ಕಳೆದ ಭಾನುವಾರ ೧೭-೦೨ ೨೦೦೩ ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಗೆಳೆಯ ಶ್ರೀ ಮಣಿಕಾಂತ್ ರವರ "ಅಪ್ಪಾ ಅಂದ್ರೆ ಆಕಾಶ" ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇತ್ತು.ಇಂತಹ ಕಡೆ ನಮ್ಮ ಗೆಳೆಯರ ದಂದು ಸೇರಿತ್ತು ಬಿಡಿ , ಅಲ್ಲಿ ಸೆರೆ ಸಿಕ್ಕಿದ ಕೆಲವು ದೃಶ್ಯಗಳು ಇಲ್ಲಿವೆ. ಕಾರ್ಯಕ್ರಮದ ನೋಟವನ್ನು ಹಾಸ್ಯ ದೃಷ್ಟಿಯಿಂದ ಇಲ್ಲಿ ಪ್ರಕಟಿಸಲಾಗಿದೆ ವಯಕ್ತಿಕವಾಗಿ ತಪ್ಪಾಗಿ ತೆಗೆದುಕೊಳ್ಳದೆ ಕೇವಲ ಹಾಸ್ಯ ದೃಷ್ಟಿಯಿಂದ ಇದನ್ನು ನೋಡಿ ನಕ್ಕು ಸಂತಸ ಪಟ್ಟರೆ ಅಷ್ಟೇ ಈ ಹಾಸ್ಯ ಹೂರಣ ಸಾರ್ಥಕತೆ ಪಡೆಯುತ್ತದೆ. ಇನ್ನೇಕೆ ತಡ ಬನ್ನಿ ನಿಮಗೆ ಸ್ವಾಗತ.
ಅಮ್ಮನ ಬಾಯಲ್ಲಿ ಸುಳ್ಳು ಹೇಳಿಸಿ ಅಪ್ಪನನ್ನು ಆಕಾಶ ಅಂತಾರೆ ಮಣಿಕಾಂತ್. |
ಮದುವೆ ಮನೆ ಅಲ್ಲಾ ರೀ..... ಇದು ಸರಸ್ವತಿ ಮನೆ. |
ಇಲ್ಲಿರುವ ಎಲ್ಲರಿಗೂ ಅವರ ಅಪ್ಪನ ಚಿಂತೆ ..........!!! |
ಬನ್ನಿ ಒಳಗೆ ನಿಮಗೆ ಸ್ವಾಗತ |
ಸುಂದರ ಹೂಗಳು ಚಿತ್ತಾರವಾಗಿ ನಗುತ್ತವೆ ....ಆದರೆ ನಾವು ............?? |
ಪುಸ್ತಕದ ಲೇಖಕ ಬಲಗಾಲಿಟ್ಟು ಒಳಗೆ ಬಂದರೆ ಶುಭವಂತೆ ............!!! |
ಲೇಖಕನಿಗೆ ಸಾಥ್ ಕೊಡಲು ಹರುಷದಿ ಬಂದ ಪತ್ನಿ ಹಾಗು ಮಗಳು. |
ಏನ್ ಶಿವೂ ಸಾರ್ ಇತ್ತೀಚಿಗೆ ಒಬ್ಬೊಬ್ಬರೇ ಬರ್ತಾಯಿದ್ದೀರ .... ಮೇಡಂ ಎಲ್ಲಿ.?? |
ನನಗೂ ನಮ್ಮ ಅಪ್ಪಾ ಅಂದ್ರೆ ಆಕಾಶ ಕಣ್ರೀ ...!! |
ಜೀವನದ ಪರೀಕ್ಷೆಯಲ್ಲಿ ಗೆದ್ದು ನಗೆ ಬೀರಿದ ಜನಾ ಇವರು. |
ಪ್ರೀತಿಯ ಅಪ್ಪುಗೆಗೆ ನಗೆಯ ಸಿಂಚನ. |
ಯಾಕ್ರಪ್ಪಾ ಇಬ್ಬರ ಮುಖದಲ್ಲಿ ನಗು ಇಲ್ಲಾ ಸ್ವಲ್ಪ ನಗಿ ನೋಡೋಣ. |
ಪ್ರಕಾಶ್ ಹೆಗ್ಡೆ ನರ್ತನಕ್ಕೆ ಸುಲತಾ ಹಾಕಿದರು ತಾಳ ಉಮೇಶ ದೇಸಾಯಿಯವರ ಗಾಯನ |
ಅಲ್ಲಿದೆ ಅಂತಾ ಒಬ್ಬರು ಅಂದ್ರೆ ......ಇಲ್ಲಿದೆ ಅಂತಾ ಇನ್ನೊಬ್ಬರು |
ಛಾಯಾಗ್ರಾಹಕನ ಸುತ್ತಾ ವಿವಿಧ ಭಾವನೆಗಳ ವೃತ್ತ |
ಅಕ್ಕಾ ನಿಮ್ಮಪ್ಪಾ ಅಂದ್ರೆ ಇಷ್ಟಗಲ ಆಕಾಶನ ??? |
ಎಲ್ಲಾ ತಿಂಡೀ ರೆಡಿನಾ ......??? |
ಪ್ರಕಾಶ್ ಹೆಗ್ಡೆ ಕೆಫೆಯ ಒಂದು ನೋಟ |
ಬಾಲಣ್ಣ ನಾನು ಈ ಸಾರಿ ಹುಷಾರ್ ಆಗಿರ್ತೇನೆ |
ಒಳಗೆ ಬನ್ನಿ ಸಾರ್ ಬೇಗ ..........ಕಾರ್ಯಕ್ರಮ ಶುರುವಾಗಲಿ.. |
ಎಲ್ಲರಿಗಿಂತ ಮೊದಲು ವೇದಿಕೆ ಏರಿದ್ದು ಈ ಅಜ್ಜಿ |
ಅಪ್ಪಾ ಅಂದ್ರೆ ಆಕಾಶ ಸರಿ ............ಆದರೆ ಅಜ್ಜಿ ಅಂದ್ರೆ ?? |
ಆಕಾಶದ ಅಪ್ಪಂದಿರ ಜೊತೆ ನೂರೆಂಟು ಸುಳ್ಳು ಹೇಳಿದ ಅಮ್ಮಂದಿರು |
ಲಾರೆಲ್ ಮತ್ತು ಹಾರ್ಡಿಯ ಕ್ಯಾಟ್ ವಾಕ್ |
ಈ ಕವಿಯ ನಗೆಯಲ್ಲಿ ಯಾವ ಕವಿತೆಯ ಹೂರಣ ಅಡಗಿದೆಯೋ ......!!!! |
ಹೂವಿನ ಚಿತ್ತಾರದ ಪಕ್ಕ ಹೂ ಮನಸಿನ ಬದರೀ ನಾಥ್ |
ನಾನು ಮಾಯವಾಗಿದ್ದ ದಿನಗಳ ಬಗ್ಗೆ ಕೇಳಬೇಡಿ ಪ್ಲೀಸ್ ಅಂದ್ರೂ ಪ್ರದೀಪ್ ರಾವ್ |
ನೋಡೀ ಸಾರ್ ಇವರು ನಿಮ್ಮ ಕ್ಯಾಮರಾಗೆ ಮುಖ ತೋರಿಸಲ್ವಂತೆ. |
ಶ್ರೀಕಾಂತ್ ನಿಮ್ಮ ಕಾಂತೆ ಅಲ್ಲಿಲ್ಲ ಈ ಕಡೆ ನೋಡೀ ಸಾರ್ |
ನಾವ್ ನಗೊದೆ ಹೀಗೆ ಸಾರ್ |
ಡೈರೆಕ್ಟರ್ ಸಾಹೇಬ್ರೆ ಯಾಕೆ ಇಷ್ಟು ಸೀರಿಯಸ್ಸು ... ಸ್ವಲ್ಪ ನಗೀ ಪ್ಲೀಸ್ |
ನಾಲ್ಕು ಜ್ಞಾನಿಗಳ ಜೊತೆ ಒಬ್ಬ ಪೆದ್ದ [ ನೀಲಿ ಟೀ ಶರ್ಟ್ ಹಾಕಿದವ ] |
ಎರಡು ನಗು ನಡುವೆ ಮುಗುಳ್ ನಗು ಪಕ್ಕದಲ್ಲಿ ಎರಡು ಸೀರಿಯಸ್ಸು |
ತಿನ್ನೋದ್ರಲ್ಲಿ ನಾನೇ ಫಾಸ್ಟು ... ಇವರು ತುಂಬಾ ಸ್ಲೋ ಗೊತ್ತ |
ಮುಷ್ಠಿ ಬಿಗೀ ಹಿಡಿದು ಮಾತಾಡೋದು ಹೀಗೆ ಗೊತ್ತ ಅಂದ್ರು ಡೈರೆಕ್ಟರ್ |
ಏನ್ರೀ ಕೈತುಂಬಾ ಇಷ್ಟೊಂದು ... ನಮಗೂ ಸ್ವಲ್ಪ ಕೊಡಿ. |
ನಕ್ಕರೆ ಅದೇ ಸ್ವರ್ಗ |
ಐದು ಮಂದಿಯ ಐದು ಬಗೆಯ ಸಂತಸದ ಭಾವನೆಗಳ ಅನಾವರಣ. |
ಮೊಬೈಲ್ ನಲ್ಲಿ ಅಳುತ್ತಾ ಮಾತಾಡೋದು ಹೀಗೆ ಗೊತ್ತ ...!! |
ಸ್ಮೈಲ್ ಪ್ಲೀಸ್ .......ಅಂಡ್ ಸ್ಟೈಲ್ ಪ್ಲೀಸ್ ........ಪ್ರಕಾಶಣ್ಣ ಫೋಟೋ ತೆಗೀತಾರೆ. |
ವಿವಿಧ ಗಾತ್ರದ ಅಕ್ಷರ ಪ್ರಿಯರು |
ಹಿಂಗೆ ಸೀರಿಯಸ್ಸಾಗಿ ನಿಂತರೆ ಫೋಟೋ ತೆಗೆಯೋದು ಹೇಗೆ ಮಾರಾಯ್ರೇ |
ಪ್ರಕಾಶಣ್ಣನ ತುಂಟ ಕ್ಯಾಮರ ಮಾಡಿದೆ ಚೇಷ್ಟೆ |
ನಿ
ಅಶೋಕ್ ಶೆಟ್ಟಿ ಯವರ ಮುಂಬೈ ನಗು |
ಪಾಪ ತುಂಟ ಮಕ್ಕಳು ಚೇಷ್ಟೆ ಮಾಡಿ ಕೊಳ್ಳಲಿ ಬಿಡಿ. |
ಚೇಷ್ಟೆ ಮಾಡಿ ಸುಸ್ತಾದ ಮುದ್ದು ಮಕ್ಕಳು. |
ಇವರಿಬ್ಬರಲ್ಲಿ ನಕ್ಕವರು ಯಾರು ??? ಹೇಳಿದ್ರೆ ಬಹುಮಾನ ಉಂಟು. |
ನಗೆಯ ಸಂಚು ನಡೆದಿದೆ ಇಲ್ಲಿ. |
ಇವರ ಹಾಡಿಗೆ ತಲೆದೂಗದವರು ಯಾರು ?? |
ನಟಿ ಭಾವನ ರವರ ಭಾವನೆ ಮೂಡಿದ್ದು ಹೀಗೆ. |
ಅಪ್ಪಾ ಇವರೆಲ್ಲಾ ಯಾರಪ್ಪ .....??? |
ಮನದಾಳದ ಭಾವನೆ ತುಂಬಿದ ಗಾಯನ ಇವರದ್ದು |
ಜ್ಞಾನದ, ಪ್ರೀತಿಯ ನಗೆಯ ದೀಪ ಬೆಳಗೋಣ ಬನ್ನಿ |
ಎರಡು ಅದ್ಭತ ಪ್ರತಿಭೆಗಳ ಸಮಾಗಮ. |
ಹಲೋ ಕಾರ್ಯಕ್ರಮ ಶುರು ಆಯ್ತು. ನಿಮ್ಮೆಲ್ಲರಿಗೂ ಸ್ವಾಗತ. |
ನಟಿ ಹಾಗು ಪತ್ರಕರ್ತರ ನಡುವೆ ಪುಸ್ತಕ ಅಪ್ಪಿದ ಪ್ರೀತಿಯ ಮಹಾ ಕವಿ |
ನಗು ನಗುತ್ತಾ ಜ್ಞಾನದ ಜ್ಯೋತಿ ಬೆಳಗೋಣ ಬನ್ನಿ |
ಕನ್ನಡ ತಾಯಿಯ ಹೆಮ್ಮೆಯ ಮಕ್ಕಳು ಇವರು. |
ನಾವು ಬಿಡುಗಡೆ ಮಾಡಿದ್ದು ಇದೆ ಪುಸ್ತಕ ಕಣ್ರೀ ಆದರೆ..........ಶೇರ್ ಮಾಡದೆ ಕೊಂಡು ಓದಿ ಪ್ಲೀಸ್ . |
ನಗು ಆರೋಗ್ಯಕ್ಕೆ ಒಳ್ಳೆಯದು |
ಜೀವನ ಗೆದ್ದ ಜೋಡಿಗೆ ಉಗೆ........ ಉಗೆ .... ಜೈ ಜೈ ಹೊ |
ಕತ್ತಲೆಯ ಜೀವನಕ್ಕೆ ಬೆಳಕು ಮೂಡಿಸಿದ ಗುರು, ಹಾಗು ಬೆಳಕು ಪಡೆದುಸಾಧನೆಯ ಶಿಖರ ಏರಿದ ಶಿಷ್ಯ |
ಭೇಷ್ ಕಣ್ರೀ ನಿಮ್ಮ ಸಾಧನೆ ಇತರರಿಗೆ ಮಾದರಿ. |
ನಿಮ್ಮಂತವರ ಸಾಧನೆ ಸಮಾಜಕ್ಕೆ ಅದ್ಭತ ಕೊಡುಗೆ ಕಣ್ರೀ |
ಒಳ್ಳೆಯ ಮನಸು ಒಳ್ಳೆಯ ಭಾವನೆ. ವ್ಯಕ್ತ ಆಗೋದು ಹೀಗೆ |
ಕನ್ನಡ ತಾಯಿಯ ಮಗಳು. |
ವಿಶ್ವೇಶ್ವರ ಭಟ್ಟರು ನೀರು ಕುಡಿಯೋದನ್ನು ನನ್ನ ಯಾವ ಚಿತ್ರಕ್ಕೆ ಬಳಸಿಕೊಳ್ಳಲಿ ಅಂತಾ ಗುರುಪ್ರಸಾದ್ ಯೋಚಿಸಿದ್ದು ಹೀಗೆ. |
ವೇದಿಕೆಯಲ್ಲಿ ಯಾವರೀತಿ ಮಾತನಾಡಲಿ ಅಂತಾ ಡೈರೆಕ್ಟರ್ ಸ್ಕೆಚ್ ಹಾಕಿದ್ದು ಹೀಗೆ. |
ಪತ್ರಕರ್ತರು ಪಕ್ಕದಲ್ಲಿದ್ದಾಗ ಪ್ರಾಣಾಯಾಮ ಮಾಡೋದು ಒಳ್ಳೆಯದು ಅಂದ್ರೂ ಗುರುಪ್ರಸಾದ್. |
ಹಳೆಯಕಾಲದ ಚಲನ ಚಿತ್ರಗಳಲ್ಲಿ ಭಾವನ ಇದ್ದಿದ್ದರೆ ಹೀಗೆ ಕಾಣ್ತಿದ್ರು |
ಹಳೆಯಕಾಲದ ಕಪ್ಪು ಬಿಳುಪಿನ ಚಲನಚಿತ್ರಗಳಲ್ಲಿ ನಟಿ ಭಾವನ ಅವರು ಇದ್ದಿದ್ರೆ ....!! |
ಹಾಡಿದೆ ಮಿಡುಕಾಡಿದೆ ಹೃದಯ ವೀಣೆಯೊಳಗೆ |
ಛಾಯಾ ಚಿತ್ತಾರ ಇಲ್ಲಿದೆ ನೋಡಿ |
ಇವರ ಹೃದಯ ತುಂಬಿ ಬಂಡ ಮಾತುಗಳು ಕಣ್ಣಲ್ಲಿ ನೀರು ಬರಿಸಿದವು. |
ಎಲ್ಲರ ಗಮನವೂ ಒಂದೇ ಕಡೆ ....!!! |
ಈ ಕನ್ನಡ ಮಣ್ಣಿನ ಮಗನ ಮಾತು ಅದ್ಭುತ ಕಣ್ರೀ |
ಈ ಬಾಟಲ್ ನಂದು ಮೇಡಂ ಅಲ್ಲೇ ಇರಲಿ ಬಿಡಿ. |
ಕನ್ನಡಿಗನ ಚಪ್ಪಾಳೆಯ ವಿಶ್ವರೂಪ ದರ್ಶನ |
ಭಾವನ ಪಕ್ಕ ಕೂರುವ ಆಸೆಗೆ ತಣ್ಣೀರ್ ಎರಚಿ ವಂಚಿಸಿದ ಮಣಿಕಾಂತ್ ಗೆ ಪ್ರೀತಿಯ ಶಾಪ ಗಳು |
"ಅಪ್ಪಾ ಅಂದ್ರೆ ಆಕಾಶ "ಪುಸ್ತಕಕ್ಕೆ ತನ್ನಪ್ಪನ ಪ್ರೀತಿಯ ಕಾಣಿಕೆ ನೀಡಿದ ಗುರುಪ್ರಸಾದ್ |
ಮಣಿಕಾಂತ್ ನಿಮಗೆ ಗುರುಪ್ರಸಾದ್ ಶಾಪ ಹಾಕ್ತಿದ್ದಾರೆ ಗೊತ್ತಾ??ಅಂದ್ರು ಭಾವನ. |
ನಮ್ಮೊಡನೆ ಈ ಹೊತ್ತು ಜಗವೆಲ್ಲಾ ಸಾಗಿರಲು. |
ನನ್ನ ಮುಂದಿನ ಹೆಜ್ಜೆಗಳಿಗೆ ನಿಮ್ಮ ಪ್ರೀತಿಯ ಹಾರೈಕೆಇರಲಿ. |
ಮೊರೆದಿದೆ ತೊರೆ ಹರಿದಿದೆ ತುಂಬಿದಂತೆ ಬಾಳು. |
ಜನಗಳ ಮನ ಅರಿತ ಭಟ್ಟರು ಆಡಿದ ಪ್ರೀತಿಯ ಮಾತುಗಳು. |
ಆತ್ಮೀಯ ಲೇಖಕನಿಗೆ ಪ್ರೀತಿಯ ಸನ್ಮಾನ. |
ಪ್ರೀತಿ ತುಂಬಿದ ಆ ಕ್ಷಣಗಳು |
ಗಿರೀಶ್ ಸೋಮಶೇಖರ್ ರಚಿಸಿದ ಪುಸ್ತಕದ ಚಿತ್ತಾರ. |
ಇವ್ರು ನಮ್ಮಮ್ಮ ಗೊತ್ತಾ ?? |
ಪ್ರೀತಿಯ ನಿರ್ದೇಶಕರನ್ನು ನಿರ್ದೇಶಿಸುತ್ತಿರುವ ಅಭಿಮಾನಿಗಳು. |
ಹೂವಿನ ಚಿತ್ತಾರಕ್ಕೆ ಹೂಮನಸಿನ ಮಕ್ಕಳ ಚಿತ್ತಾರದ ಅಲಂಕಾರ |
ಇಬ್ಬರು ತುಂಟ ಹುಡುಗರು |
ಕದ್ದು ಫೋಟೋ ತೆಗ್ಯೋದು ಹೀಗೆ ಗೊತ್ತ ?? |
ಪ್ರದೀಪ್ ಮತ್ತೆ ಯಾವಾಗ ಮಾಯ ಆಗ್ತೀರ ? |
ರೀ ಸರಿಯಾಗಿ ಫೋಟೋ ಕ್ಲಿಕ್ ಮಾಡಿಯಪ್ಪ ...!!! |
ಫೋಟೋ ಸರಿಯಾಗಿ ಬಂತಾ ಪ್ರಕಾಶಣ್ಣ. |
ದೇವರೇ ಇವರ ಜ್ಞಾನದ ಬೆಳಕು ನನ್ನ ಮೇಲೂ ಬೀಳಲಿ. |
ಪ್ರೀತಿಯ ಲೋಕಕ್ಕೆ ಆತ್ಮ ಸಾಕ್ಷಿ ಎಂಬ ನಾಯಿಯ ಕಾವಲು. |
ನಾಡಿನ ಹೆಮ್ಮೆಯ ತುಂಟ ಕವಿಯ[ಬಿ.ಆರ್.ಲಕ್ಷ್ಮಣ್ ರಾವ್ ] ಜೊತೆ ತುಂಟ ಹುಡುಗ ಸತೀಶ್ |
ಸಾಧಕರ ಜೊತೆಯಲ್ಲಿ ಮೈಸೂರಿನ ಪೆದ್ದ ಹೈದ |
ನನಗೆ ಸಿಕ್ಕ ಜೀವನದ ಅದ್ಭತ ಕೊಡುಗೆಗಳು ಇವರು [ ನೀಲಿ ಬಣ್ಣದ ಟೀ ಶರ್ಟ್ ನವನನ್ನು ಬಿಟ್ಟು ] |
ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ |
ಪ್ರೀತಿ ತುಂಬಿದ ಆನಂದಮಯ ಈ ಸಂಸಾರ |
ಮಣಿಕಾಂತ್ ಸಂಸಾರಕ್ಕೆ ಒಳ್ಳೆಯದಾಗಲಿ ಅಂದ್ರು ಗೋಪಾಲ್ ವಾಜಪೇಯಿ |
ಈಗ ಗೊತ್ತಾಯ್ತಾ "ನಮ್ಮಪ್ಪ ಅಂದ್ರೆ ಆಕಾಶ" |
ಇವಿಷ್ಟು ನನಗೆ ಸಿಕ್ಕ ಚಿತ್ರಗಳು ನಿಮಗೆ ಸಂತೋಷ ಆಗಿದ್ರೆ ಕಾಮೆಂಟ್ ಹಾಕಲು ಮರೆಯ ಬೇಡಿ.
20 ಕಾಮೆಂಟ್ಗಳು:
ಬಾಲು ಸರ್,
ಸಚಿತ್ರ ವರದಿ ಅಂತಾರಲ್ಲಾ ಅದೇನಾ ಇದು ಅಂತಾ!!!!
ಧನ್ಯವಾದ ಇಡೀ ಕಾರ್ಯಕ್ರಮವನ್ನು ನಮ್ಮೆದುರು ತೋರಿಸಿದ್ದಕ್ಕೆ...
ನನ್ ಯರ್ರಾ ಬಿರ್ರಿ ಸ್ಪೀಡಿರೋ ಇಂಟರ್ ನೆಟ್ ನಲ್ಲಿ ಕೆಳಗೆ ಬಂದು ಬಂದು ಸಾಕಾಯ್ತಪಾ ಅಷ್ಟು ಚಿತ್ರಗಳು,...
ಜೊತೆಗಿಷ್ಟು ಕಚಕುಳಿಯಿರುವ ಶೀರ್ಷಿಕೆಗಳು...
ವಂದನೆ
ವಂದನೆ
ಸಾವಿರಾ ವಂದನೆ :)
ಸೂಪರ್ ಬಾಲಣ್ಣ... ಹಾಟ್ಸ್ ಆಫ್ ಟು ಕ್ಯಾಪ್ಶನ್ ಕಿಂಗ್:)
ಅಬ್ಬಾ ಒಳ್ಳೆ ಕಾಮೆಂಟ್ರಿ ಸರ್... ಸಕ್ಕತ್ತಾಗಿವೆ ಪೋಟೋಗಳಿಗೆ ತಕ್ಕಂತ ಕಾಪ್ಶನ್.. ಖುಷಿ ಆಯ್ತು.
Thank you for sharing... karyakramakke banda haagittu...
Thank you... naanu karyakramakke banda haagittu. ...
Hello Balu Sir,
Super Photos..Sakath Captions, each scroll down was full of curiosity :)
DhanyavaadagaLu
Savitha SR
ಅದ್ಭುತ ಚಿತ್ರಗಳು ಬಾಲಣ್ಣ! ಅಬ್ಬಬ್ಬಾ ನಿಮ್ಮ ಕ್ಯಾಮೆರಾ ಕಣ್ಣುಗಳಿಂದ ಯಾರು ಅಡಗಿಕೊಳ್ಳಲು ಸಾಧ್ಯವಿಲ್ಲ... ಒಂದು ಥರ ಈ ಮಾಧ್ಯಮಗಳ "Hidden Camera" ಇದ್ದಂಗೆ... ಮುಂದಿನ ಬಾರಿ ನೀವಿದ್ದ ಕಡೆ ಹುಷಾರಾಗಿರಬೇಕು! ಹ್ಹ ಹ್ಹ ಹ್ಹಾ!
balu sir. i always waiting for your photo album after our frnds function happenes. it always best photos with comments. album gives the feelings of we also attended the function. thanks sir
balu sir. i always waiting for your photo album after our frnds function happenes. it always best photos with comments. album gives the feelings of we also attended the function. thanks sir
ಕೆಲವು ಸಿನಿಮಾಗಳು ಬಿಡುಗಡೆಯಾಗಿ ನಗೆಯ ಹುಚ್ಚೆಬ್ಬಿಸುತ್ತವೆ. ಬಾಲೂ ಸರ್ ನಿಮ್ಮ ಚಿತ್ರ ಪೆಟ್ಟಿಗೆ ಮಾಡಿದ ಕಣ್ ಚಳಕ ಅದ್ಭುತ... ನಿಮ್ಮ ಕೀಲಿಮಣೆ ನುಡಿಸಿದ ಅಕ್ಷರಗಳು ಅತ್ಯದ್ಭುತ. ಶಾಲೆಯಲ್ಲಿ ಸುಂದರ ಬರವಣಿಗೆ ಬರೆಯುತಿದ್ದ ಹುಡುಗನ ಲೇಖನಿಯನ್ನು ಕದಿಯುವ ಆಸೆ ಇಟ್ಟುಕೊಂಡಿರುವ ಹಾಗೆ ನನ್ನ ಮನಸಾಯಿತು.
ಪ್ರತಿ ಚಿತ್ರವೂ ಒಂದು ಕಥೆ ಹೇಳುತ್ತದೆ. ಪ್ರತಿ ಅಡಿ ಬರಹವು ನಗೆಯನ್ನು ಸ್ಪೋಟಿಸುತ್ತದೆ.. ನಿಮ್ಮ ಬೊಂಬಾಟ್ ಪ್ರತಿಭೆಗೆ ನನ್ನ ನಮನಗಳು!
ಎಲ್ಲವು ಸೊಗಸಾಗಿದೆ. ಅದರೊಳಗೆ ಇಷ್ಟವಾದ ಅಂದ್ರೆ ಸಕತ್ ಇಷ್ಟವಾದ ಅಡಿ ಬರಹ!
ಅಕ್ಕಾ ನಿಮ್ಮಪ್ಪಾ ಅಂದ್ರೆ ಇಷ್ಟಗಲ ಆಕಾಶನ ???
ಬಾಲು ಸಾರ್..
ಫೋಟೊಗಳನ್ನ ತುಂಬಾ ನಿರೀಕ್ಷೆ ಮಾಡಿದ್ದೆ..
ಆದ್ರೆ ಫೋಟೋಗಳು ಮಾತ್ರ ನಿರೀಕ್ಷೆಗೂ ಮೀರಿ ಅಂದವಾಗಿವೆ.
ಅವುಗಳಿಗೆ ಕೊಟ್ಟ ಅಡಿಬರಹಗಳು ಅವುಗಳ ಅಂದವನ್ನ ಮತ್ತು ಅರ್ಥವನ್ನ ಇನ್ನೂ ಹೆಚ್ಚಿಸುತ್ತವೆ.
ಫೋಟೋಗಳು ತುಂಬಾ ಖುಷಿ ಕೊಟ್ವು. ನಿಮ್ಮ ಕೈಗಳು ಕ್ಯಾಮೆರ ಹಿಡಿದಾಗ ಒಳ್ಳೆ ಕಸುಬು ಬಲ್ಲ ಕೈಗಳು ಅನ್ನೋದರಲ್ಲಿ ಅನುಮಾನವೇ ಇಲ್ಲ.
ಧನ್ಯವಾದಗಳು.
ಬಾಲಣ್ಣ...
ನಕ್ಕು ನಕ್ಕೂ ಸುಸ್ತಾಯ್ತು...
ಸಕತ್ ಫೋಟೊಗಳು... ಅದಕ್ಕೆ ಅಡಿ ಬರಹಗಳು ಸೂಪರ್... !
ಕ್ಯಾಪ್ಷನ್ ಬಾಲಣ್ಣ ಜೈ ಹೋ !!
ನನ್ನ ಜೀವಮಾನದಲ್ಲಿ ಎಲ್ಲೂ ಡ್ಯಾನ್ಸ್ ನಾನು ಮಾಡಿಯೇ ಇಲ್ಲ..
ನಿಮ್ಮ ಕ್ಯಾಮರಾ ಕಣ್ಣಿಗೆ ನನ್ನ ಸಲಾಮ್....
ನನ್ನಾಕೆಯಂತೂ ನಕ್ಕೂ ನಕ್ಕೂ .
ಆಮೇಲೆ ನನ್ನ ಮಗ...
ಇವತ್ತು ನಮ್ಮನೆಯಲ್ಲಿ ನಗುವಿನ ಹೊಳೆ.. !!
ಇಂಥಹ ಆರೋಗ್ಯ ಪೂರ್ಣ ಹಾಸ್ಯ ಎಲ್ಲರಿಗೂ ಇಷ್ಟ...
ನಿಮ್ಮ ಕ್ಯಾಮರಾ... ಅಡಿ ಬರಹಗಳ ಜುಗಲ್ ಬಂದಿಗೆ ನಮ್ಮೆಲ್ಲರ ನಮೋನ್ನಮಃ !!
ಬಾಲೂ ಸರ್ ..,ಸೂಪರ್ ..,ಸೂಪರ್ ..,ಸೂಪರ್ ..,ಸೂಪರ್ ...
1. ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗದವರಿಗೂ, ಅಂದಿನ ಎಲ್ಲವನ್ನೂ ಸಚಿತ್ರ ಸಮೇತವಾಗಿ ಸುಲಭವಾಗಿ ಅರ್ಥವಾಗುವಂತೆ ಕಟ್ಟಿ ಕೊಡುವ ಕಲೆ ನಿಮ್ಮದು.
2. ಎಲ್ಲ ಫೋಟೋಗಳ ಶೀರ್ಷಿಕೆಗಳೂ ಅತ್ಯಮೋಘ. ನಮ್ಮ ಮನಸಿನಲ್ಲಿ ಆ ಕ್ಷಣಕ್ಕೆ ಮೂಡಿದ್ದ ಭಾವಗಳನ್ನೇ ನೀವು ಒಕ್ಕಣಿಸಿದ್ದಿರೇನೋ ಎನ್ನಿಸುವಷ್ಟು ನೈಜ. ಎಂತಹ ಬಂಜರು ವ್ಯಕ್ತಿತ್ವವನ್ನೂ ಕಚಗುಳಿ ಇಟ್ಟು ನಗೆಸಬಲ್ಲ ಶೀರ್ಷಿಕೆಗಳೂ. ಅದಕೆ ಅಲ್ಲವೇ ನೀವು "ಕ್ಯಾಪ್ಷನ್ ಕಿಂಗ್!"
3. ನಿಸರ್ಗ ಛಾಯಾಗ್ರಹಣವಾಗಲಿ, ಕಾರ್ಯಕ್ರಮ ಛಾಯಾಗ್ರಹನವಾಗಲಿ ಅದರಲ್ಲಿ ನಿಮ್ಮ ಪಕ್ವತೆಯೂ ಎದ್ದು ಕಾಣುತ್ತದೆ.
(ವಿ.ಸೂ: ನಿಮ್ಮ ಕೈ ಕಳಕದಲ್ಲಿ ನನ್ನನ್ನು ತುಸು ಸಪೂರ ತೋರಿಸಲು ಆಗುತ್ತಿರಲಿಲ್ಲವೇ ಬಾಲಣ್ಣ!)
Soooper soooper sooper !!! Jai Ho Captions BalaNNa....
sooooooooooper sir :)
ಕಾರ್ಯಕ್ರಮಕ್ಕೆ ಬರಲಾಗದವರಿಗೆ ಡೈರೆಕ್ಟ್ ರಿಲೆಯನ್ನೆ ತೋರಿಸಿಬಿಟ್ಟಿತು ನಿಮ್ಮ ಪೋಟೋಗ್ರಫಿ, ಜೊತೆ ಜೊತೆಗೆ ಸುಂದರ ತಲೆಬರಹಗಳು...
ಹಾಸ್ಯ ಮಿಶ್ರಿತ, ಅರ್ಥವತ್ತಾದ ತಲೆಬರಹಗಳು ಬಹಳ ಚೆನ್ನಾಗಿವೆ ಸರ್...
ಫೋಟೋ ವರದಿ ತಂಬಾ ಚೆನ್ನಾಗಿ ಮೂಡಿಬಂದಿದೆ. ಅಲ್ಲಿಯೇ ಕುಳಿತು ಕಾರ್ಯಕ್ರಮ ನೋಡಿದ ಹಾಂಗಿತ್ತು. ಪುಸ್ತಕ ಓದಲು ಉತ್ಸುಕನಾಗಿದ್ದೇನೆ, ಯಾವಾಗ ಸಿಗತ್ತೋ ಗೊತ್ತಿಲ್ಲ...
ಪೋಟೋ ಕ್ಯಾಪ್ಷನ್ ಆಕರ್ಷಕವಾಗಿವೆ
ಬಾಲು ಸರ್,
ಅಪರೂಪಕ್ಕೆ ಬ್ಲಾಗ್ ಕಡೆಗೆ ಬಂದೆ. ಅಪ್ಪ ಅಂದ್ರೆ ಆಕಾಶ ದಷ್ಟೇ ಚಿತ್ರಗಳು ಅದಕ್ಕೆ ತಕ್ಕಂತೆ ಶೀರ್ಷಿಕೆಗಳು ಚೆನ್ನಾಗಿವೆ...
ಕಾಮೆಂಟ್ ಪೋಸ್ಟ್ ಮಾಡಿ