ಭಾನುವಾರ, ಜುಲೈ 28, 2013

ಸಮುದ್ರದಲ್ಲಿ ಕಾಣಸಿಕ್ಕ ಪ್ರಕೃತಿಯ ಕಣ್ಣಾ ಮುಚ್ಚಾಲೆ

ಪ್ರಶಾಂತ ಕಡಲು 

 ನಮಸ್ಕಾರಬಹಳ ದಿನಗಳ ನಂತರ "ಕಣ್ಣಾ  ಮುಚ್ಚಾಲೆ " ನಿಮ್ಮ ಮುಂದೆ ಬಂದಿದೆ,  ಸಮುದ್ರ ಕಿನಾರೆ ಯಾರಿಗೆ ಇಷ್ಟಾ ಆಗೋಲ್ಲಾ ಹೇಳಿ, ಎಲ್ಲಾ ವಯಸ್ಸಿನವರೂ ಕೂಡ ಸಮುದ್ರದ ತೀರಕ್ಕೆ ಬಂದೊಡನೆ ಅಲೆಗಳ ಜೊತೆ ಆಟಾ  ಆಡಲು ಹಾ ತೊರೆಯುತ್ತಾರೆ. ಇನ್ನು ಪ್ರೇಮಿಗಳಂತೂ ಹೇಳೋದೇ ಬೇಡ  ತಮ್ಮ ಪ್ರೀತಿಯ  ಸುಂದರ ಕ್ಷಣಗಳನ್ನು  ಕಡಲಿನ ತಡಿಯಲ್ಲಿ ಕಳೆಯುತ್ತಾರೆ,  ಇನ್ನು  ಕೆಲವು ಪಡ್ಡೆ ಹೈಕಳಂತೂ   ತಮ್ಮ ಸಾಹಸ ಪ್ರದರ್ಶಿಸಿ  ಸುತ್ತ ಮುತ್ತಲಿನ ಹೆಣ್ಣು ಮಕ್ಕಳ  ಕಣ್ಣಲ್ಲಿ ಹೀರೋ ಆಗಲು ಪ್ರಯತ್ನಿಸುತ್ತಾರೆ, ಇನ್ನು ಕ್ಯಾಮರಾಗಳ ಹಾವಳಿ  ಅಂದರೆ ಡಿಜಿಟಲ್ ಕ್ಯಾಮರ, ಮೊಬೈಲ್ ಕ್ಯಾಮರ ಬಂದಮೇಲಂತೂ ಕೇಳೋದೇ ಬೇಡ  ಯಾವುದೇ ಜಾಗವಾದರೂ ಸರಿಯೇ ತಾವೂ  ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಪಡುತ್ತಾರೆ, ಹಾಗೆ ಜಾಗದ ಸರಿಯಾದ ಪರಿಚಯವಿಲ್ಲದೆ , ಅಥವಾ ಪ್ರಕೃತಿಯ ಆಳದ ಅರಿವಿಲ್ಲದೆ ತೊಂದರೆಗೆ ಈಡಾಗುತ್ತಾರೆ,  ಕೆಲವೊಮ್ಮೆ ಬುದ್ದಿ ಹೇಳಲು  ಹೋದರೆ ಅವಮಾನ ಮಾಡಿ ಕಳುಹಿಸುತ್ತಾರೆ , ರೀ ಸ್ವಾಮೀ ನಾನು ಎಂತೆಂತಹ  ಜಾಗದಲ್ಲೋ ಈಜಿದ್ದೇನೆ, ಇದ್ಯಾವ ಮಹಾ ಎನ್ನುತ್ತಾರೆ, ಇಂತಹವರಿಗೆ ಬುದ್ದಿ ಹೇಳಿದ ಜನ ಮೂರ್ಖರಾಗುತ್ತಾರೆ. . ಗೋಕರ್ಣದ ಕಡಲ ಕಿನಾರೆಯಲ್ಲಿ ಹೀಗೆ ಆಯ್ತು, ಯಾಕೋ ಗೊತ್ತಿಲ್ಲಾ ಈ ಚಿತ್ರದಲ್ಲಿನ ಬಂಡೆ  ನನ್ನ ಗಮನ ಸೆಳೆಯಿತು, ಇಲ್ಲಿ ಏನೋ ಆಗುತ್ತೆ ಎನ್ನುವ  ಆರನೇ ಇಂದ್ರೀಯದ  ಸೂಚನೆ  ಬರುತ್ತಿತ್ತು, ಕಾದು ಕುಳಿತೆ ಕ್ಯಾಮರ ಹಿಡಿದು, ಆಗ ಕಂಡ ಚಿತ್ರಗಳು ಮೈ ಜುಮ್ಮೆನ್ನಿಸಿದ್ದವು.  ಈ ಚಿತ್ರಗಳನ್ನು ನೋಡಿಯಾದರೂ ನೀವು ತೆರಳುವ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ  ಸಾಹಸ ಮಾಡಲು ಹೋಗಬೇಡಿ ಎನ್ನುವುದೇ ಈ ಲೇಖನದ ಉದ್ದೇಶ ಬನ್ನಿ ನೋಡೋಣ





ಇದ್ಯಾವ ಮಹಾ ಗುರು ಎಂತೆಂತಹ  ಜಾಗ ನೋಡಿದ್ದೇನೆ



ಇದ್ಯಾವ ಸೀಮೆ ಅಲೆ ಗುರು  , ಇದಕ್ಕಿಂತಾ ಭಾರಿ ನೋಡಿದ್ದೇನೆ

ಅರೆ ಇದೇನಿದು ಸ್ವಲ್ಪ ತಾಳು

ಅಯ್ಯೋ ದೇವ್ರೇ ಇದೇನಪ್ಪಾ

ಏನ್ರೀ ಕಥೆ ಇದು..... !!  ಅದೇ ಇಲ್ಲಿ ಫೋಟೋ ತೆಗೆಯೋಕೆ ಹೋಗಿದ್ರೆ ಅಷ್ಟೇ

ಅಯ್ಯಪ್ಪ......  ಬದುಕಿತು ಬಡಜೀವ   ನಿನ್ನೆತಾನೆ ನಾನು ನನ್ನ ಹುಡುಗಿ ಇಲ್ಲಿ  ಕುಳಿತು ಫೋಟೋ ತೆಗೆಸ್ಕೊಳ್ಳಲು ಹೋಗಬೆಕಾಗಿತ್ತು.

ಓ ಮೈ ಗಾಡ್   ನಂಬೋಕೆ ಆಗ್ತಾ ಇಲ್ಲ

 ಯಪ್ಪಾ  ಏನ್ರೀ ಇದು  .... ನನ್ನ ಕಣ್ಣನ್ನು ನಾನೇ ನಂಬೋಕೆ ಆಗ್ತಾ ಇಲ್ಲಾ.

ಅಲ್ಲಿ ಯಾರೇ ಇದ್ರೂ  ಬಚಾವ್ ಆಗೋಗೆ ಸಾಧ್ಯಾನೆ ಇಲ್ಲಾ ಬಿಡಿ

ಅಯ್ಯಾ ಮಾನವರೇ ನನಗೆ ಸವಾಲ್ ಹಾಕ್ತೀರಾ

ಪ್ರಕೃತಿಯ  ರೌದ್ರ ನರ್ತನ

ಕೋಪ ಕಡಿಮೆ ಆಗುವ ಸಮಯ

ಸುಮ್ನೆ ಹಾಗೆ ಬಂದೆ ತೊಳೆದೆ ಅಷ್ಟೇ

ಇಲ್ಲಿ ಏನೂ ಆಗಿಲ್ಲಾ ಬಿಡ್ರೀ

ನೋಡಿದ್ರಲ್ಲಾ   ಕಡಲ ಅಲೆಯ ಪ್ರತಾಪ, ಮುಂದೆ ಕಡಲ ತೀರಕ್ಕೆ ಹೋದಾಗ , ಅಲ್ಲಿನ ಸಮುದ್ರದ ಬಗ್ಗೆ  ಅಲ್ಲಿನ ಸ್ಥಳೀಯ ಜನರಿಂದ ಮಾಹಿತಿ ಪಡೆಯಿರಿ,  ಜೊತೆಗೆ ಏನೂ ಗೊತ್ತಿಲ್ಲದೇ ಸಾಹಸ ಮಾಡಲು ಹೊಗಬೇಡಿ . ಅದೇ ನನ್ನ ಆಸೆ ಗೆಳೆಯರೇ .