ನಮಸ್ಕಾರ "ನಿಮ್ಮೊಳಗೊಬ್ಬ ಬಾಲು" ವಿನ ಹೊಸ ಬ್ಲಾಗಾವತಾರ !!! ಹೌದು ನನ್ನ ಇಷ್ಟದ ಛಾಯಾಚಿತ್ರಗಳಿಗಾಗಿ ಒಂದು ಬ್ಲಾಗಿನ ಅವಶ್ಯಕತೆ ಕಂಡುಬಂದಿದ್ದು.ಗೆಳೆಯ "ಇಟ್ಟಿಗೆ ಸಿಮೆಂಟು" ಬ್ಲಾಗಿನ ಪ್ರಕಾಶ್ ಹೆಗ್ಡೆ ಅವರ ಸಲಹೆ ಇಂದ . ಕ್ಯಾಮರ ಬದಲಾವಣೆ ಆಯ್ತು ನಿಮ್ಮದೇ ಛಾಯಾಚಿತ್ರಗಳ ಬಗ್ಗೆ ಒಂದು ಬ್ಲಾಗ್ ಮಾಡಿ ಅಂದ ಮಾತುಗಳು ಈ ಬ್ಲಾಗಿಗೆ ಸ್ಫೂರ್ತಿ.ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಛಾಯಾ ಚಿತ್ರಗಳು ಅಂದ್ರೆ ನನಗೆ ಜ್ಞಾಪಕಕ್ಕೆ ಬರೋದು "ಗಣಪತಿ" , ಎಂತಹ ದೇವರೂ ಅಂತೀರಾ !!!! ತುಂಬಾ ಫೋಟೋಗ್ರಾಫರ್ ಫ್ರೆಂಡ್ಲಿ , ಕಲಾವಿದರ ಕಲ್ಪನೆಗೆ ಮೆರುಗು ನೀಡುವ ಗಣಪತಿ ಎಲ್ಲಾ ದೇವರನ್ನು ಹಿಂದೆ ಹಾಕಿಬಿಡುತ್ತಾನೆ. ಯಾವುದೇ ಪ್ರಾಕಾರದ ಕಲಾವಿದನನ್ನು, ಕೇಳಿನೋಡಿ ಅವರ ಕಲೆಯಲ್ಲಿ ಗಣಪತಿ ಅರಳಿಸುವಾಗ ಅವರದೇ ಸ್ವಂತಿಕೆ ಮೂಡಿಸಿ ಸಂತಸ ಪಡುತ್ತಾರೆ. ಬನ್ನಿ ಕೆಲವು ಗಣಪತಿಯ ಅಪರೂಪದ ಚಿತ್ರಗಳನ್ನು ನೋಡೋಣ.
ಗಣಪತಿ ಫೋಟೋ ನೋಡಿದ್ದೀರಾ !!! ಗಣಪತಿಯ ಮ್ಯಾಜಿಕ್ಕೆ ಹಾಗೆ ಎಲ್ಲರನ್ನೂ ಸೆಳೆದುಬಿಡುತ್ತದೆ . ಕಲಾವಿದರ ಡಿಲೈಟ್, ಪ್ರೇಮಿಗಳ ಆಪದ್ಭಾಂದವ, ಎಲ್ಲರ ಮನದ ಹೀರೋ ನಮ್ಮ ಗಣಪ ನಿಮಗೆ ಒಳ್ಳೆಯದು ಮಾಡಲಿ. ಮುಂದಿನ ಸಂಚಿಕೆ ಇಂದ ನನ್ನ ಛಾಯಾಚಿತ್ರಗಳ "ಕಣ್ಣಾ ಮುಚ್ಚಾಲೆ " ನಿಮ್ಮ ಮಡಿಲಿಗೆ ಹಾಕುತ್ತೇನೆ. ಪ್ರೀತಿ ಇಂದ ಹಾರೈಸಿ .
8 ಕಾಮೆಂಟ್ಗಳು:
ಬಾಲು ಸರ್...
ನಿಮ್ಮ ಫೋಟೊ ಬ್ಲಾಗೆ ಸ್ವಾಗತ .. ಸುಸ್ವಾಗತ....!!
ಚಂದದ ಚಂದದ ಫೋಟೊಗಳನ್ನು ಹಾಕಿ...
ನೋಡುವ.. ಆಸ್ವಾದಿಸುವ ಖುಷಿ ನಮ್ಮದು....
ಜೈ ಹೋ !!
ಬಾಲು ಸರ್...
ಫೋಟೋ ಬ್ಲಾಗ್ ಲೋಕಕ್ಕೆ ಸ್ವಾಗತ....
ಪೇಜ್ ಲೇಔಟ್ ಕಪ್ಪು ಅಥವಾ ಕ೦ದು ಬಣ್ಣವಿದ್ದರೆ ಚಿತ್ರಗಳು ಇನ್ನಷ್ಟು ಅ೦ದಕಾಣುತ್ತದೆ ಅನ್ನೋದು ನನ್ನ ಅನಿಸಿಕೆ..
neeve tegeda photogale??? chennaagide.
Welcome Sir......
super sir...
ಬಾಲು ಸರ್...
All the best.
Ravi
ಸೂಪರ್ ನಲ್ಲಿ ಸೂಪರ್ ಆಗಿದೆ ಬಾಲು ಅವರೇ. ನಿಮ್ಮ ಫೋಟೋಗಳನ್ನು ನೋಡುತ್ತಿದ್ದರೆ ನನಗೆ ಅತೀವ ಆನಂದವಾಗುತ್ತಿದೆ.
photo channagide
ಕಾಮೆಂಟ್ ಪೋಸ್ಟ್ ಮಾಡಿ