ಶುಕ್ರವಾರ, ಮೇ 20, 2011

ಹಸಿರ ಗಿರಿಯ ಮಡಿಲಲ್ಲಿ . ನಿಸರ್ಗದ ಕಣ್ಣಾ ಮುಚ್ಚಾಲೆ !!!!


ಕರೀಘಟ್ಟದ  ದೇವಾಲಯ ದರ್ಶನ
ಕರೀ ಘಟ್ಟ ಬೆಟ್ಟ ಶ್ರೀ ರಂಗ ಪಟ್ಟಣದ ಸಮೀಪ ಇರುವ ಒಂದು ಸುಂದರ ತಾಣ. ಇಲ್ಲಿನ ಸೊಬಗನ್ನು  ಚಿತ್ರೀಕರಿಸಲು  ಹಲವಾರು ಭಾಷೆಯ ದಿಗ್ಗಜರು ಹಾತೊರೆಯುತ್ತಾರೆ. ಇಲ್ಲಿ ಕನ್ನಡ, ತಮಿಳು , ತೆಲಗು, ಹಿಂದಿ, ಇಂಗ್ಲೀಶ್, ಫ್ರೆಂಚ್, ಭಾಷೆಯ ಹಲವಾರು ಚಲನ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ  , ರಾಜ್ಕುಮಾರ್ , ಅಮಿತಾಬ್, ರಜನಿಕಾಂತ್ ,ಸೇರಿದಂತೆ ಬಹಳಷ್ಟು ಸಿನಿಮಾ ತಾರೆಯರುಈ ತಾಣದಲ್ಲಿ   ಅಭಿನಯಿಸಿ, ನರ್ತಿಸಿದ್ದಾರೆ ಬನ್ನಿ ನಿಮಗಾಗಿ ಕೆಲವು ದೃಶ್ಯಗಳು ಇಲ್ಲಿವೆ. ನೋಡಿ ಆನಂದಿಸಿ.
ಹಸಿರ ಸಿರಿಯ ಸೊಬಗು. 
ಪರಿಸರಕ್ಕೆ ನನ್ನ ಕೊಡುಗೆ ಇದು ಎನ್ನುತ್ತಿದೆಈ  ಗಿಡ!!!
ಯಾವ ಕಲಾವಿದನ ಕಲ್ಪನೆ ಇದು!!
ಹಸಿರ ಬೆಟ್ಟದಿ ಸಾಗಿತ್ತು  ಅಂಕು ಡೊಂಕಿನ ಹಾದಿ!!!!
ಈ ಬೆಟ್ಟದಿಂದ ಆ ಬೆಟ್ಟದ ನೋಟ !!![ ಪಾಂಡವಪುರದ ಕುಂತಿ ಬೆಟ್ಟ ]
 ಇದು ಬೆಟ್ಟ ಅದು ಬೆಟ್ಟವೋ ....!!! ಕುಂತಿ ಬೆಟ್ಟ [ಪಾಂಡವ ಪುರ]

    ಹಸಿರ ಮಡಿಲಲ್ಲಿ ಮೆರೆದಿರುವ ಈ ಬೆಟ್ಟಗಳು ಪ್ರತಿದಿನ ಸಾವಿರಾರು ಕಣ್ಣುಗಳಿಗೆ  ಹಬ್ಬ ಉಂಟು ಮಾಡಿವೆ . ನಿಮ್ಮ ಕಣ್ಣುಗಳನ್ನೂ ಇಲ್ಲಿಗೆ ಕರೆತನ್ನಿ. ಒಮ್ಮೆ!!!

2 ಕಾಮೆಂಟ್‌ಗಳು:

Sandeep K B ಹೇಳಿದರು...

Cool Snaps Sir......

AntharangadaMaathugalu ಹೇಳಿದರು...

ಕರಿಘಟ್ಟದ ವಿಷ್ಯ ಗೊತ್ತಿರಲಿಲ್ಲ ಬಾಲು ಅವರೆ... ಸುಂದರ ಚಿತ್ರಗಳು. ಸಾಧ್ಯವಾದಾಗ ಹೋಗಬೇಕು. ಧನ್ಯವಾದಗಳು..


ಶ್ಯಾಮಲ