ಭಾನುವಾರ, ಜುಲೈ 16, 2017

ಪದಾರ್ಥ ಚಿಂತಾಮಣಿ ಪದಕಮ್ಮಟ-೨೦೧೭ ರಲ್ಲಿ ಪದಗಳ ಹಾಗು ಹಾಸ್ಯದ ಕಣ್ಣಾಮುಚ್ಚಾಲೆ ಭಾಗ ..1


ಪದಾರ್ಥ ಚಿಂತಾಮಣಿ  ಗುಂಪು  ತನ್ನದೇ ಆದ  ಧ್ಯೇಯಗಳನ್ನು ಇಟ್ಟುಕೊಂಡು  ಕನ್ನಡ ನುಡಿಯ ಸೇವೆ ಮಾಡುತ್ತಾ ಇದೆ , ಇದರಲ್ಲಿ  ಕನ್ನಡ ಮನಸುಗಳ  ಕನಸು ಮಿಳಿತಗೊಂಡು ಪ್ರತೀವರ್ಷ "ಪದಕಮ್ಮಟ " ಹಬ್ಬವನ್ನು ಆಚರಿಸುತ್ತಾ  , ಕನ್ನಡ ತಾಯಿಯ ಸೇವೆಯನ್ನು ವಿಶಿಷ್ಟವಾಗಿ  ಮಾಡಲಾಗುತ್ತಿದೆ,   ದಿನಾಂಖ  ೧೮  ಜೂನ್   ೨೦೧೭ ರಂದೂ ಸಹ  ಪದ ಕಮ್ಮಟ ವನ್ನು ಅರ್ಥ ಪೂರ್ಣವಾಗಿ  ಆಚರಿಸಿಕೊಂಡ  ಹೆಮ್ಮೆ ಪದಾರ್ಥ ಚಿಂತಾಮಣಿ  ತಂಡದ್ದು. ಕಾರ್ಯಕ್ರಮದ  ಬಗ್ಗೆ ಈಗಾಗಲೇ  ಬಹಳಷ್ಟು ಜನರು ವರದಿ ನೀಡಿದ್ದಾರೆ. ಆದರೆ ಆ ದಿನದ ಪದ ಕಮ್ಮಟ ವನ್ನು  ಹಾಸ್ಯದ ಕಣ್ಣಿಂದ  ನೋಡಿದಾಗ   ಆಗುವ ಅನುಭವವೇ ಬೇರೆ.  ಕೆಲವೊಂದು  ಆಘಾತಗಳು  ನಡುವೆ ಬಂದ ಕಾರಣ   ಚಿತ್ರಗಳನ್ನು ಹಂಚಿಕೊಳ್ಳಲು ಆಗಿರಲಿಲ್ಲ , ಬನ್ನಿ  ಚಿತ್ರಗಳನ್ನು  ನೋಡುತ್ತಾ  ಹಾಸ್ಯದ  ರುಚಿಯನ್ನು  ಸವಿಯೋಣ,  ಚಿತ್ರಗಳನ್ನು ನೋಡಿ ನಗು ಬಂದ್ರೆ  ನಿಮ್ಮ ಅನಿಸಿಕೆ ಹಾಕಿ,  ಒಂದು ವೇಳೆ  ಕೋಪ ಬಂದ್ರೆ  ನಿಮ್ಮ ಮುಂದಿನ  ಕಂಪ್ಯೂಟರ್  ಪರದೆಯ ಮೇಲಿನ  ನನ್ನ ಚಿತ್ರಗಳಿಗೆ ಗುದ್ದುಕೊಡೀ ........ ಓ.ಕೆ.  ನಾ..   ಬನ್ನಿ ಬನ್ನಿ ನಿಮಗೆ ಸ್ವಾಗತ [ ಮತ್ತೊಂದು ವಿಚಾರ  ದಯವಿಟ್ಟು ಆತ್ಮೀಯರು  ಈ ಚಿತ್ರಗಳಿಗೆ  ನೀಡಿರುವ ಹಾಸ್ಯ ಶೀರ್ಷಿಕೆಗಳನ್ನು   ಹಾಸ್ಯವಾಗಿ ಸ್ವೀಕರಿಸಿ ನಕ್ಕು ಬಿಡೀ  ವಯಕ್ತಿಕವಾಗಿ  ತಗೊಳ್ಳಬೇಡಿ  ಎಂಬ ವಿನಂತಿ ]  { ಇಲ್ಲಿರುವ ಚಿತ್ರಗಳು ಮೊದಲನೇ ಕಂತಿನವು, }  

   
ಕನ್ನಡ ಪ್ರಿಯ ಮನಸುಗಳಿಗೆ  ಗುಬ್ಬಿಗಳಿಂದ  ಆಹ್ವಾನ [ ಚಿತ್ರ ಕೃಪೆ  ಪದಾರ್ಥ ಚಿಂತಾಮಣಿ ಪುಟ]
ಆಹ್ವಾನ ಪತ್ರಿಕೆ  ಓದುವ ಮೊದಲು ನಿಮ್ಮ ಕಣ್ಣನ್ನು  ಪರೀಕ್ಷಿಸಿಕೊಳ್ಳಿ   ಪತ್ರಿಕೆಯ  ಒಂದು ಭಾಗ ಸ್ವಲ್ಪ ಮಸುಕಾಗಿದೆ 


ಆಹ್ವಾನ ಪತ್ರಿಕೆ  ಒಳ  ನೋಟದ  ಅನುಭವ ಪಡೆಯಿರಿ 



ಮೊದಲು ತಯಾರಿ ನಂತರ  ಉಪಹಾರ  ಅಂದ್ರೂ  ಸ್ವಾಗತ  ಕಟ್ಟೆಯ  ಸದಸ್ಯರು 

ಬೆಳಿಗ್ಗೆ  ಖಾಲಿ ಹೊಟ್ಟೆಲಿ  ನಾವುಗಳು ಪೋಸ್ ಕೊಟ್ಟಿದ್ದು ಹೀಗೆ 

ಕನ್ನಡ   ಅಕ್ಷರಗಳನ್ನು  ನೆನೆಯುತ್ತಾ   ಮತ್ತೊಂದು ಪೋಸು 

ಅಣ್ಣಾ  ನಮ್ ಎಜಮಾನ್ರು   ಎಲ್ಲಾದ್ರೂ  ಕಂಡ್ರಾ .....?

ವಿಘ್ನ ನಿವಾರಿಸೂ ಅಂತಾ ಪೂಜೆ ಮಾಡ್ತೀರ  ಆದ್ರೆ  ನೈವೆಧ್ಯಾ ಮಾತ್ರಾ  ಕ್ಯಾಬಿನೈ   ಅಂತಿದ್ದ ಗಣಪ . 


 ಶ್!!!    ಯಾರ್ಗೂ   ಹೇಳ್ಬೇಡಿ.....    ನೈವೆದ್ಯಾ   ಕ್ಯಾಬಿನೈ  ಮಾಡಿದ್ದು ನಾನೇ 


ನಮ್ ಹೆಂಡ್ರು  ನಂಬಗ್ಗೆ   ಏನಾದ್ರೂ  ಕೆಳುದ್ರಾ ....?


ಬೊಂಬೆ  ಆಡ್ಸೋನು   ..... ಮ್ಯಾಲೆ  ನಿಂತವ್ನೆ  ... ಅಂತಾ ಹಾಡ್ತಿತ್ತೂ   ಈ ಪುಟ್ಟ ತಂಗಿ 


ಅಣ್ಣಾ  ಈ ಫೋಟೋ ಮಧುಗೆ ಕೊಡ್ತೀನಿ 


ಅಣ್ಣಾ   ನನ್ನ ಭವಿಷ್ಯದ ಕಥೆ ಏನಣ್ಣ...?  ಹಿಂಗೆ ಬ್ರಹ್ಮಚಾರಿ ಆಗಿರ್ಲಾ..?


ಉಪಹಾರದ  ಸಂಶೋಧನೆ  ಜೊತೆಗೆ  ಸೇವನೆ 



ಕೆಂಪಾದರೋ  ಇಬ್ರೂ ಕೆಂಪಾದರೋ




ಭಾಷೆ ಶುದ್ದವಿರಬೇಕೂ.............!  ಅದೇ ರೀತಿ ಕಾಫಿಯೂ ಸಹ  ರುಚಿ ರುಚಿಯಾಗಿರಬೇಕು 

ಪದಕಮ್ಮಟಕ್ಕೆ ಮೊದಲು  ಉಪಹಾರದ ಕಮ್ಮಟ   ನಡೆಸಿದರು    ಸಹೋದರಿಯರು 


ತಿಂಡಿ  ಹೇಗಿತ್ತು ಅಂದ್ರಾ..?  ಪ್ಲೇಟ್ ಹಿಡಿದವರ ಮುಖ ನೋಡಿ ನೀವೇ ತಿಳ್ಕೊಳಿ ............!



ಉಪಹಾರ ಸೇವನೆಯ ಜುಗಲ್ಬಂದಿ  ಇಲ್ಲಿ 



ಯಜಮಾನ್ರು  ಜೊತೆಯಲ್ಲಿ ಇಲ್ಲದ  ಉಪಹಾರ   ರುಚಿ ಇಲ್ಲಾ  ಅಂದ್ರೂ ಉಷಾ ಉಮೇಶ್ 



 ಉಷಾ ಅವರ ಉವಾಚ :-  ಅಯ್ಯೋ ಭಯ ಪಡಬೇಡ ಪುಟ್ಟ............!  ನೋಡು ನಾನು ಮದುವೆ  ಆಗಿ ಎಷ್ಟೋ ವರ್ಷ ಆಗಿದ್ರೂ ನಗ್ತಾ ನಗ್ತಾ  ಖುಷಿಯಾಗಿಲ್ವಾ 


ಅಂತೂ ನಮ್ ಹೆಂಡ್ರು ಕೈಗೆ  ಸಿಕ್ಬಿಟ್ಟೆ   ಸಾರ್  


 
  ಸಾರ್  ರುಚಿಯಾದ ಕಾಫಿ  ಕುಡೀತಾ  ಒಳ್ಳೆ ಕನ್ನಡ ಮಾತಾಡೋಕೆ ಖುಷಿಯಾಗುತ್ತೆ ಆಲ್ವಾ....?



ಮೊದಲು  ಜೊತೆಯಾಗಿ  ಕಂಡ   ವಾರ್  ವಾರ್ ಗಿತ್ತಿಯರು  .........!



ತಿಂಡಿ ತಿನ್ನುತ್ತಾ  ಮಾಮೂಲಿ   ವಾರ್  ನಿಂತು ಹೋಗಿ ಪ್ರೀತಿ  ಉಕ್ಕಿ  ಬಂದು   ನಗುತ್ತಾ  ಮಾತನಾಡಿದ  ನಗುವಿನ ವಾರ್ ಗಿತ್ತಿಯರಾದ್ರು 

ರುಚಿಯನ್ನು   ಆಸ್ವಾದಿಸಿದ  ಕ್ಷಣಗಳು .  ಟೀಸ್ಟ್  ಟೆಸ್ಟಿಂಗ್  ೧೨೩  ...೧೨೩ 




ಬೆಳಿಗ್ಗೆ  ಮೆನುನಾ ...?  ಇನ್ನೂ ಗೊತ್ತಿಲ್ಲಾ  ರೀ 


ನೋಡೀ  ಈ ತಿಂಡೀ  ತಯಾರಿಕೆಗೂ  ಭಾಷೆಯಲ್ಲಿನ  ಪದಗಳ  ತಯಾರಿಕೆಗೂ  ವೆತ್ಯಾಸ  ಏನೂ ಇಲ್ಲಾ .... !



ಒಳ್ಳೆಯ ಸಾಹಿತ್ಯ  ರುಚಿಯಾದ ಅಡಿಗೆ ಇದ್ದಂತೆ ಆಲ್ವಾ ಸಾರ್ ...?




ನನ್ನ ಮಿತ್ರ  ಅಪಾರ ಜ್ಞಾನಿ ಅಂದ್ರೂ ಅಜಾದ್  ಸಾರ್ , { ಮಿತ್ರರ  ಮುಖದ ಹೋಲಿಕೆ ಮಾತ್ರ  ಮಿಸ್ಟರ್  ಬೀನ್   ತರಹ ಇದ್ದದ್ದು ಸುಳ್ಳಲ್ಲ }




ಪದ ಕಮ್ಮಟ  ದಲ್ಲಿ  ಸದ್ದಿಲ್ಲದೇ ದುಡಿದವರ ಮುಖದಲ್ಲಿನ  ಮಂದಹಾಸ 






ಪದ ಕಮ್ಮಟ ದಲ್ಲಿ ಗೆಳೆತನ ಬಯಸಿದವರು 




ವಾರ್  ವಾರ್ ಗಿತ್ತಿಯರ  ಆಪ್ತ ಸಮಾಲೋಚನೆ  ಕಾಫಿ ತಯಾರಿಕೆ ಬಗ್ಗೆ 




ನೆಮ್ಮದಿಯಾಗಿ  ತಿಂಡಿ  ತಿನ್ನೋಕೆ ಬಿಡೀ  ಸಾರ್..........  ಫೋಟೋ ಆಮೇಲೆ ಕ್ಲಿಕ್ ಮಾಡಿ 



 ನೋಡ್ರೀ  ಭಾಷೆ  ಬೆಳವಣಿಗೆಯಲ್ಲಿ  ಹೆಣ್ಣು ಮಕ್ಕಳ  ಕೊಡುಗೆ ಸಹ ಇದೆ ಗೊತ್ತಾ .....?

ಕನ್ನಡ ಪ್ರೀತಿ ಬೆನ್ನಿನ ಮೇಲೆ ....!   ಆದ್ರೆ  ಎದೆಯ ಒಳಗೂ ಪ್ರೀತಿ ಇದೆ ಕಣ್ರೀ 


ಭಾಷೆಯ ಜೊತೆ  ಪರಸ್ಪರ  ಪ್ರೀತಿಯೂ ಸೇರಿದರೆ ಅದು ನಮ್ಮೆಲ್ಲರ ಭಾಷೆಯಾಗುತ್ತೆ 





"ಮೂರುನಗುಗಳ ಅನಾವರಣ "     {ಬಲದಿಂದ ಎಡಕ್ಕೆ  ಒಂದು ಹುಸಿನಗು, ಒಂದು ಪೂರ್ಣ ನಗು ಮತ್ತೊಂದು  ಭಾವನೆಯ ನಗು}  




ಅಣ್ಣಾ   ಗುಂಡನಿಗೆ  ಮದುವೇ  ಮಾಡ್ಬೌದಾ............?.ಅಂತಾ ಕೇಳಿದ ಮಹೇಶ್ [ ದೇ.ಒ.ಮಾ]



ಗಾಂಧೀ ಭವನದಲ್ಲಿ ಕಂಡ ಮೂವರು  ತುಂಟ  ಗೆಳೆಯರು 



ಸ್ವಲ್ಪಾನೆ ತಿನ್ನಬೇಕೂ ಸಾರ್  ಇಲ್ಲದಿದ್ರೆ   ಕಾರ್ಯಕ್ರಮದಲ್ಲಿ ನಿದ್ದೆ ಬರುತ್ತೆ  ಎನ್ನುತ್ತಾ ಕಡಿಮೆ ತಿಂದವರು ಇವರು



ಪ್ರಾರಂಭದ ಉಪಹಾರವೇ ಇಷ್ಟು ರುಚಿಯಾಗಿದೆ ಇನ್ನು ಕಾರ್ಯಕ್ರಮವೂ ಸಹ  ಹೀಗೆ ಖಂಡಿತಾ  ರುಚಿಯಾಗಿರುತ್ತೆ   ಸಾರ್ ......!



ನಮ್ಮ ನಡಿಗೆ ಕಾರ್ಯಕ್ರಮದೆಡೆಗೆ 



 ಕನ್ನಡ ಭಾಷೆಯ  ಸೊಗಡು  ಕಂಪು , ನಾಗೇಂದ್ರ ಹಾಕಿರುವ ಶರ್ಟ್ ಬಣ್ಣ   ಕೆಂಪು     ಹೋಲಿಕೆ    ಚೆನ್ನಾಗಿದೆ  ಹೊಂದುತ್ತೆ ಆಲ್ವಾ ...?

ನಮ್ಮಿಬ್ಬರ  ಕಾಫಿ ಹಾಗು ಹೃದಯದಲ್ಲಿ ಸಿಹಿ ಇದೆ  


ಜ್ಞಾನ ಬೆಳಗಿಸುವ ಕನ್ನಡ  ಮುಖಗಳು   ನಡೆಸಿದ ಸಲ್ಲಾಪ 


ನೋಡಿ ಹೀಗೆಲ್ಲಾ  ಫೋಟೋ ತೆಗೆದು   ನಮ್ಮನ್ನು ತೆಲಗು ವಾಲ್ಳೂ   ಅನ್ನಬೇಡಿ ಮತ್ತೆ 


"ಮನ ವಂಚಿ  ವಾಲ್ಳು ......"  ಸಾರ್   ಎರಡೂ ಭಾಷೆಯಲ್ಲೂ  ಸಲ್ಲುತ್ತೇವೆ   ಹೃದಯದಲ್ಲಿ ಕನ್ನಡವಿದೆ 



ಮೊದಲ ಮಹಾ ಯುದ್ದದ ಅಂತಿಮ ಕ್ಷಣಗಳು 

  ಸಭಾಂಗಣದ ಕುರ್ಚಿಗಳು ಕಾಯುತ್ತಿವೆ ನೋಡಿದಿರಾ ..........? 



ಎಲ್ಲಾ ಸಿದ್ದತೆ ಆಯ್ತಾ    ಶುರು ಮಾಡೋಣ .....?



ಅಕ್ಕಾ  ಎಂತ ಚಂದದ ಹುಡುಗಿ  ಹುದುಕಿಕೊಟ್ರೀ   ಅಕ್ಕಾ ........  ಬಹಳ  ಬಹಳ   ಥ್ಯಾಂಕ್ಸ್  ನಿಮಗೆ 



ನೀವೆಲ್ಲಾ   ಹೇಗೆ ಕಾರ್ಯಕ್ರಮ ಮಾಡ್ತೀರ ಅನ್ನೋ ಕುತೂಹಲ ನನಗೆ ....!



ಕಾರ್ಯಕ್ರಮ ಶುರು ಮಾಡೋಕೆ  ಹೇಳೋಣವ.... ಸಾರ್ 


ಕಾರ್ಯಕ್ರಮ ಶುರು ಮಾಡಿ  .....


ನಾವೂ ರೆಡಿ ಸಾರ್ 




ಪದಾರ್ಥ ಚಿಂತಾಮಣಿ ಅಂದ್ರೆ .......!



ನೆನಪಿನ  ಇತಿಹಾಸದ ಮೆಲುಕು 

ನೆನಪಿನ  ಆ ಕ್ಷಣಗಳು



ಜ್ಞಾನವಂತ ಪದ ಚಿಂತಕರು 


 ತುಂಟ ಪದ ಹಿತ  ಚಿಂತಕರು 


ಇನ್ನೂ  ಯಾಕ ಶುರು  ಆಗ್ಲಿಲ್ಲ   ಪದ ಕಮ್ಮಟ   ...........[ ಇನ್ನೂ ಯಾಕ ಬರಲಿಲ್ಲವಾ ಹುಬ್ಬಳಿಯವ್ವಾ  ಆನೋ ಹಾಗೆ ] 


ಕಾರ್ಯಕ್ರಮ ಅಂತೂ ಶುರು ಆಗ್ತಾ ಇಲ್ಲಾ  ಒಂದು ಸಣ್ಣ ನಿದ್ದೆ ತೆಗೆಯೋಣ ....!







ಎದ್ದೇಳಿ  ಕನ್ನಡಿಗ ಗೆಳೆಯರೇ ಕಾರ್ಯಕ್ರಮ ಶುರು ಮಾಡೋಣ .....!


  ಎದಾಯ್ತು   ಕಾರ್ಯಕ್ರಮ ಶುರು ಮಾಡಿ ಮತ್ತೆ .......







ನಾವೂ ಸಿದ್ದ ರೀ ...............  ಕಾರ್ಯಕ್ರಮ ಶುರು ಮಾಡಿ ಬೇಗ 
ಸೀತಾ ಸ್ವಯಂವರ ದಲ್ಲಿ ಶ್ರೀ ರಾಮ ಶಿವ ಧನಸ್ಸು ಮುರಿದದ್ದು ಹೀಗೆ  ಸಾರ್ 



ನಗುವಿನಲ್ಲಿ ಕನ್ನಡದ  ಕಂಪು    ಹರಡಬಲ್ಲೆ ನಾನು 


ಸ್ವಾಗತ ಕಟ್ಟೆಯಲ್ಲಿ  ಗಡಿಬಿಡಿ




 ನಾವು ಪ್ರೀತಿಯಿಂದ   ಸ್ವಾಗತ ಕಟ್ಟೆಯಲ್ಲಿ ಕೊಡೊ ಪುಸ್ತಕಗಳನ್ನು  ಓದ್ರಪ್ಪಾ ......!



ಪದ ಕಮ್ಮಟಕ್ಕೆ ಬಂದಿದ್ದ  ಬಗ್ಗೆ ನಮ್ಮ  ಗುರುತನ್ನು ಉಳಿಸಿ ಹೋಗೋದು ಹೀಗೆ 





ಪದ ಕಮ್ಮಟದ ಪ್ರೀತಿಯ  ಉಡುಗೊರೆ  




ಉಡುಗೊರೆಯನ್ನು  ಸವಿ ಸವಿ  ನೆನಪಾಗಿ ಕಾಪಾಡಿಕೊಳ್ಳಿ  ಹಾಲು ಪೇಪರ್  ತರುವ ಚೀಲವಾಗಿ ಬೇಡ 



ಏನ್ ಮಾಡ್ಲಿ ಚಿನ್ನಾ  ಮರ್ತೋಯ್ತು ........  ಇವತ್ತು ತಗೊಳೋಣ  ಬಿಡೂ .....




ಸಂಗೀತ ಸರಸ್ವತಿ ನಕ್ಕಾಗ 


 ವೆಂಕಿ ಪೀಡಿಯಾ  ಇನ್  ಆಕ್ಷನ್  





ವೆಂಕಿ ಪೀಡಿಯಾ  ಆಕ್ಷನ್ ಕಂಡು  ಅಚ್ಚರಿಗೊಂಡ  ಗೆಳೆಯರು 



ವೆಂಕಿ ಸಾರ್  ಫೋಟೋ ಚೆನ್ನಾಗ್ ತೆಗೀತಾರೆ ..........




ಅವಿವಾಹಿತ  ಉಪ್ಪು ತಿಂದು ನೀರು ಕುಡಿದ ಸಮಯ  {ಸಾಕ್ಷಿ ವೆಂಕಿಪಿಡಿಯ   ಸಾರ್ }




ಹುಡುಗ ಕುಡಿದದ್ದು  ನೀರು ಅನ್ನೋದನ್ನು  ಸಾಕ್ಷಿಕರಿಸಲು  ವೆಂಕಿ ಸಾರ್  ಕ್ಲಿಕ್ ಅನ್ಸಿದ್ರು 



 ತುಂಟ ಜೆ.ಪಿ .ಗಂಭೀರವಾಗಿ  ನಿಂತಿರುವ  ಅಪರೂಪದ ದೃಶ್ಯ  



ಕಾರ್ಯಕ್ರಮಕ್ಕೆ ಸಜ್ಜಾಗಿರುವೆ  ಎಂದು ಕೈ ಬೀಸಿ ಕರೆದ ವೇದಿಕೆ 






ಗೆಳೆಯರೇ ಹರಟೆ ಸಾಕು ಬನ್ನಿ ಕಾರ್ಯಕ್ರಮ ಶುರುಮಾಡೋಣ  ಅಂದ್ರು ಜೆ.ಬಿ. ಆರ್. ಸಾರ್ . 
ನೋಡಿದ್ರಾ    ಮೊದಲ ಕಂತಿನ   ಚಿತ್ರಗಳನ್ನು  ಖುಷಿಯಾಯ್ತಾ ...?? ಇನ್ಯಾಕೆ ತಡಾ  ಹಾಕೆಬಿಡೀ ನಿಮ್ಮ ಅನಿಸಿಕೆ  ಅತ್ಲಾಗೆ.    ಮೊದಲ ಕಂತಿನ ಚಿತ್ರಗಳು  ಕಾರ್ಯಕ್ರಮ ಶುರು ಆಗೋವರೆಗೆ ನಡೆದ ಘಟನೆಗಳ  ಚಿತ್ರಗಳಾಗಿದ್ದು,  ಕಾರ್ಯಕ್ರಮ ಶುರು ಆದ ನಂತರ ತೆಗೆದ ಮತ್ತಷ್ಟು ಚಿತ್ರಗಳು  ಮುಂದಿನ ಕಂತುಗಳಲ್ಲಿ ಬರುತ್ತವೆ, ಅಲ್ಲಿಯ ವರೆಗೆ ನಗ್ತಾ   ನಗ್ತಾ ಕಾಯ್ತಾ ಇರೀ.  

14 ಕಾಮೆಂಟ್‌ಗಳು:

Unknown ಹೇಳಿದರು...

ಸರ್...ನಿಮ್ಮ ಶ್ರದ್ಧಾಪೂರ್ವಕ ಕೆಲಸವನ್ನು ನೋಡಿ ಮೂಕವಿಸ್ಮಿತನಾದೆ.ನಿಮ್ಮ ಅಸಾಧಾರಣ ಪ್ರತಿಭೆ ಎಲ್ಲರಿಗೂ ಮಾದರಿ.ಬಹಳ ಸೊಗಸಾಗಿದೆ ಚಿತ್ರಗುಚ್ಛ ಹಾಗೂ ಆಕರ್ಷಕವಾದ ಶೀರ್ಷಿಕೆಗಳು.

ಸವಿಗನಸು ಹೇಳಿದರು...

Anna. ..sogasaagide. ..sundara chitragalu. ...adakke takka caption. ..namo namaha. ..

ಸವಿಗನಸು ಹೇಳಿದರು...

Anna. ..sogasaagide. ..sundara chitragalu. ...adakke takka caption. ..namo namaha. ..

bilimugilu ಹೇಳಿದರು...

Aaha.. ondakkinthondu .... Was waiting for these balu sir....

Suresh ಹೇಳಿದರು...

Bombaat Balanna!����

Mala H N ಹೇಳಿದರು...

ತುಂಬಾ ರಸವತ್ತಾದ ನಿರೂಪಣೆ. ತುಂಬಾ ಇಷ್ಟವಾಯ್ತು.

Badarinath Palavalli ಹೇಳಿದರು...

ನಾನು ಮದ್ಯಸ್ಥ.
ಅನಿವಾರ್ಯ ಕಾರಣಗಳಿಂದ ಹೀಗೆ ಬಂದು ಹಾಗೆ ಹೊರಟುಬಿಟ್ಟೆ. ಮನೆ ಕಾರ್ಯಕ್ರಮದಲ್ಲಿ ನಾನು ಗೈರು ಹಾಜರಾದದ್ದು ನನಗೇ ಸಹಿಸಲಾರದ ಸಂಗತಿ.
ಚಿತ್ರಗಳು ಅಮೋಘ ಬಾಲಣ್ಣ.
ಸೂಪರ್.

ಜಲನಯನ ಹೇಳಿದರು...

ಬಾಲಣ್ಣ...ಬ್ಲಾಗ್ ಗೆ ಒಂದು ಹೊಸಜೀವ ಅದೂ ನನ್ನ ಕಡೆಯಿಂದ ಪ್ರಾರಂಭಿಸೋಕೆ...ವಾಹ್... ಒಳ್ಳೆಯ ಪೀಠಿಕೆಯ ಕಂತು... ಬ್ಲಾಗ್ ಈ ಮೂಲಕವಾದರೂ ಎಲ್ಲರನ್ನೂ ಆಕರ್ಷಿಸಲಿ.

venki ಹೇಳಿದರು...

baalu sir !! hhhhhhhhhhhahaha, too good and ossum capture, amazing timing and angle, hats off !! reallllllyyyyy wonderful pics

ಅನಾಮಧೇಯ ಹೇಳಿದರು...

ನಾನು ಯಾವ ಪಟದಲ್ಲೂ ಇಲ್ಲಾ....
ನಾನ್ಯಾರು ಕಂಡುಹಿಡಿಯಿರಿ ಬಾಲಣ್ಣ, ಆಝಾದ್, ಗುಂಡ, ರೂಪ, ದೇಒಮಾ...

ಅನಾಮಧೇಯ ಹೇಳಿದರು...

Clue
ನಗಮ್ಮ ನೀವೂ ಹೇಳಬಹುದು

ಮನಸು ಹೇಳಿದರು...

ವಾಹ್... ಸೂಪರ್ ಬಾಲಣ್ಣ ... ಕೊನೆಗೂ ಗಂಡಹೆಂಡ್ರು ನಾ ಸೇರಿಸಿ ಪುಣ್ಯ ಕಟ್ಟಿಕೊಂಡ್ರಿ ಹಿಹಿಹಿ

ಮನಸು ಹೇಳಿದರು...

ಅನಾಮಧೇಯರೇ ನೀವು ನಮ್ಮ ಮೀಸೆ ಮಾಮ ಕಿರಣ್ ಅವರು ಅಂತಾ ಗೊತ್ತು...

Vinayak Bhagwat ಹೇಳಿದರು...

ಸೆರೆ ಹಿಡಿದ ಚಿತ್ರಗಳಿಗಿಂತ ವಿಭಿನ್ನವಾದ ನೀವು ಕೊಟ್ಟ ಶೀರ್ಷಿಕೆ ಚನ್ನಾಗಿದೆ. ಬಾಲಣ್ಣ.