ರಂಗದ ಒಳ-ಹೊರಗೆ ಕಣ್ಣಾ ಮುಚ್ಚಾಲೆ ಇದೇನಿದೂ ಅಂದ್ರಾ ಹೌದು ನಮ್ಮ ಹಿರಿಯ ರಂಗ ತಜ್ಞ ರಾದ ಗೋಪಾಲ ವಾಜಪೇಯಿ ಅವರ ಅದ್ಭುತ ಪುಸ್ತಕದ ಹೆಸರು "ರಂಗದ ಒಳ-ಹೊರಗೆ" ರಂಗ ಭೂಮಿಯ ಒಳ ಹೊರಗಿನ ಚಿತ್ರಣವನ್ನು ಕನ್ನಡ ನಾಡಿನ ಜನರಿಗೆ ಅಧಿಕೃತವಾಗಿ ದಾಖಲಿಸಿ ಕೊಡುಗೆಯಾಗಿ ನೀಡಿರುವ ಪುಸ್ತಕ ಅದು . ಕಳೆದ ಭಾನುವಾರ ಅಂದರೆ ೨೩ ಆಗಸ್ಟ್ ೨೦೧೫ ರಂದು ಬಿಡುಗಡೆ ಯಾಯಿತು, ಅಲ್ಲಿನ ಸಂಭ್ರಮದ ಕ್ಷಣಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿದು ಹಾಸ್ಯ ಲೇಪನ ಮಾಡಿ ಉಣಬಡಿಸುವ ಪ್ರಯತ್ನ ಇದು
ಇದರಲ್ಲಿ ಪ್ರಕಟವಾಗಿರುವ ಚಿತ್ರಗಳಲ್ಲಿರುವ ಮಹನೀಯರು ಚಿತ್ರಗಳಿಗೆ ನೀಡಿರುವ ಶೀರ್ಷಿಕೆಯನ್ನು ಹಾಸ್ಯವಾಗಿ ಸ್ವೀಕರಿಸಲು ಕೋರಿದೆ . ನಗು ಬಂದ್ರೆ ಜೋರಾಗಿ ಮನತುಂಬಿ ನಕ್ಕು ಬಿಡೀ , ನಗು ಬರದೆ ಇದ್ರೆ ಕೋಪದಿಂದ ನಿಮ್ಮ ಎದುರಿಗಿರುವ ಕಂಪ್ಯೂಟರ್ ಸ್ಕ್ರೀನ್ ಗೆ ಒಂದು ಗುದ್ದು ಕೊಡಿ .
ಅರೆ ಬನ್ನಿ ಬನ್ನಿ ಪಯಣ ಪ್ರಾರಂಭಿಸೋಣ .. ......!
ನೋಡಿದ್ರಾ ಖುಷಿಯಾಯ್ತಾ ಇನ್ಯಾಕೆ ತಡ ಹಾಕೆಬಿಡೀ ನಿಮ್ಮ ಅನಿಸಿಕೆ ಈ ಪೋಸ್ಟಿಗೆ . ಕೋಪ ಬಂತಾ ಆದರೂ ಪರವಾಗಿಲ್ಲ ನಿಮ್ಮ ಕೋಪದ ಮಾತುಗಳನ್ನು ದಾಖಲಿಸಿಬಿಡೀ . ....... ! ರಂಗದ ಒಳ-ಹೊರಗೆ ಕಣ್ಣಾ ಮುಚ್ಚಾಲೆ ಯಲ್ಲಿ ಪಾಲ್ಗೊಂಡ ನಿಮಗೆ ಶುಭವಾಗಲಿ ನಿಮಗೆ ಹೋಗಿಬನ್ನಿ
ಇದರಲ್ಲಿ ಪ್ರಕಟವಾಗಿರುವ ಚಿತ್ರಗಳಲ್ಲಿರುವ ಮಹನೀಯರು ಚಿತ್ರಗಳಿಗೆ ನೀಡಿರುವ ಶೀರ್ಷಿಕೆಯನ್ನು ಹಾಸ್ಯವಾಗಿ ಸ್ವೀಕರಿಸಲು ಕೋರಿದೆ . ನಗು ಬಂದ್ರೆ ಜೋರಾಗಿ ಮನತುಂಬಿ ನಕ್ಕು ಬಿಡೀ , ನಗು ಬರದೆ ಇದ್ರೆ ಕೋಪದಿಂದ ನಿಮ್ಮ ಎದುರಿಗಿರುವ ಕಂಪ್ಯೂಟರ್ ಸ್ಕ್ರೀನ್ ಗೆ ಒಂದು ಗುದ್ದು ಕೊಡಿ .
ಅರೆ ಬನ್ನಿ ಬನ್ನಿ ಪಯಣ ಪ್ರಾರಂಭಿಸೋಣ .. ......!
| ಬನ್ನಿ ರಂಗ ಶಾಲೆಗೆ ಹೋಗೋಣ |
| ರಂಗದ ಒಳ -ಹೊರಗಿನ ಗುಟ್ಟು ಹಿಂಗದ ನೋಡ್ರಪ್ಪ |
| ಬನ್ನಿ ನಿಮಗೆ ಕೆಂಪು ಹಾಸಿನ ಜೊತೆಗೆ ಕೆಂಪು ಕುರ್ಚಿಗಳ ಸ್ವಾಗತ ಕೊಡ್ತೇವೆ |
| ಅಲ್ಲೇ ಆವರಣದಲ್ಲಿದ್ದ ವಿವೇಕಾನಂದರು ನಾನು ಬರ್ಲಾ ಅಂತಿದ್ರು |
| ರಂಗದ ಒಳ -ಹೊರಗೆ ತಾಳ ಮದ್ದಲೆಯೇ ಇಲ್ವಲ್ರೀ ಅಂತಾ ಹೇಳಿದ ವಿವೇಕಾನಂದರು |
| ಪ್ರಕಾಶಕರೇ ಅರಾಮಿದ್ದೀರಾ .....? |
| ರಂಗದ ಒಳಗಿನವರು ಸ್ವಾಮೀ ನಾವು |
| ರಂಗದಲ್ಲಿ ಬ್ಯಾನರ್ ನಕ್ಕಾಗ |
| ಎಲ್ಲರ ಮಾತುಗಳಿಗೆ ಜೀವ ಕೊಟ್ಟೆ ಆದ್ರೆ ನನ್ನ ಯಾರು ನೆನೆಯಲೇ ಇಲ್ಲಾ ಕಣ್ರೀ |
| ದೇಸಾಯರ ಅಂಬೋಣಕ್ಕೆ ಹಸಿರು ಕಮಾನಿನ ಸ್ವಾಗತ |
| ಸೂರ್ಯ ಶಿಖಾರಿ ಅಲ್ಲಾ, ಗೆಳೆತನದ ಶಿಖಾರಿ ನಡೆದದ ಇಲ್ಲಿ |
| ನೋಡ್ರೀ...! ಇವರು ಬರುವ ರಭಸಕ್ಕೆ ಕಾರು ನಲುಗಿಹೋಗಿದೆ |
| ಕಿರಣ್ ವಟಿ ಯವರು ಬಂದಾಗ ಟ್ರಾಫಿಕ್ ಎಲ್ಲಾ ಖಾಮೋಶ್ ಆಗೋದ್ವು |
| ಭಟ್ರು ಬಂದ್ರು ಜಾಗ ಬಿಡೀ |
| ಏನ್ರಪ್ಪಾ ಎಲ್ಲಾ ಆರಾಮ ..? |
| ನಾನಿನ್ನು ೨೮ ವರ್ಷದವಳು ಕಣ್ರೀ |
| ನನಗೆ ೨೮ ವರ್ಷ ಅಂದ್ರೆ ಯಾಕ್ರೀ ನಗ್ತೀರಾ ..? |
| ನನ್ನ ಕೈ ಬಿಡಬೇಡಿ ಭಟ್ರೇ |
| ಇನ್ನು ಯಾಕ ಬರಲಿಲ್ಲವ್ವ ಕಾಫಿ ಕೊಡವಾ ....? |
| ಮದುವೇ ಆಗ್ತೀಯ ....?ಹುಷಾರಪ್ಪಾ ಮಗು .. |
| ಹಾಥ್ ಮಿಲಾವ್ ಅಂದಾ ಜ್ಞಾನವಂತರು |
| ಒಂದು ನಿಮಿಷ ಆಮೇಲೆ ಮಾತಾಡ್ತೀನಿ ತಾಳು, ಇಲ್ಲಿ ಅಪ್ಪಿಕೋ ಚಳುವಳಿ ನಡೀತಾ ಇದೆ |
| ಸಾರ್ ಕಗ್ಗಕ್ಕೆ ರಸಧಾರೆ ಹೇಗೆ ಬರೆಯೋದು ನಂಗೂ ಹೇಳ್ಕೊಡೀ ಸಾರ್ |
| ಕಾರ್ಯಕ್ರಮ ಶುರು ಆಯ್ತಾ ..? |
| ಅಕ್ಷರ ಋಷಿಗಳ ಧ್ಯಾನ |
| ಈ ಅಕ್ಷರ ಪ್ರಪಂಚಕ್ಕೂ ಕಾಫೀ ಟೀ ಬಿಸ್ಕೆಟ್ ಗೂ ಏನೋ ಸಂಬಂಧ ರೀ |
| ನೋಡೀ ಸಾರ್ ಕಾಫಿ ಕೊಡ್ರೀ ಅಂದ್ರೆ ಸಹೋದರ ಭಟ್ರು ಕೈ ಕೊಡ್ತಾರೆ |
| ಶೀಗ್ರ ಮೇವ ಕಾಫಿ ಪ್ರಾಪ್ತಿ ರಸ್ತು ಅಂದ್ರು ರವಿ ತಿರುಮಲೈ |
| ಅವರವರ ಮುಖದ ಭಾವಕ್ಕೆ ಅವರವರ ಭಕುತಿಗೆ ಸಿಕ್ಕ ಕಾಫಿ ರುಚಿ |
| ಅಲ್ಲಾ ಕಾಫಿ ಜೊತೆ ಬಿಸ್ಕೆಟ್ ತಿನ್ನಬೇಕೋ ಅಥವಾ ಟೀ ಜೊತೆ ಬಿಸ್ಕೆಟ್ ತಿನ್ನಬೇಕೋ >>>? |
| ಹೊಸ ಬಿಸ್ಕೆಟ್ ಬಂದಿದೆ ಗೊತ್ತಾ ...? ಗುಡ್ ಮಾರ್ನಿಂಗ್ ಬಿಸ್ಕೆಟ್ ಅಂತಾ . ಹೆಸರು |
| ಆಹಾ ಏನ್ ರುಚೀ ....! ಗುಡ್ ಮಾರ್ನಿಂಗ್ ಬಿಸ್ಕೆಟ್ ತಿಂದಾಗ ಮನದಲ್ಲಿ ಹಾಡು ಹುಟ್ಟುವುದು |
| ನಮ್ಮವರು ಯಾರೂ ಕಾಣಿಸ್ತಿಲ್ಲಾ >>>? |
| ಅಕ್ಕಾ ಮೆತ್ತಗೆ ಮಾತಾಡು ಭಟ್ರು ಕೇಳಿಸ್ಕೊತಾ ಇದ್ದಾರೆ |
| ಈ ಜೀವನ ಒಂಥರಾ ಕಾಫಿ ಬಿಸ್ಕೆಟ್ ಇದ್ದಹಾಗೆ ಸಾರ್ |
| ಬೇಟೆಗಾರರ ಮುಖಾಮುಕಿ |
| ಸಾರ್ ತಾವು ಈ ಸ್ಪೆಶಲ್ ಕಾಫಿ ಕುಡಿಲೇ ಬೇಕು ಸಾರ್ |
| ಇಷ್ಟೇ ಕಾಫಿ ಸಾಕು ಕೊಡಪ್ಪ |
| ಸಾರ್ ತಮ್ಮ ಮುಂದಿನ ಕಗ್ಗ ರಸಧಾರೆ ಬಿಡುಗಡೆ ಯಾವಾಗ ...? |
| ಈ ಫೋಟೋ ತೆಗೆದವನು ಕೈಗೆ ಸಿಕ್ಲೀ ಮಾಡ್ತೀನಿ .....! |
| ಕಪ್ಪು ಬಿಳುಪಿನ ಗಡ್ದಗಳ ಜ್ಞಾನವಂತರ ಸಂಗಮ |
| ಎ ಯಾಕ್ರಯ್ಯ ನನ್ನ ಫೋಟೋ ತೆಗೇತೇರಿ ....? ಮಾತಾಡೋಕೆ ಬಿಡ್ರಪ್ಪ |
| ಫೋಟೋ ತೆಗೀಲಿ ಬಿಡೀ ದತ್ತಣ್ಣ , ನಿಮ್ಮನ್ನು ಕಂಡ್ರೆ ಇಷ್ಟಾ ಎಲ್ರಿಗೂ |
| ಲೇ ..... ಎರಡು ಬಿಸ್ಕೆಟ್ ಕೊಡೊ |
| ಎ...... ಇಲ್ಲೂ ಬಿಡೋಲ್ವಲ್ಲಯ್ಯ ನೆಮ್ದಿಯಾಗಿ ಕಾಫಿ ಬಿಸ್ಕೆಟ್ ಸೇವಿಸೋಕೆ |
| ಕಂಬಾರರೆ ನಿಂಗೆ ಜ್ಞಾನಪೀಟ ಬಂದಿದ್ದು ನನಗಂತೂ ಖುಶಿನಪ್ಪ |
| ದತ್ತಣ್ಣ ನಿಮ್ಮ ಹಾರೈಕೆ ಹೀಗೆ ಇರ್ಲಿ |
| ಗೋಪಾಲ ವಾಜಪೇಯಿ ಬಹಳ ಕಷ್ಟಾ ಪಟ್ಟು ಆಲ್ವಾ ಸಾರ್ |
| ಯಾರ್ಯಾರ್ ನಗ್ತಿಲ್ಲಾ ಅವರ ಫೋಟೋ ಈಗ ಕ್ಲಿಕ್ ಆಗುತ್ತೆ |
| ಬನ್ರೀ ಕಾರ್ಯಕ್ರಮ ಶುರು ಮಾಡೇ ಬಿಡೋಣ |
| ಅಲ್ಲಪ್ಪಾ ನನ್ನು ವೇದಿಕೆ ಹತ್ತಿಸಿ ಬಿಟ್ರಲ್ಲಾ ಉಳಿದವರು ಎಲ್ಲಿ ...? |
| ಉಳಿದವರು ಬರಲಿ ಅಲ್ಲಿವರೆಗೆ ಸ್ವಲ್ಪ ವಿಶ್ರಾಂತಿ ಪಡೆಯುವೆ |
| ಬನ್ನಿ ಗಣ್ಯರೇ ವೇದಿಕೆ ಏರಿ ಅಂದ್ರೂ ಸಹೋದರಿ ಕುಮುದವಲ್ಲಿ |
| ಕುಮುದವಲ್ಲಿಯವರು ಕರೆದ ತಕ್ಷಣ ವೇದಿಕೆಗೆ ಎಲ್ರೂ ಹಾಜರ್ |
| ಗೋಪಾಲ್ ವಾಜಪೇಯಿ ಅವರ ರಂಗ ಗೀತೆನ ಪ್ರಾರ್ಥನೆ ಮಾಡ್ತೀನಿ ಕೇಳ್ರೀ |
| ಗೋಪಾಲ ವಾಜಪೇಯಿ ಅವರ ರಂಗಗೀತೆ ಹಾಡಿದರೆ ಕೈಬೆರಳು ಸಹ ಆಟಾ ಆಡುತ್ತೆ |
| ರಂಗ ಗೀತೆಗೆ ರಾಗದೊಡನೆ ಭಾವ ತುಂಬಿದ ಆ ಸಮಯ |
| ಎಂತಾ ಚಂದಾ ಹಾಡ್ತಾರೀ ಅಂತಾ ಪ್ರಾರ್ಥನೆ ಮಾಡಿದವರನ್ನು ಗಣ್ಯರು ನೋಡ್ತಾ ಇದ್ರೂ |
| ಮನದಲ್ಲಿ ನೋವಿದ್ದರೂ ಕರ್ತವ್ಯ ಪಾಲಿಸಿದ ಪ್ರಕಾಶಕರು |
| ಸಾರ್ ಪುಸ್ತಕ ಬೇಗ ಬಿಡುಗಡೆ ಮಾಡ್ರೀ ಅಂದ ಆಹ್ವಾನಿತರು |
| ದೇವ್ರೇ ಕಾರ್ಯಕ್ರಮ ಯಶಸ್ವಿ ಯಾಗ್ಲಪ್ಪಾ |
| ಇಬ್ಬರು ಗೆಳೆಯರ ಪಿಸುಮಾತು |
| ರೀ ಗೋಪಾಲ್ ವಾಜಪೇಯಿ ನಾ ಬಿಡುಗಡೆ ಮಾಡಿದ ಮೊದಲ ಪ್ರತಿ ನೀವೇ ತಗೊಳ್ರೀ |
| ಪುಸ್ತಕ ಬಿಡುಗಡೆ ಆಯ್ತು ಒಳಗೇನಿದೆ ನೋಡೋಣ ಅಂದ್ರೂ ಅತಿಥಿಗಳು |
| ಪುಸ್ತಕ ಯಾಕೋ ಚೆನ್ನಾಗಿದೆ ಅನ್ಸುತ್ತೆ , ಈಗಲೇ ಓದೋಣ ಅನ್ನಿಸಿದೆ |
| ನನ್ನ ಭಾಷಣಕ್ಕೆ ಮೊದಲು ಸ್ವಲ್ಪ ಪುಸ್ತಕ ನೋಡ್ಕೋತೀನಿ ತಾಳಿ |
| ನನಗೆ ರಂಗದ ಗುಟ್ಟುಗಳು ಒಳಗೂ ಗೊತ್ತು ಹೊರಗೂ ಗೊತ್ತು |
| ವೇದಿಕೆಯಲ್ಲಿ ಸಾಗಿದ ಅಧ್ಯಯನ ಶಿಬಿರ |
| ರಂಗದ ಒಳಗಿನ ವಿಚಾರ ಮಾತಾಡ್ಲೋ ........? ಅಥವಾ ಹೊರಗಿನ ವಿಚಾರ ಮಾತಾಡ್ಲೋ.....? |
| ರಾಘವ ಶರ್ಮ ಯಾರಿಗೋ ಜೂಮ್ ಹಾಕಿದ ಸಮಯ |
| ಮನುಷ್ಯರ ಎರಡೂ ಕಣ್ಣುಗಳೂ ಇಂತಹ ಕ್ಯಾಮರ ಆಗಿದ್ದಿದ್ರೆ .....? |
| ಕಾರ್ಯಕ್ರಮದಲ್ಲಿ ತಲ್ಲೀನತೆಯ ಆಳಕ್ಕೆ ಇಳಿದವರು ಇವರು |
| ಒಬ್ಬರು ಹಾಸ್ಯದ ಪಂಚ್ ಮಾಸ್ಟರ್ ಇನ್ನೊಬ್ರು ಕ್ಲಿಕ್ ಮಾಸ್ಟರ್ |
| ಮಂಜು ತಿಮ್ಮನ ಹೆಸರಲ್ಲಿ ಮಂಕುತಿಮ್ಮನ ಮೀರಿಸುವ ಪಂಚ್ ಕೊಡುವವರು ಇವರು |
| ಲೇಟಾಯ್ತು ಸಧ್ಯ ಕಾರ್ಯಕ್ರಮ ಮುಗಿದಿಲ್ಲಾ |
| ದಯವಿಟ್ಟು ಪುಸ್ತಕ ಕೊಂಡು ಓದಿಯಪ್ಪಾ |
| ಸಾ ಕತ್ತು ನೋಯ್ತದೆ ಒಸಿ ಆ ಕಡೆ ಕ್ಯಾಮರ ತಿರ್ಗಿಸ್ಲಾ |
| ನಮ್ ಅಪ್ಪಾ ಸ್ಟ್ರಾಂಗು ಗುರು |
| ಏನೋ ನಮ್ ಅಪ್ಪನ ಬಗ್ಗೆ ಮೆಚ್ಚುಗೆ ಮಾತ್ ಬರ್ತಾ ಇದೆ |
| ತುಂಟ ಅಪ್ಪ ಮುದ್ದಿನ ಮಗಳು |
| ದೇವ್ರೇ ನಮ್ಮ ಅಪ್ಪಾ ಹೀಗೆ ನೆಮ್ಮದಿಯಾಗಿ ಕುಳಿತಿರಲಿ ಅಂತಾ ಮಗಳ ತಪಸ್ಸು |
| ಮೊದ್ಲು ಕಾರ್ಯಕ್ರಮ ನೋಡ್ರೀ ಅನಿಲ್ ಆಮೇಲೆ ಪುಸ್ತಕ ಓದೋರಂತೆ |
| ಯಾರಲ್ಲಿ ............... ? |
| ಇವರಿಗೆಲ್ಲಾ ಇಷ್ಟು ಚಂದದ ಬರವಣಿಗೆ ಬರೆಯಲು ಹೀಗೆ ಸಾಧ್ಯಾ ಆಯ್ತು .....? ಎನ್ನುವ ಚಿಂತನೆ ಇಲ್ಲಿ |
| ಖುಷಿಯನ್ನು ಕಣ್ಣು ಮುಚ್ಚಿ ಅನುಭವಿಸಬೇಕು ಕಣ್ರೀ |
| ಹಾಯ್ ........... !ಬಂದೆ ಬಂದೆ ತಾಳಿ |
| ನೋಡಿ ಸ್ವಾಮೀ ನಾವ್ ಕೂರೋದು ಹೀಗೆ |
| ಚಪ್ಪಾಳೆ ಹೊಡೆಯೋಕೆ ಟಾಕ್ಸ್ ಇಲ್ಲಾ ಆದರೂ ಜನ ಹೆದರ್ತಾರೆ ಚಪ್ಪಾಳೆ ಹೊಡೆಯೋಕೆ |
| ರಂಗ ಪ್ರಪಂಚದ ಒಳ ಹೊರಗಿನ ಅಪ್ಪಟ ಅಪರಂಜಿ ಇವರು |
| ಮಧ್ಯಾಹ್ನ ಆಗ್ತಾ ಆಗ್ತಾ ಮುಖಗಳಲ್ಲಿನ ನಗುಗಳು ಪಲಾಯನ ಮಾಡಿದ್ದವು |
| ವೇದಿಕೆಯಲ್ಲಿನ ಮಾತುಗಳು ಮುತ್ತಾಗಿ ಚೆಲ್ಲಿದರೆ ಕೇಳುವ ಜನರು ಹೀಗೆ ಇರ್ತಾರೆ ನೋಡಿ |
| ವೇದಿಕೆಯಲ್ಲಿ ಕುಳಿತವರ ಕಷ್ಟ ಅವರಿಗೆ ಗೊತ್ತು |
| ನಾವ್ ನಗೊಲ್ಲಾ ಖಂಡಿತಾ ನಗೊಲ್ಲಾ ರೀ |
| ನಾವ್ ನಗದೆ ಇರೋಲ್ಲಾ ....., ಖಂಡಿತಾ ನಕ್ಕೆ ನಗುತ್ತೀವಿ ರೀ |
| ಈ ಪುಸ್ತಕ ತಗೊಂಡು ಕಪಾಟಿನಲ್ಲಿ ಇಡಬ್ಯಾಡ್ರೀ ಖಂಡಿತಾ ಓದ್ರೀ |
| ಸಧ್ಯ ಇಲ್ಲಿ ಬಂದು ಖುಷಿಪಟ್ಟೆ |
| ಯಾಕೋ ತಲೆನೊಯ್ತಾಇದೆ ಆದ್ರೆ ಪ್ರೀತಿಗೆ ಬೆಲೆಕೊಟ್ಟು ಕುಳಿತ್ತಿದ್ದೇನೆ |
| ಅವರವರ ಮುಖದಲ್ಲಿ ಅರಳಿದ ಭಾವನೆಗಳು ಸೆರೆಸಿಕ್ಕ ಸಮಯ |
| ಕಾರ್ಯಕ್ರಮ ಮುಗಿದ ಮೇಲೆ ಊಟ ಎಲ್ಲಿ ಮಾಡೋದು .....! |
| ಈ ಗೋಪಾಲ ವಾಜಪೇಯಿ ಇದರಲ್ಲಾ ಅವರು ಅಸಾಧ್ಯ ರೀ |
| ನಾನಿಲ್ಲಿ ನಿರೂಪಣೆ ಅಂತಾ ಕುಳಿತುಬಿಟ್ಟೆ ಮನೆಯಲ್ಲಿ ಮಕ್ಕಳು ಏನ್ ಮಾಡ್ತಾ ಇದ್ದಾರೋ ಕಾಣೆ |
| ಈ ಸಮಯ ಆನಂದಮಯ .....! |
| ನಮ್ ಮನೆಯವರ ಬಗ್ಗೆ ಬಾಳ್ ಸಂತೋಷ ಆತು ಬಿಡ್ರೀ |
| ಹಸಿವು ಅಂತಾ ಬೇಸರ ಬೇಡ ಒಂದು ಒಳ್ಳೆ ಹಾಡು ಹೇಳ್ತೀನಿ ಕೇಳಿ |
| ಅಲ್ಲಾ ನನ್ನನ್ನು ನಿರೂಪಣೆಗೆ ನಿಲ್ಸಿ ನೀವೆಲ್ಲಾ ನಿಮ್ಮದೇ ಲೋಕದಲ್ಲಿದ್ದೀರಲ್ಲಾ ಇದು ಸರೀನಾ ..../ |
| ರಂಗದ ಒಳ - ಹೊರಗುಗಳು ರಂಗದ ಎರಡು ಕಣ್ಣುಗಳು ಇದ್ದ ಹಾಗೆ |
| ನನ್ನ ಎಂ . ಬಿ. ಏ . ಸಿಲಬಸ್ ನಲ್ಲಿ ಇವೆಲ್ಲಾ ಇರ್ಲಿಲ್ಲಾ ಯಾಕೆ ...? |
| ರಂಗದ ಒಳ ಹೊರಗಿನ ವಿಚಾರ ನಮ್ಮ ಕಾಜಾಣ ಗೆಳೆಯರಿಗೆ ಹೇಳೋಣಾ ಅಂತಾ ಅನ್ನಿಸುತ್ತೆ |
| ಅಣ್ಣಾ ಮನೆಯಲ್ಲಿ ಮದುವೇ ಆಗು ಅಂತಾ ಪೀಡಿಸ್ತಿದ್ದಾರೆ |
| ಅಣ್ಣಾ ಈ ಫೋಟೋ ಹುಡುಗಿ ಮನೆಯವರಿಗೆ ಕೊಡ್ಲಾ |
| ಅಂಕಲ್.... ಅಂಕಲ್.... ಬಾಲು ಅಂಕಲ್ ತೆಗೆದ ಫೋಟೋ ಬೇಡ, ನಮ್ಮ ಅಪ್ಪ ಒಳ್ಳೆ ಫೋಟೋ ತೆಕ್ಕೊಡ್ತಾರೆ ಬಿಡೀ |
| ಏನಮ್ಮಾ ನೀನು ಮನೆಗೆ ಹೋಗೋಕೆ ಬಿಡ್ತಾ ಇಲ್ವಲ್ಲಾ |
| ನನ್ ಗಡ್ಡದ ತಂಟೆಗೆ ಬರಬೇಡಿ ಶ್ರೀಕಾಂತ್ ಸಾರ್ |
| ನಾವ್ ಸೀರಿಯಸ್ ಆದಾಗ ಹಿಂಗೆ ಕಾಣ್ತೀವಿ ನೋಡಿ |
| ಸ್ಮೈಲಿಂಗ್ ವೆಂಕಿ ಪೀಡಿಯಾ ವಿಥ್ ಸ್ಮೈಲ್ ಕಿಂಗ್ ಶ್ರೀ ಕಾಂತ್ |
| ಅಪ್ಪಾ ಪುಸ್ತಕದ ಬಿಡುಗಡೆಯಲ್ಲಿ ಚಾಕ್ಲೆಟ್ ಕೊಡ್ತಾರಾ ....? |
| ನಾನು ರಂಗದ ಒಳಗೊ ಹೊರಗೋ ಗೊತ್ತಾಗ್ತಾ ಇಲ್ಲಾ ರೀ |
| ಎಂತಹ ಚಂದದ ಕಾರ್ಯಕ್ರಮ ಇದು |
| ಸಧ್ಯಕ್ಕೆ ನಾನು ರಂಗದ ಹೊರಗೆ ಸಾರ್ ಅಂತಾ ನಕ್ಕರು ಈ ಸಹೋದರಿ |
| ಭಟ್ರೇ ಇಲ್ಲಿ ನೋಡ್ರೀ ಅಂದ್ರು ಸಹೋದರಿ ಶಮ್ಮಿ ಸಂಜೀವ್ |
| ವೀಡಿಯೊ ಬಂಧನದಲ್ಲಿ ಗೋಪಾಲ ವಾಜಪೇಯಿ ಅವರು |
| ತಾಂತ್ರಿಕತೆಯೊಳಗೆ ರಂಗ ತಜ್ಞ |
| ಪ್ರೀತಿಯಿಂದ ಆಗಮಿಸಿದ ನಿಮಗೆಲ್ಲಾ ವಂದನೆಗಳು |
| ಯಾರ್ದಾದರೂ ಹೆಸರು ಬಿಟ್ಟು ಹೋಯ್ತಾ ....! |
| ಹೇಗೂ ಹಸಿರು ಡ್ರೆಸ್ ಹಾಕಿದ್ರೀ ಗೋಪಾಲವಾಜಪೇಯಿ ಅವರ ಹಾಡು ಈ ಹಸಿರು ಸಿರಿಯಲಿ ಅಂತಾ ಹಾಡಿದ್ದರೆ ಚೆನ್ನಿತ್ತು |
| ಕುಮುದವಲ್ಲಿಯವರು ವೇದಿಕೆಯಲ್ಲಿ ಮುಕ್ತವಾಗಿ ನಕ್ಕಾಗ ನಕ್ಕಳಾ ರಾಜಕುಮಾರಿ ಎಂಬ ಪದ ನೆನಪಾಯ್ತು |
| ನಾಗಮಂಡಲಕ್ಕೆ ಹಾಡು ಬರೆದವರ ಪ್ರತಿಬಿಂಬ |
| ಸಂತೆಯಲ್ಲಿ ನಿಂತ ಕಬೀರನಿಗೆ ಸಂಭಾಷಣೆ ಬರೆದವರೂ ಇವರೇ |
| ಇವರಿಗಿರುವ ಆಸಕ್ತಿ ನಮಗೆ ಇದ್ದಿದ್ದರೆ ...! |
| ಕಾರ್ಯಕ್ರಮದಲ್ಲಿ ನಗೆ ಅರಳಿಸಿದ ಸಹೋದರಿ |
| ಗಾಢ ಯೋಚನೆ ಮಾಡುವಾಗ ಕನ್ನಡಕ ತಲೆಯ ಮೇಲೆ ಇರಬೇಕು |
| ಈ ಹುಡುಗ ಬಹಳ ಚೂಟಿ ಕಣ್ರೀ...... ! ಅಂದ್ರೂ ಹರಿಣಿ ಅಮ್ಮಾ |
| ಆ ಹಾ ದೊಡ್ಡವರ ಆಟಕ್ಕಿಂತ ನಮ್ಮ ಆಟವೇ ಮಜಾ ಕಣ್ರೀ ಅಂದಾ ಈ ಹುಡುಗ |
| ಯೋಚಿಸುವಾಗ ನಮ್ಮ ಎಡಗೈ ಹೆಬ್ಬೆರಳನ್ನು ಬಾಯಿಯ ಬಳಿ ಇಟ್ಟುಕೊಳ್ಳಬೇಕು |
| ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯ್ತು ಕಂದಾ ನಿನ್ನ ಮೊಬೈಲ್ ಆಟಾ ಮುಗೀತಾ |
| ಈ ತುಂಟ ತಲೆಯಲ್ಲಿ ಅಸಾಧ್ಯ ಜ್ಞಾನ ಇದೆ ಸಾರ್ ಅಂದ್ರೂ ಭಟ್ರು |
| ಕಾರ್ಯಕ್ರಮ ಆಯ್ತು ಊಟಕ್ಕೆ ಎಲ್ಲಿ ಹೋಗೋಣಾ ಅಂತಾ ಸಮಾಲೋಚನೆ ಇಲ್ಲಿ |
| ಒಬ್ಬರು ಕಣ್ಣು ಮುಚ್ಚಿ ನಕ್ಕರೆ ಮತ್ತೊಬ್ಬರು ಕಣ್ಣ ಬಿಟ್ಟು ನಕ್ಕರು |
| ನಮ್ಮಿಬ್ಬರ ಟೂತ್ ಪೇಸ್ಟ್ ನಲ್ಲಿ ಸಕ್ಕರೆ ಹಾಗು ಸಿರಿಗಂಧ ಎರಡೂ ಇದೆ |
| ಅಪರೂಪದ ಸಹೋದರಿಯರು ಬಹಳ ಚೇಷ್ಟೆ ಮಂದಿ |
| ಸಾರ್ ...., ಮೋಹನ್ ಸಾರ್ ಜೊತೆ ಒಂದು ಫೋಟೋ ತೆಗೆಯಿರೀ |
| ಅಮ್ಮಾ ಕಾಜಾಣ ಗುಂಪಿಗೆ ನನ್ನನ್ನೂ ಸೇರಿಸಿಕೊಳ್ಳಿ ಪ್ಲೀಸ್ |
| ಮನದ ತುಂಬಾ ಪ್ರೀತಿ , ಮುಖದ ತುಂಬಾ ನಗು ಇದು ಇವರ ಯಶಸ್ಸಿನ ಗುಟ್ಟು |
| ಪ್ರೀತಿಯೇ ದೇವರು ಸಾರ್ ..... ! ನಿಜಾ ಸಾರ್ . ಪ್ರೀತಿ ಮಾಡೋ ಹೈಕಳು ಇದನ್ನೇ ಹೇಳಿ ಖುಶಿಪಡ್ತಾವೆ |
| ಎಲ್ಲಾ ಹೆಣ್ ಮಕ್ಳೆ ತುಂಬಿದ್ದಾರೆ ನಮ್ ಸರದಿ ಯಾವಾಗಪ್ಪಾ ಅಂತಾ ಪುಸ್ತಕಕ್ಕೆ ಸಹಿ ಪಡೆಯಲು ನಿಂತವರು ಇವರು |
| ಕರದಂಟು ಹಾಗು ಮಿಶ್ರಾ ಪೇಡ ಸೇರಿದಾಗ ಅರಳಿದ ನಗು |
| ಆಕಾಶವೇ ಬೀಳಲಿ ಮೇಲೆ .........! |
| ಪಕ್ಷಿಯೇ ಇಲ್ಲದಿದ್ದರೂ ಪಕ್ಷಿನೋಟ ಇಲ್ಲಿದೆ |
| ಜನರ ಮನಸುಗಳ ಜಾತ್ರೆ ಕರಗುವ ಸಮಯ |
| ನಮ್ಮ ಪ್ರೀತಿಯ ಸ್ಮೈಲ್ ಕಿಂಗ್ ಸ್ಟೈಲೇ ಸ್ಟೈಲು ಸಾರ್ . |
| ಪ್ರೀತಿಯ ಲೇಖಕರಿಗೆ ನಗೆಯ ಅಭಿಷೇಕ ಅಭಿಮಾನಿಗಳಿಂದ |
| ಧನ್ಯತೆಯ ಆ ಕ್ಷಣ |
| ಹಸಿವು ಮರೆಸಿದ ನಗೆಯ ಹೊನಲು |
| ನೋಡ್ರೀ ನಾನು ನಾಗೇಂದ್ರ ಶಾನ್ ಅಣ್ಣನ ಜೊತೆ ಇರೋದೇ ಅಚ್ಚರಿ ಆಲ್ವಾ ...! |
| ಅಣ್ಣಾ ಬಾಯ್ ಮುಚ್ಚಿ ಕೊಳ್ತೀನಿ ಆಟೋಗ್ರಾಫ್ ಹಾಕಿ ಪ್ಲೀಸ್ |
| ಇದು ಪುಷ್ಪಾರ್ಚನೆಯೋ ಅಥವಾ ಸಹಸ್ರ ನಾಮಾರ್ಚನೆಯೋ ಅರಿಯೆ ನಾ |
| ಜ್ಞಾನವಂತ ತುಂಟ ಮನಸುಗಳ ಜೊತೆ ಲೇಖಕರ ಲೇಖನಿಯ ಹರಿದಾಟ |
| ಅಂಕಲ್ ಅಂಕಲ್ ಚಾಕ್ಲೆಟ್ ಕೊಡ್ತೀನಿ ಬಿಟ್ಬಿಡೀ ಪ್ಲೀಸ್ ....! |
| ಶ್ರೀಕಾಂತ್ ಕುಟುಂಬಕ್ಕೆ ಮತ್ತೊಂದು ಮಗಳ ಸೇರ್ಪಡೆ |
| ಸಾರ್ ಎಮ್. ಬಿ. ಏ . ಜೊತೆ ಒಂದು ಕ್ಲಿಕ್ ಅಂದಾ ನಮ್ ಶ್ರೀಕಾಂತ್ |
| ಹಸಿವು ತುಂಬಿದ ಜೀವಗಳು ಬಲವಂತದ ನಗು ಅರಳಿಸಿದ ಸಮಯ |
13 ಕಾಮೆಂಟ್‌ಗಳು:
ಅದ್ಭುತ ಚಿತ್ರಗಳಿಗೆ ವಿಶಿಷ್ಟ ತಲೆಬರಹಗಳು.ಸೆರೆ ಸಿಕ್ಕವರು ಖುಷಿ ಪಡುವ ಜೈಲು ನಿಮ್ಮ ಕ್ಯಾಮರಾ!
ಅದ್ಭುತ ಚಿತ್ರಗಳ ಪ್ರದರ್ಶನ. ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಕುಳಿತ ಅನುಭವಕ್ಕೆ ಕಾರಣವಾದ ಈ ಚಿತ್ರಗಳು ನಿಜಕ್ಕೂ ಸ್ಮರಣೀಯ.
ಇಡೀ ಘಟನೆಯನ್ನು ಅಮರವಾಗಿಸಿದ ಸಾಹಸ ನಿಮ್ಮದು. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು, ಬಾಲಣ್ಣ, ಶುಭವಾಗಲಿ - ನಮಸ್ಕಾರ.
ಬಾಲು ಸಾರ್, ನಿಮ್ಮ ಕೈಯಲ್ಲಿ ನಿಜವಾಗಿ ಜಾದು ಅಡಗಿದೆ, ಅತ್ಯದ್ಬುತವಾಗಿ ಬಂದಿವೆ ಚಿತ್ರಗಳು, ಹ್ಯಾಟ್ಸ ಆಫ್ ಸಾರ್, ಟೂ ಗುಡ್, ಅಮೇಝಿಂಗ್
ಅಪರೂಪದ ಕಾರ್ಯಕ್ರಮದ ಅಪೂರ್ವ ಚಿತ್ರಕಾವ್ಯ!!!
ಸೊಗಸಾದ ಚಿತ್ರಗಳು, ಒಳ್ಳೆಯ ನೆನಪುಗಳನ್ನ ಹಿಡಿದಿಟ್ಟಿದ್ದೀರಿ ಬಾಲಣ್ಣ. ಕೃತಜ್ಞತೆಗಳು.
ನಿಮ್ಮ ಬರಹಗಳೂ ಸೊಗಸಾಗಿದೆ.
ಛೇ ಛೇ..ಮಿಸ್ ಮಾಡ್ಕೊಂಡೆ ಬಾಲು...ನಿಮ್ಮ ಶೂಟಿಂಗನ್ನ ಹೌದು..ಜೊತೆಗೆ ಗೋಪಾಲಣ್ಣನ ಪುಸ್ತಕ ಬಿಡುಗಡೆ ಸಂಭ್ರಮ, ಸ್ನೇಹಿತರನ್ನು ನೋಡುವ ಅವಕಾಶ...
ಅಂತೂ ನಿಮ್ಮ "ಕ್ಯಾಪ್ಷನ್ ಬಾಲಣ್ಣನ ಚಿತ್ರಾವಳಿ" ಸೂಪರ್...
ಕೆಲವು ಹೊಸಬರನ್ನು ಪರಿಚಯ ಮಾಡಿಕೊಟ್ರಿ...
ನಿಮ್ಮ ವಿಚಕ್ಷಕ ಕಣ್ಣು, ಜೀವಂತವೆನಿಸುವ ಚಿತ್ರಗಳು, ನವಿರು ಹಾಸ್ಯದ ಅಡಿಟಿಪ್ಪಣಿಗಳು, ನಿಮ್ಮ ಸ್ನೇಹಪರತೆ ಈ ಎಲ್ಲವೂ ಯಾರಿಗಾದರೂ ಇಷ್ಟವಾಗುವಂಥವೇ. ಈ ಕಾರ್ಯಕ್ರಮವನ್ನು ಕಣ್ಣಾರೆ ನೋಡದಿದ್ದವರು ಈ ಚಿತ್ರಸಂಪುಟವನ್ನು ನೋಡಿದರೆ ಸಾಕು.
ತಡವಾದರೂ ಅಡ್ಡಿಯಿಲ್ಲ, ಒಂದು ಸಂಪೂರ್ಣ ಭೋಜನವುಂಡ ಖುಷಿ ನನಗೆ ನಿಮ್ಮ ಚಿತ್ರಸಂಪುಟ ನೋಡಿದಾಗ.
ಬಾಲೂಜೀ ಇಲ್ಲಿಯ ಕೆಲವು ಆಯ್ದ ಚಿತ್ರಗಳನ್ನು ಅಮೆರಿಕದಲ್ಲಿರುವ ನನ್ನ ಮಗನಿಗೆ ಫಾರ್ವರ್ಡ್ ಮಾಡಲು ಅನುಮತಿ ಕೊಡಿ.
ನಿಮ್ಮ ನೆನಪ ಸರಣಿಯಲ್ಲಿ ಅಯಾಚಿತವಾಗಿ ನನ್ನ ಚಿತ್ರಗಳೂ ಕಂಡು ಮುದ ನೀಡಿದವು.
ಚಂದವಾಗಿ ಮನಸು ಮುದವಾಗುವ ಡಿ ಬರೆಹ, ಸಾವಿರ ಮಾತುಗಳನಾಡುವ ಚಿತ್ರಗಳು :)
ಸುಂದರ ಚಿತ್ರಗಳು
ಅದಕ್ಕೆ ಸುಂದರ ಪದಗಳ ಪೋಷಾಕು
ಶ್ರೀ ರಾಮ ಕೂಡ ಯೋಚನೆ ಮಾಡಬೇಕು ಎಲ್ಲಿಂದ ಬಾಣ ಬಿಡಲಿ ಎಂದು
ಆದರೆ ನಿಮ್ಮ ಕ್ಯಾಮೆರ ಅದು ಎಲ್ಲಿರುತ್ತೋ ಹೇಗೆ ಕಾಯುತ್ತೋ ದೇವರೇ ಬಲ್ಲ
ಅದ್ಭುತ ಚಿತ್ರಗಳು ಅದ್ಭುತ ಸಮಯೋಚಿತ ಚಿತ್ರಗಳು ಅದಕ್ಕೆ ಒಪ್ಪುವ ಅಡಿ ಟಿಪ್ಪಣಿಗಳು
ಸೂಪರ್ ಬಾಲೂ ಸರ್
ಅಯ್ಯೋ ಎಷ್ಟೊಂದು ಜನ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿದ್ದರು..ನಾನು ಮಿಸ್ ಮಾಡಿಕೊಂಡೆ...ಛೇ ನನ್ನ ಫೋಟೊಗ್ರಫಿ ಕೆಲಸವೇ...ಫೋಟೊಗಳ ಸಹಜ ಅಭಿವ್ಯಕ್ತಿ ತುಂಬಾ ಚೆನ್ನಾಗಿದೆ. ಬಾಲು ಸರ್ ಇಡೀ ಕಾರ್ಯಕ್ರಮವನ್ನು ಫೋಟೊ ಮೂಲಕ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು..
good photos nice captions sirji enjoyed/
ಮನೆಯಲ್ಲಿ ಅದೇ ಹೊತ್ತಿನಲ್ಲಿ ಸತ್ಯನಾರಾಯಣ ಪೂಜೆ ಇತ್ತು ಬಾಲಣ್ಣ, ಅದಕ್ಕೇ ಚಕ್ಕರ್ ಹೊಡೀಬೇಕಾಯಿತು.
ಒಳ್ಳೊಳ್ಳೆಯ ನೈಜ ಛಾಯಾಚಿತ್ರ ಸರಣಿ ಬಲು ಇಷ್ಟವಾಯಿತು.
ಯಾವುದಕ್ಕೆ ಮಾರ್ಕ್ಸ್ ಹಾಕೋಣ ಯಾವುದಕ್ಕೆ ಬಿಡೋಣ! ತಾವೇ ಹೇಳ್ಬೇಕಪ್ಪ...
ಬಾಲಣ್ಣ, ಕಾರ್ಯಕ್ರಮದ ನೈಜ ವರದಿ. ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ