ಶನಿವಾರ, ಫೆಬ್ರವರಿ 23, 2013

"ಅಪ್ಪಾ ಅಂದ್ರೆ ಆಕಾಶ ", ..........ಹಾಸ್ಯಕ್ಕೂ ಇಲ್ಲಿದೆ ಅವಕಾಶ.




ಕಳೆದ ಭಾನುವಾರ  ೧೭-೦೨ ೨೦೦೩ ರಂದು ಬೆಂಗಳೂರಿನ  ರವಿಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಗೆಳೆಯ ಶ್ರೀ ಮಣಿಕಾಂತ್ ರವರ "ಅಪ್ಪಾ ಅಂದ್ರೆ ಆಕಾಶ" ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇತ್ತು.ಇಂತಹ ಕಡೆ ನಮ್ಮ ಗೆಳೆಯರ ದಂದು ಸೇರಿತ್ತು ಬಿಡಿ , ಅಲ್ಲಿ ಸೆರೆ ಸಿಕ್ಕಿದ ಕೆಲವು ದೃಶ್ಯಗಳು ಇಲ್ಲಿವೆ. ಕಾರ್ಯಕ್ರಮದ ನೋಟವನ್ನು ಹಾಸ್ಯ ದೃಷ್ಟಿಯಿಂದ ಇಲ್ಲಿ ಪ್ರಕಟಿಸಲಾಗಿದೆ ವಯಕ್ತಿಕವಾಗಿ ತಪ್ಪಾಗಿ ತೆಗೆದುಕೊಳ್ಳದೆ  ಕೇವಲ ಹಾಸ್ಯ ದೃಷ್ಟಿಯಿಂದ ಇದನ್ನು ನೋಡಿ ನಕ್ಕು ಸಂತಸ ಪಟ್ಟರೆ ಅಷ್ಟೇ ಈ ಹಾಸ್ಯ ಹೂರಣ ಸಾರ್ಥಕತೆ ಪಡೆಯುತ್ತದೆ. ಇನ್ನೇಕೆ ತಡ ಬನ್ನಿ ನಿಮಗೆ ಸ್ವಾಗತ.


ಅಮ್ಮನ ಬಾಯಲ್ಲಿ ಸುಳ್ಳು ಹೇಳಿಸಿ ಅಪ್ಪನನ್ನು  ಆಕಾಶ ಅಂತಾರೆ ಮಣಿಕಾಂತ್.



ಮದುವೆ ಮನೆ ಅಲ್ಲಾ ರೀ..... ಇದು   ಸರಸ್ವತಿ ಮನೆ.
ಇಲ್ಲಿರುವ ಎಲ್ಲರಿಗೂ ಅವರ ಅಪ್ಪನ ಚಿಂತೆ ..........!!!
ಬನ್ನಿ ಒಳಗೆ ನಿಮಗೆ ಸ್ವಾಗತ 
ಸುಂದರ ಹೂಗಳು  ಚಿತ್ತಾರವಾಗಿ ನಗುತ್ತವೆ ....ಆದರೆ ನಾವು ............??
ಪುಸ್ತಕದ ಲೇಖಕ ಬಲಗಾಲಿಟ್ಟು ಒಳಗೆ ಬಂದರೆ ಶುಭವಂತೆ ............!!!
ಲೇಖಕನಿಗೆ ಸಾಥ್ ಕೊಡಲು ಹರುಷದಿ ಬಂದ ಪತ್ನಿ ಹಾಗು ಮಗಳು.
ಏನ್ ಶಿವೂ ಸಾರ್ ಇತ್ತೀಚಿಗೆ ಒಬ್ಬೊಬ್ಬರೇ ಬರ್ತಾಯಿದ್ದೀರ .... ಮೇಡಂ ಎಲ್ಲಿ.??
ನನಗೂ ನಮ್ಮ ಅಪ್ಪಾ ಅಂದ್ರೆ ಆಕಾಶ ಕಣ್ರೀ ...!!
ಜೀವನದ ಪರೀಕ್ಷೆಯಲ್ಲಿ ಗೆದ್ದು ನಗೆ ಬೀರಿದ ಜನಾ ಇವರು.
ಪ್ರೀತಿಯ ಅಪ್ಪುಗೆಗೆ ನಗೆಯ ಸಿಂಚನ.
ಯಾಕ್ರಪ್ಪಾ ಇಬ್ಬರ  ಮುಖದಲ್ಲಿ ನಗು ಇಲ್ಲಾ  ಸ್ವಲ್ಪ ನಗಿ ನೋಡೋಣ.
ಪ್ರಕಾಶ್ ಹೆಗ್ಡೆ ನರ್ತನಕ್ಕೆ ಸುಲತಾ ಹಾಕಿದರು ತಾಳ  ಉಮೇಶ ದೇಸಾಯಿಯವರ  ಗಾಯನ 
ಅಲ್ಲಿದೆ ಅಂತಾ ಒಬ್ಬರು ಅಂದ್ರೆ ......ಇಲ್ಲಿದೆ ಅಂತಾ ಇನ್ನೊಬ್ಬರು 
ಛಾಯಾಗ್ರಾಹಕನ ಸುತ್ತಾ  ವಿವಿಧ  ಭಾವನೆಗಳ ವೃತ್ತ 
ಅಕ್ಕಾ  ನಿಮ್ಮಪ್ಪಾ ಅಂದ್ರೆ ಇಷ್ಟಗಲ ಆಕಾಶನ ???
ಎಲ್ಲಾ  ತಿಂಡೀ  ರೆಡಿನಾ ......???
ಪ್ರಕಾಶ್ ಹೆಗ್ಡೆ ಕೆಫೆಯ  ಒಂದು ನೋಟ 
ಬಾಲಣ್ಣ  ನಾನು ಈ ಸಾರಿ ಹುಷಾರ್  ಆಗಿರ್ತೇನೆ 
ಒಳಗೆ ಬನ್ನಿ ಸಾರ್ ಬೇಗ  ..........ಕಾರ್ಯಕ್ರಮ ಶುರುವಾಗಲಿ..
ಎಲ್ಲರಿಗಿಂತ ಮೊದಲು ವೇದಿಕೆ ಏರಿದ್ದು  ಈ ಅಜ್ಜಿ
ಅಪ್ಪಾ ಅಂದ್ರೆ  ಆಕಾಶ ಸರಿ ............ಆದರೆ ಅಜ್ಜಿ ಅಂದ್ರೆ ??
ಆಕಾಶದ ಅಪ್ಪಂದಿರ ಜೊತೆ ನೂರೆಂಟು ಸುಳ್ಳು ಹೇಳಿದ ಅಮ್ಮಂದಿರು 
ಲಾರೆಲ್ ಮತ್ತು ಹಾರ್ಡಿಯ  ಕ್ಯಾಟ್ ವಾಕ್ 
ಈ ಕವಿಯ ನಗೆಯಲ್ಲಿ ಯಾವ ಕವಿತೆಯ ಹೂರಣ ಅಡಗಿದೆಯೋ ......!!!!
ಹೂವಿನ ಚಿತ್ತಾರದ ಪಕ್ಕ ಹೂ ಮನಸಿನ ಬದರೀ ನಾಥ್ 
ನಾನು ಮಾಯವಾಗಿದ್ದ ದಿನಗಳ ಬಗ್ಗೆ ಕೇಳಬೇಡಿ ಪ್ಲೀಸ್ ಅಂದ್ರೂ ಪ್ರದೀಪ್ ರಾವ್ 
ನೋಡೀ ಸಾರ್ ಇವರು ನಿಮ್ಮ ಕ್ಯಾಮರಾಗೆ ಮುಖ ತೋರಿಸಲ್ವಂತೆ.
ಶ್ರೀಕಾಂತ್ ನಿಮ್ಮ ಕಾಂತೆ ಅಲ್ಲಿಲ್ಲ  ಈ ಕಡೆ ನೋಡೀ ಸಾರ್ 
ನಾವ್ ನಗೊದೆ ಹೀಗೆ ಸಾರ್ 
ಡೈರೆಕ್ಟರ್ ಸಾಹೇಬ್ರೆ ಯಾಕೆ ಇಷ್ಟು ಸೀರಿಯಸ್ಸು ... ಸ್ವಲ್ಪ ನಗೀ ಪ್ಲೀಸ್ 
ನಾಲ್ಕು ಜ್ಞಾನಿಗಳ ಜೊತೆ ಒಬ್ಬ ಪೆದ್ದ [ ನೀಲಿ ಟೀ ಶರ್ಟ್ ಹಾಕಿದವ ]
ಎರಡು ನಗು ನಡುವೆ  ಮುಗುಳ್ ನಗು ಪಕ್ಕದಲ್ಲಿ ಎರಡು ಸೀರಿಯಸ್ಸು 
ತಿನ್ನೋದ್ರಲ್ಲಿ ನಾನೇ ಫಾಸ್ಟು ... ಇವರು ತುಂಬಾ ಸ್ಲೋ ಗೊತ್ತ 
ಮುಷ್ಠಿ ಬಿಗೀ ಹಿಡಿದು ಮಾತಾಡೋದು ಹೀಗೆ ಗೊತ್ತ  ಅಂದ್ರು ಡೈರೆಕ್ಟರ್ 
ಏನ್ರೀ ಕೈತುಂಬಾ  ಇಷ್ಟೊಂದು ... ನಮಗೂ ಸ್ವಲ್ಪ ಕೊಡಿ.
ನಕ್ಕರೆ ಅದೇ ಸ್ವರ್ಗ 
ಐದು ಮಂದಿಯ ಐದು ಬಗೆಯ ಸಂತಸದ ಭಾವನೆಗಳ ಅನಾವರಣ.
ಮೊಬೈಲ್ ನಲ್ಲಿ ಅಳುತ್ತಾ ಮಾತಾಡೋದು ಹೀಗೆ ಗೊತ್ತ ...!!
ಸ್ಮೈಲ್ ಪ್ಲೀಸ್ .......ಅಂಡ್  ಸ್ಟೈಲ್ ಪ್ಲೀಸ್ ........ಪ್ರಕಾಶಣ್ಣ ಫೋಟೋ ತೆಗೀತಾರೆ.
ವಿವಿಧ ಗಾತ್ರದ ಅಕ್ಷರ ಪ್ರಿಯರು 
ಹಿಂಗೆ ಸೀರಿಯಸ್ಸಾಗಿ ನಿಂತರೆ ಫೋಟೋ ತೆಗೆಯೋದು ಹೇಗೆ ಮಾರಾಯ್ರೇ 
ಪ್ರಕಾಶಣ್ಣನ ತುಂಟ ಕ್ಯಾಮರ ಮಾಡಿದೆ ಚೇಷ್ಟೆ 
ನಿ
ಅಶೋಕ್ ಶೆಟ್ಟಿ ಯವರ  ಮುಂಬೈ ನಗು 
ಪಾಪ  ತುಂಟ ಮಕ್ಕಳು ಚೇಷ್ಟೆ  ಮಾಡಿ ಕೊಳ್ಳಲಿ ಬಿಡಿ.
ಚೇಷ್ಟೆ ಮಾಡಿ ಸುಸ್ತಾದ ಮುದ್ದು ಮಕ್ಕಳು.
ಇವರಿಬ್ಬರಲ್ಲಿ ನಕ್ಕವರು ಯಾರು ??? ಹೇಳಿದ್ರೆ ಬಹುಮಾನ ಉಂಟು.
ನಗೆಯ ಸಂಚು ನಡೆದಿದೆ ಇಲ್ಲಿ.
ಇವರ ಹಾಡಿಗೆ ತಲೆದೂಗದವರು ಯಾರು ??
ನಟಿ ಭಾವನ ರವರ ಭಾವನೆ ಮೂಡಿದ್ದು ಹೀಗೆ.
ಅಪ್ಪಾ ಇವರೆಲ್ಲಾ ಯಾರಪ್ಪ .....???
ಮನದಾಳದ ಭಾವನೆ ತುಂಬಿದ ಗಾಯನ ಇವರದ್ದು 
ಜ್ಞಾನದ, ಪ್ರೀತಿಯ  ನಗೆಯ ದೀಪ ಬೆಳಗೋಣ ಬನ್ನಿ 
ಎರಡು ಅದ್ಭತ ಪ್ರತಿಭೆಗಳ ಸಮಾಗಮ.
ಹಲೋ ಕಾರ್ಯಕ್ರಮ ಶುರು ಆಯ್ತು. ನಿಮ್ಮೆಲ್ಲರಿಗೂ  ಸ್ವಾಗತ.
ನಟಿ  ಹಾಗು ಪತ್ರಕರ್ತರ ನಡುವೆ ಪುಸ್ತಕ ಅಪ್ಪಿದ ಪ್ರೀತಿಯ  ಮಹಾ ಕವಿ 
ನಗು ನಗುತ್ತಾ  ಜ್ಞಾನದ ಜ್ಯೋತಿ ಬೆಳಗೋಣ ಬನ್ನಿ 
ಕನ್ನಡ ತಾಯಿಯ ಹೆಮ್ಮೆಯ ಮಕ್ಕಳು ಇವರು.
 ನಾವು  ಬಿಡುಗಡೆ  ಮಾಡಿದ್ದು ಇದೆ ಪುಸ್ತಕ ಕಣ್ರೀ ಆದರೆ..........ಶೇರ್ ಮಾಡದೆ  ಕೊಂಡು  ಓದಿ ಪ್ಲೀಸ್ .
ನಗು ಆರೋಗ್ಯಕ್ಕೆ ಒಳ್ಳೆಯದು  
ಜೀವನ ಗೆದ್ದ ಜೋಡಿಗೆ ಉಗೆ........ ಉಗೆ .... ಜೈ ಜೈ  ಹೊ 
ಕತ್ತಲೆಯ ಜೀವನಕ್ಕೆ ಬೆಳಕು ಮೂಡಿಸಿದ  ಗುರು, ಹಾಗು ಬೆಳಕು ಪಡೆದುಸಾಧನೆಯ ಶಿಖರ ಏರಿದ ಶಿಷ್ಯ 
ಭೇಷ್  ಕಣ್ರೀ ನಿಮ್ಮ ಸಾಧನೆ ಇತರರಿಗೆ ಮಾದರಿ.
ನಿಮ್ಮಂತವರ ಸಾಧನೆ ಸಮಾಜಕ್ಕೆ ಅದ್ಭತ ಕೊಡುಗೆ ಕಣ್ರೀ 
ಒಳ್ಳೆಯ ಮನಸು ಒಳ್ಳೆಯ ಭಾವನೆ. ವ್ಯಕ್ತ ಆಗೋದು ಹೀಗೆ 
ಕನ್ನಡ ತಾಯಿಯ  ಮಗಳು.
ವಿಶ್ವೇಶ್ವರ ಭಟ್ಟರು ನೀರು ಕುಡಿಯೋದನ್ನು ನನ್ನ ಯಾವ ಚಿತ್ರಕ್ಕೆ ಬಳಸಿಕೊಳ್ಳಲಿ ಅಂತಾ ಗುರುಪ್ರಸಾದ್ ಯೋಚಿಸಿದ್ದು ಹೀಗೆ.
ವೇದಿಕೆಯಲ್ಲಿ  ಯಾವರೀತಿ ಮಾತನಾಡಲಿ ಅಂತಾ ಡೈರೆಕ್ಟರ್  ಸ್ಕೆಚ್ ಹಾಕಿದ್ದು ಹೀಗೆ.
ಪತ್ರಕರ್ತರು ಪಕ್ಕದಲ್ಲಿದ್ದಾಗ ಪ್ರಾಣಾಯಾಮ ಮಾಡೋದು ಒಳ್ಳೆಯದು ಅಂದ್ರೂ ಗುರುಪ್ರಸಾದ್.
ಹಳೆಯಕಾಲದ  ಚಲನ ಚಿತ್ರಗಳಲ್ಲಿ ಭಾವನ ಇದ್ದಿದ್ದರೆ ಹೀಗೆ ಕಾಣ್ತಿದ್ರು 
ಹಳೆಯಕಾಲದ ಕಪ್ಪು ಬಿಳುಪಿನ ಚಲನಚಿತ್ರಗಳಲ್ಲಿ  ನಟಿ  ಭಾವನ ಅವರು ಇದ್ದಿದ್ರೆ ....!!
ಹಾಡಿದೆ ಮಿಡುಕಾಡಿದೆ  ಹೃದಯ  ವೀಣೆಯೊಳಗೆ 
ಛಾಯಾ ಚಿತ್ತಾರ  ಇಲ್ಲಿದೆ ನೋಡಿ 
ಇವರ ಹೃದಯ ತುಂಬಿ ಬಂಡ ಮಾತುಗಳು ಕಣ್ಣಲ್ಲಿ ನೀರು ಬರಿಸಿದವು.
ಎಲ್ಲರ ಗಮನವೂ ಒಂದೇ ಕಡೆ ....!!!
ಈ ಕನ್ನಡ ಮಣ್ಣಿನ ಮಗನ ಮಾತು ಅದ್ಭುತ ಕಣ್ರೀ 
ಈ  ಬಾಟಲ್  ನಂದು  ಮೇಡಂ ಅಲ್ಲೇ ಇರಲಿ ಬಿಡಿ.
ಕನ್ನಡಿಗನ ಚಪ್ಪಾಳೆಯ  ವಿಶ್ವರೂಪ  ದರ್ಶನ 
ಭಾವನ ಪಕ್ಕ ಕೂರುವ ಆಸೆಗೆ ತಣ್ಣೀರ್ ಎರಚಿ ವಂಚಿಸಿದ ಮಣಿಕಾಂತ್ ಗೆ ಪ್ರೀತಿಯ ಶಾಪ ಗಳು 
"ಅಪ್ಪಾ ಅಂದ್ರೆ ಆಕಾಶ "ಪುಸ್ತಕಕ್ಕೆ  ತನ್ನಪ್ಪನ ಪ್ರೀತಿಯ ಕಾಣಿಕೆ ನೀಡಿದ ಗುರುಪ್ರಸಾದ್ 
ಮಣಿಕಾಂತ್  ನಿಮಗೆ ಗುರುಪ್ರಸಾದ್ ಶಾಪ ಹಾಕ್ತಿದ್ದಾರೆ ಗೊತ್ತಾ??ಅಂದ್ರು  ಭಾವನ.
ನಮ್ಮೊಡನೆ ಈ ಹೊತ್ತು ಜಗವೆಲ್ಲಾ ಸಾಗಿರಲು.
ನನ್ನ ಮುಂದಿನ ಹೆಜ್ಜೆಗಳಿಗೆ ನಿಮ್ಮ ಪ್ರೀತಿಯ ಹಾರೈಕೆಇರಲಿ.
ಮೊರೆದಿದೆ ತೊರೆ ಹರಿದಿದೆ ತುಂಬಿದಂತೆ ಬಾಳು.
ಜನಗಳ ಮನ ಅರಿತ ಭಟ್ಟರು ಆಡಿದ ಪ್ರೀತಿಯ ಮಾತುಗಳು.
ಆತ್ಮೀಯ ಲೇಖಕನಿಗೆ ಪ್ರೀತಿಯ ಸನ್ಮಾನ.
ಪ್ರೀತಿ ತುಂಬಿದ ಆ ಕ್ಷಣಗಳು 
ಗಿರೀಶ್ ಸೋಮಶೇಖರ್   ರಚಿಸಿದ ಪುಸ್ತಕದ ಚಿತ್ತಾರ.
ಇವ್ರು ನಮ್ಮಮ್ಮ ಗೊತ್ತಾ ??
ಪ್ರೀತಿಯ ನಿರ್ದೇಶಕರನ್ನು ನಿರ್ದೇಶಿಸುತ್ತಿರುವ  ಅಭಿಮಾನಿಗಳು.
ಹೂವಿನ ಚಿತ್ತಾರಕ್ಕೆ ಹೂಮನಸಿನ ಮಕ್ಕಳ ಚಿತ್ತಾರದ ಅಲಂಕಾರ 
ಇಬ್ಬರು ತುಂಟ ಹುಡುಗರು 
ಕದ್ದು ಫೋಟೋ ತೆಗ್ಯೋದು ಹೀಗೆ ಗೊತ್ತ ??
ಪ್ರದೀಪ್ ಮತ್ತೆ  ಯಾವಾಗ  ಮಾಯ  ಆಗ್ತೀರ ?
ರೀ ಸರಿಯಾಗಿ ಫೋಟೋ  ಕ್ಲಿಕ್ ಮಾಡಿಯಪ್ಪ ...!!!
ಫೋಟೋ ಸರಿಯಾಗಿ ಬಂತಾ ಪ್ರಕಾಶಣ್ಣ.
ದೇವರೇ ಇವರ ಜ್ಞಾನದ ಬೆಳಕು ನನ್ನ ಮೇಲೂ ಬೀಳಲಿ.

ಪ್ರೀತಿಯ ಲೋಕಕ್ಕೆ  ಆತ್ಮ ಸಾಕ್ಷಿ ಎಂಬ ನಾಯಿಯ ಕಾವಲು.
ನಾಡಿನ ಹೆಮ್ಮೆಯ ತುಂಟ ಕವಿಯ[ಬಿ.ಆರ್.ಲಕ್ಷ್ಮಣ್ ರಾವ್ ] ಜೊತೆ ತುಂಟ ಹುಡುಗ ಸತೀಶ್ 
ಸಾಧಕರ ಜೊತೆಯಲ್ಲಿ  ಮೈಸೂರಿನ ಪೆದ್ದ ಹೈದ 
ನನಗೆ ಸಿಕ್ಕ ಜೀವನದ ಅದ್ಭತ ಕೊಡುಗೆಗಳು ಇವರು [ ನೀಲಿ ಬಣ್ಣದ  ಟೀ ಶರ್ಟ್ ನವನನ್ನು ಬಿಟ್ಟು ]
ಗುಟ್ಟೊಂದ  ಹೇಳುವೆ ಹತ್ತಿರ ಹತ್ತಿರ ಬಾ 
ಪ್ರೀತಿ ತುಂಬಿದ ಆನಂದಮಯ  ಈ ಸಂಸಾರ 
ಮಣಿಕಾಂತ್ ಸಂಸಾರಕ್ಕೆ ಒಳ್ಳೆಯದಾಗಲಿ ಅಂದ್ರು ಗೋಪಾಲ್ ವಾಜಪೇಯಿ 
ಈಗ ಗೊತ್ತಾಯ್ತಾ "ನಮ್ಮಪ್ಪ ಅಂದ್ರೆ ಆಕಾಶ"


 ಇವಿಷ್ಟು  ನನಗೆ ಸಿಕ್ಕ ಚಿತ್ರಗಳು ನಿಮಗೆ ಸಂತೋಷ  ಆಗಿದ್ರೆ ಕಾಮೆಂಟ್ ಹಾಕಲು ಮರೆಯ ಬೇಡಿ.