋಡಿದ್ದೇವೆ..ಅಭಿಮಾನಿಗಳಲ್ಲೇ ದೇವರನ್ನು ಕಾನುವರನ್ನು ನೋಡಿದ್ದೇವೆ..ಆದ್ರೆ ತಮ್ಮ ಹವ್ಯಾಸದಲ್ಲೇ ದೇವರನ್ನು ಕಾಣುವ ಶ್ರೀಮಾನ್ ಅಂಕೆ ಗೌಡರಿಗೆ ಸಾಷ್ಟ್ರಾಂಗ ನಮಸ್ಕಾರಗಳು..ಇಂತಹ ಚೇತನಗಳು ಪುಸ್ತಕಗಳ ಲೋಕವನ್ನು ತೆರೆದಿದುವದರಲ್ಲಿನ ಸೇವೆ ಅಮೋಘ...ಇನ್ನೊಮ್ಮೆ, ಮಗದೊಮ್ಮೆ ಭೇಟಿ ನೀಡಬೇಕಾದ ತಾಣ ..ಬಾಲು ಸರ್...ನಮ್ಮನೆಲ್ಲ ಈ ಲೋಕದಲ್ಲಿ ಈಜಾಡಲು ಅನುವು ಮಾಡಿಕೊಟ್ಟ ನಿಮ್ಮ ಶ್ರಮಕ್ಕೆ ಧನ್ಯವಾದಗಳು

Mahesh Gowda ಹೇಳಿದರು...

BALU ANNA .... hooo jothe naru swrga serithu .... antare....nim sahavasa madi .... navu sarasvathi loka nodkondu bandvi :)

Badarinath Palavalli ಹೇಳಿದರು...

ಅಂಕೇಗೌಡರು ಮತ್ತವರ ಪುಸ್ತಕ ಪ್ರೇಮ ನಮಗೆಲ್ಲ ಮಾದರಿಯಾಗಲಿ ಸಾರ್, ಸರಕಾರವೂ ಅವರಿಗೆ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಲಿ.

ಒಳ್ಳೆಯ ಸಚಿತ್ರ ಬರಹವನ್ನು ಓದಿದ ಅನುಭವವಾಯಿತು. ಮಾಹಿತಿ ಬರಪೂರವಾಗಿದೆ.

ವನಿತಾ / Vanitha ಹೇಳಿದರು...

Thanks for giving such a good information :)

ಮನಸು ಹೇಳಿದರು...

ಬಾಲು ಸರ್.. ಬಹಳ ಸುಂದರವಾಗಿ ಬರೆದಿದ್ದೀರಿ ಹಾಗೆ ಮಾಹಿತಿಯನ್ನು ನೀಡಿ ಎಲ್ಲರೂ ಹೋಗಿ ನೋಡಲೇಬೇಕು ಎನಿಸುವಂತೆ ಮಾಡಿದ್ದೀರಿ. ಧನ್ಯವಾದಗಳು. ಅಂಕೆಗೌಡ್ರು ಮತ್ತೆ ಅವರ ಧರ್ಮಪತ್ನಿ ಇಬ್ಬರನ್ನು ನೋಡಿದರೆ ಇಂತಹ ಮಹತ್ತರ ಸಾಧನೆ ಮಾಡಿದ್ದಾರೇ ಎಂದೆನಿಸುತ್ತೆ. ನಿಜಕ್ಕೂ ಅವರ ಹವ್ಯಾಸಕ್ಕೆ ತಲೆಬಾಗಿ ಶರಣೆನ್ನುವೆವು. ಜೋಡಿ ಜೀವಗಳನ್ನ ಚೆನ್ನಾಗೇ ನಿಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೀರಿ ಫೋಟೋಗಳು ತುಂಬಾ ಚೆನ್ನಾಗಿ ತೆಗೆದಿದ್ದೀರಿ. ನಿಮ್ಮ ನಿರೂಪಣೇ ಇಷ್ಟವಾಯ್ತು... ಅಂಕೇಗೌಡ್ರಿಗೆ ಜೈ ಎನ್ನಲೇಬೇಕು.

Ashok.V.Shetty, Kodlady ಹೇಳಿದರು...

ಬಾಲು ಸರ್.....

ನಮ್ಮೆಲ್ಲ ಬ್ಲಾಗ್ ಸ್ನೇಹಿತರು ಈ ಸುಂದರ ದೇಗುಲದ ಬಗ್ಗೆ ಬರೆದ ಲೇಖನಗಳನ್ನು ಓದುತ್ತ ಅಲ್ಲಿಗೆ ಹೋದ ಅನುಭವ ಆಗಿದೆ....ನಿಮ್ಮೊಂದಿಗೆ ಅಲ್ಲಿಗೆ ಬರುವ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ದುಃಖವಾಗುತ್ತಿದೆ. ಸುಂದರ ಲೇಖನ....ಧನ್ಯವಾದಗಳು...

ಗೆಳತಿ ಹೇಳಿದರು...

ನಮಸ್ತೆ ಸರ್,

ಮೊದಲಿಗೆ ನಿಮ್ಮ ಬರವಣಿಗೆ ಹಾಗೂ ಪೋಟೋಗ್ರಫಿ ತುಂಬಾ ಚೆನ್ನಾಗಿವೆ.

ಶ್ರೀಯುತ ಅಂಕೇಗೌಡರಿಗೆ ಹಾಗೂ ಅವರ ಎಲ್ಲಾ ಕಾರ್ಯಗಳಿಗೆ ಸ್ಪಂದಿಸುತ್ತಿರುವ ಅವರ ಶ್ರೀಮತಿಯವರಿಗೆ ಎಲ್ಲಾ ಪುಸ್ತಕ ಪ್ರೇಮಿಗಳ ಪರವಾಗಿ ನನ್ನ ಸಾಷ್ಟಾಂಗ ನಮಸ್ಕಾರಗಳು

ಇಂತಹ ಮಹಾತ್ಮರ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಟ್ಟ ನಿಮ್ಮ ತಂಡಕ್ಕೆ ನನ್ನ ಅನಂತ ಅನಂತ ವಂದನೆಗಳು.

Sum ಹೇಳಿದರು...

Super! Namage allige hogi ashtu pustakagalannu noduva avakasha tappitalla :( Mattomme nammannoo allige karedoyyiri...

Anuradha ಹೇಳಿದರು...

ಶಿವು ಅವರು ಇದರ ಬಗ್ಗೆ ಬರೆದದ್ದು ನೋಡಿದ್ದೆ ..ಹೋಗಬೇಕು ಎಂದೆನಿಸಿತ್ತು ..ನಿಮ್ಮ ಸಚಿತ್ರ ಬರಹ ಓದಿದ ನಂತರ ಹೋಗಲೇಬೇಕು ಅನ್ನಿಸಿದೆ ..ತುಂಬಾ ಚೆನ್ನಾಗಿ ಕಥೆ ಹೇಳುವ ರೀತಿ ಚಿತ್ರ ಮಾಲೆ ಹೆಣೆದಿದ್ದೀರಿ .
ಅಭಿನಂದನೆಗಳು .

ಸರಸ ಬಿಂದು ಹೇಳಿದರು...

ಬಹಳ ಚೆನ್ನಾಗಿದೆ..

ಸೀತಾರಾಮ. ಕೆ. / SITARAM.K ಹೇಳಿದರು...

Excellent!!

Ramesh Rammy ಹೇಳಿದರು...

Super...naanu miss madkonde ansta idhe..

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಬಾಲು ಸರ್ ನಿಮಗೆ ಹೇಗೆ ಧನ್ಯವಾದ ಹೇಳಲಿ ಗೊತ್ತಾಗ್ತಾ ಇಲ್ಲ. ಅಲ್ಲಿ ಕರೆದುಕೊಂಡು ಹೋಗಿದ್ದಕ್ಕೆ. ಮತ್ತು ಮತ್ತೆ ಮತ್ತೆ ನೆನಪಿನಲ್ಲುಳಿಯುವಂತಹ ಲೇಖನ ಕೊಟ್ಟಿದ್ದಕ್ಕೆ

Ittigecement ಹೇಳಿದರು...

ಬಾಲಣ್ಣಾ...

ನಾನುತಪಸ್ವಿ...
ಋಷಿ .. ಮುನಿಗಳನ್ನು ನೋಡಿಲ್ಲ...
ಆದರೆ "ಅಂಕೆಗೌಡರನ್ನು ನೋಡಿದ್ದೇನೆ"

ಅವರು ನಮ್ಮ ಕನ್ನಡದ ಹೆಮ್ಮೆ...

ನಮ್ಮ ಸರ್ಕಾರಗಳು ಸಾಯುವ ಮೊದಲು (ಎಲ್ಲ ಪಕ್ಷಗಳನ್ನು ಸೇರಿಸಿ ಹೇಳುತ್ತಿರುವೆ)
ಅವರು ಸಂಗ್ರಹಿಸಿರುವ ಪುಸ್ತಕಗಳನ್ನು ಚೆನ್ನಾಗಿ ಇಡುವ ಕಾರ್ಯಕ್ರಮ ಮಾಡಲಿ...

ಅಂಕೆಗೌಡರನ್ನು ಭೇಟಿಯಾಗಿದ್ದು ನಿಮ್ಮಿಂದಾಗಿ...!

ದೇವರು ಅವರಿಗೆ..
ಅವರ ಕುಟುಂಬಕ್ಕೆ ಆಯುರಾರೋಗ್ಯ ಸಂಪತ್ತು ಕೊಡಲೆಂದು ಪ್ರಾರ್ಥಿಸುವೆ...